2023ರ ಬರಗಾಲದ ಬಳಿಕ, ಇತ್ತೀಚೆಗೆ ಮಳೆಯಾಗುತ್ತಿದೆ. ಜಲಾಶಯಗಳಿಗೆ ನೀರು ಬರುತ್ತಿದೆ. ಆದರೆ, ನಾರಾಯಣಪೂರ ಜಲಾಶಯದ ಎಡ ಮತ್ತ ಬಲದಂಡ ಕಾಲುವೆಗಳು ಶಿಥಿಲಗೊಂಡಿದ್ದು, ಅವುಗಳನ್ನು ದುರಸ್ತಿ ಮಾಡಬೇಕಿದೆ. ಜಲಾಶಯದಿಂದ ನಾಲೆಗಳಿಗೆ ನೀರನ್ನು ಹರಿಸುವ ಡಿಸ್ಟ್ರುಬ್ಯೂಟರಗಳು, ಲ್ಯಾಟರಲ್‌ಗಳಲ್ಲಿ ಹೂಳು ತುಂಬಿಕೊಂಡಿದೆ. ಹೂಳು ತೆಗೆಯುವ ಕೆಲಸವೂ ಆಗಿಲ್ಲ. ಇದೆಲ್ಲದರಿಂದ ರೈತರಿಗೆ ಸರಿಯಾಗಿ ನೀರು ದೊರೆಯದೆ ಸಮಸ್ಯೆ ಎದುರಾಗುತ್ತಿದೆ ಎಂದು ರೈತ ಸಂಘದ ಕಾರ್ಯಕರ್ತರು ಆರೋಪಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಪ್ರತಿಭಟನೆ ನಡೆಸಿದ ರೈತಸಂಘದ ಕಾರ್ಯಕರ್ತರು ನಾರಾಯಣಪುರ ಜಲಾಶಯದ ಮುಖ್ಯ ಅಭಿಯಂತರರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಕಾಲುವೆಗಳಲ್ಲಿ ಸಿಲ್ವ, ಜಂಗಲ್ ಕಟಿಂಗ್ ಕೆಲಸಗಳು ನಡೆದಿಲ್ಲ. ಈ ಬಗ್ಗೆ ರೈತರು ಅಧಿಕಾರಿಗಳನ್ನು ಕೇಳಿದರ, ಇಲ್ಲಸಲ್ಲದ ನೆಪ ಹೇಳುತ್ತಾರೆ. ಈ ಕಲಸಗಳಿಗೆ ಹಣವಿಲ್ಲವೆಂದು ಸಬೂಬು ಹೇಳುತ್ತಾರೆ. ಕಳೆದ ವರ್ಷ ಕೂಡ ನಾಲೆಯಲ್ಲಿ ಯಾವುದೇ ಕೆಲಸ ನಡೆದಿಲ್ಲ. ಜಂಗಲ್ ಕಟಿಂಗ್ ಕೆಲಸ ಮಾಡದೆ, ನೀರು ಹರಿಸಿದ್ದಾರೆ. ಈಗಾಗಲೇ ಈ ಕಾಲುವೆಗಳ ಕೊನೆಯ ಬಾಗದ ರೈತರಿಗೆ ನೀರು ದೊರೆಯದೆ, ವಂಚಿತರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರತಿ ವರ್ಷ ಎರಡು ಬಾರಿ ಸಲಹಾ ಸಮಿತಿ ಮೀಟಿಂಗ್ ಕರೆಯುತ್ತಾರೆ. ಸಭೆಯಲ್ಲೂ ಕೂಡಾ ತಾರತಮ್ಯ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಕರೆಯದೆ ತಮ್ಮ ಮನಸಿಗೆ ಬಂದಂತೆ ದಿನಾಂಕ ನಿಗದಿ ಮಾಡುತ್ತಾರೆ. ಇದರಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಇಬ್ಬರೇ ಇರುತ್ತಾರೆ. ಸಭೆಗೆ ರೈತರನ್ನೂ ಕರೆಯಬೇಕು. ಅವರ ಸಲಹೆಗಳನ್ನು ಪಡೆಯಬೇಕು ಎಂದರೂ ನಿರ್ಲಕ್ಷ್ಯಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿಹಣಮಗೌಡ, ಗದ್ದೆಪ್ಪ ನಾಗನೇನಾಗಳ, ಜಂಗಿನಗಾದ್ದೆ, ಸಾಹೇಬಗೌಡ ಮದಲಿಂಗನಾಳ, ಹಣಮಂತ್ರಾಯ ಚಂದಲಾಪೂರ, ತಿಪ್ಪಣ್ಣ ಜಂಪಾ ಕಕ್ಕೇರಿ, ನಿಂಗನಗೌಡ ಗೂಳಬಾಳ, ಅವಿನಾಶ ನಾಯಕ, ಅಮರೇಶ ಕಾಮನಕೇರಿ, ,ಮಲ್ಲಣ್ಣ ಹಲಬಾವಿ, ಗದ್ದೆಪ್ಪ, ತಿಪಣ್ಣ, ಸಾಹೇಬ್ ಗೌಡ, ಹಣಮೇಗೌಡ ಇನ್ನಿತರರು ಇದ್ದರು.