ಹುಣಸಗಿ ತಾಲ್ಲೂಕಿನ ಅಗತೀರ್ಥ ಗ್ರಾಮದ ಯುವಕನೊಬ್ಬ ಕೃಷ್ಣ ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿ ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದ್ದು, ಇಂದು ಬೆಳಿಗ್ಗೆ ಶವ ಪತ್ತೆಯಾಗಿದೆ.
ಅಗತೀರ್ಥ ಗ್ರಾಮದ ವಿರೇಶ ಸೋಮಯ್ಯ ಹಿರೇಮಠ (20) ಮೃತ ಯುವಕ. ಬುಧವಾರ ಮಧ್ಯಾಹ್ನ ಕಾಲುವೆಯಲ್ಲಿ ಈಜಾಡಲು ಹೋದಾಗ ಈ ಘಟನೆ ನಡೆದಿದೆ.
ಸ್ಥಳಕ್ಕೆ ಸುರಪುರದ ಅಗ್ನಿ ಶಾಮಕದಳ ಸಿಬ್ಬಂದಿ ನಿನ್ನೆ ಯುವಕನ ಪತ್ತೆಗಾಗಿ ಸಂಜೆವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಶವ ಪತ್ತೆಯಾಗಲಿಲ್ಲ. ಇಂದು ಬೆಳಿಗ್ಗೆ ಅಗ್ನಿ ಗ್ರಾಮದ ಸಮೀಪ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.