ಜಮೀನು ವಿವಾದದಲ್ಲಿ ತಮ್ಮನನ್ನು ಅಣ್ಣನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹುಣಸಗಿ ತಾಲ್ಲೂಕಿನ ಬೊಮ್ಮನಗುಡ್ಡಾ ತಾಂಡಾದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬೊಮ್ಮನಗುಡ್ಡಾ ತಾಂಡಾದ ಶಿವಪ್ಪಾ ಜಾಧವ್ (55) ಮೃತರು. ಚಂದಪ್ಪಾ ಜಾಧವ್ ಕೊಲೆಗೈದ ಆರೋಪಿಯಾಗಿದ್ದಾನೆ.
ಕೊಲೆಯಾದ ಶಿವಪ್ಪಾ ಜಾಧವ್ ಅವರು ಮೂವರು ಅಣ್ಣತಮ್ಮಂದಿಯರು ಇದ್ದಾರೆ, ಮೂವರ ನಡುವೆ ಮೂರು ಎಕರೆ ಜಮೀನು ಇದೆ. ಜಮೀನು ಹಂಚಿಕೆ ಸಂಬಂಧ ಮಂಗಳವಾರ ಗ್ರಾಮ ಸಮೀಪದ ರಾಜನಕೋಳೂರ ಗ್ರಾಮದ ನಾಡ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅಣ್ಣ ತಮ್ಮಂದಿಯರ ನಡುವೆ ವಾಗ್ವಾದ ನಡೆದಿದ್ದು, ಅಣ್ಣ ಚಂದಪ್ಪಾ ಜಾಧವ್ ತಮ್ಮ ಶಿವಪ್ಪಾನನ್ನು ಕಲ್ಲಿನಿಂದ ತಲೆ, ಮುಖಕ್ಕೆ ಬಲವಾಗಿ ಹೊಡೆದು ಗಾಯಗೊಳಿಸಿದ್ದನು.
ಗಂಭೀರ ಗಾಯಗೊಂಡ ಶಿವಪ್ಪಾ ಜಾಧವ್‌ನನ್ನು ಸ್ಥಳೀಯರು ರಾಜನಕೋಳೂರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಣಸಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಯಾದಗಿರಿ | ಸಾಲದ ಹೊರೆ : ವಿಷ ಸೇವಿಸಿ ರೈತ ಆತ್ಮಹತ್ಯೆ
ಈ ಸಂಬಂಧ ಕೋಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಚಂದಪ್ಪ ಜಾಧವ್‌ನನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.