ಯಾದಗಿರಿ | ಕೊಟಗೇರಾ ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್‌, ಪ್ರಾಂಶುಪಾಲರ ಅಮಾನತಿಗೆ ದಸಂಸ ಆಗ್ರಹ

Date:

Advertisements

ಯಾದಗಿರಿ ಜಿಲ್ಲೆ ಗುರುಮಿಠಕಲ್ ತಾಲೂಕಿನ ಕೊಂಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮೋಟನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಜವಳಿ ಪಾರ್ಕ್‌) ಬಂದಳ್ಳಿ ಹಾಗೂ ಕೊಟಗೇರಾ ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್‌, ಪ್ರಾಂಶುಪಾಲರ ಅಮಾನತಿಗೆ ಆಗ್ರಹಿಸಿ ದಸಂಸ ಯಾದಗಿರಿ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಮುಖಾಂತರ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹಾದೇವಪ್ಪನವರಿಗೆ ಮನವಿ ಸಲ್ಲಿಸಿದರು.

“ಗುರುಮಿಠಕಲ್ ಪಟ್ಟಣದ ಕೊಂಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರು, ವಾರ್ಡನ್ ಜೋಡೆತ್ತು ಇದ್ದಂತೆ. ಇಬ್ಬರೂ ಮಾತನಾಡಿಕೊಂಡು ಒಬ್ಬರು ಯಾದಗಿರಿ ಮೀಟಿಂಗ್‌ಗೆ ಬಂದಿದ್ದೇನೆ, ಒಬ್ಬರು ಮನೆಗೆ ಊಟಕ್ಕೆ ಹೋಗಿದ್ದೇನೆಂದು ಕಾಲಹರಣ ಮಾಡಿ ಸರಿಯಾಗಿ ಕೆಲಸ ಮಾಡದೇ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಅದೇ ವಸತಿ ಶಾಲೆಯಲ್ಲಿ ನೆಲೆಯೂರಿ ಮಕ್ಕಳಿಗೆ ಯಾವ ವಿಚಾರದಲ್ಲಿಯೂ ಸ್ಪಂದನೆ ಮಾಡದೆ ಮಕ್ಕಳನ್ನು ಬೆದರಿಸುತ್ತಿದ್ದು, ಶಾಲೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಹಿಂದೆ ದೊಡ್ಡ ಸಮಸ್ಯೆಯಾಗಿ ಗೊಂದಲ ಸೃಷ್ಟಿಯಾಗಿತ್ತು. ರಾಜಕೀಯ ಆಟವಾಡಿ ಮುಚ್ಚಿಹಾಕಿದ್ದಾರೆ. ವಿದ್ಯಾರ್ಥಿಗಳು ತಮ್ಮ ವಸತಿ ಶಾಲೆಯ ಸಮಸ್ಯೆಯನ್ನು ಪೋಷಕರಿಗೆ ತಿಳಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ರಾತ್ರಿ ಓದಬೇಕು, ಬರೆಯಬೇಕೆಂದರೆ ವಸತಿನಿಲಯದಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲ. ಕತ್ತಲಲ್ಲಿಯೇ ಮಲಗುತ್ತೆವೆಂದು ವಿದ್ಯಾರ್ಥಿಗಳು ಹೇಳುತ್ತಾರೆ. ಹಾಗಾಗಿ ವಾರ್ಡನ್ ಮತ್ತು ಪ್ರಾಂಶುಪಾಲರನ್ನು ಕೂಡಲೇ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.

Advertisements

“ಯಾದಗಿರಿ ನಗರದ ಕೊಟಗೇರಾ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರು ಸುಮಾರು ವರ್ಷಗಳಿಂದ ಗಂಜ್ ಏರಿಯಾದ ಖಾಸಗಿ ಕಟ್ಟಡದಲ್ಲಿ ವಸತಿ ಶಾಲೆ ನಡೆಸುತ್ತಿದರು. ಆಗ ವಸತಿ ಶಾಲೆಯಲ್ಲಿ ಶೌಚಾಲಯದ ಕೊರತೆ ಇತ್ತು. ಸುಮಾರು ಬಾರಿ ವಿದ್ಯಾರ್ಥಿಗಳು ಸಮಸ್ಯೆ ಕುರಿತು ತಿಳಿಸಿದರೂ ಹೊಸ ಕಟ್ಟಡದ ನೆಪಹೇಳಿ, ಮಕ್ಕಳನ್ನು ಬೆದರಿಸುತ್ತಾರೆ. ವಿದ್ಯಾರ್ಥಿಗಳಿಂದ ಯಾವುದೇ ಹೇಳಿಕೆ ಹೊರಬರದಂತೆ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ʼನಮ್ಮ ಜೊತೆಗೆ ಶಾಸಕರು ಇದ್ದಾರೆ, ಯಾರು ಏನೂ ಮಾಡಲು ಸಾಧ್ಯವಿಲ್ಲʼವೆಂದು ದರ್ಪದಿಂದ ಮಾತನಾಡುತ್ತಾರೆ” ಎಂದರು.

“ಕೊಟಗೇರಾದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭವಾದಾಗಿನಿಂದ ಈವರೆಗೆ ಹೊಸ ಕಟ್ಟಡ ವಸತಿ ನಿಲಯದಲ್ಲಿ ವಾರ್ಡನ್‌ ಆಗಲಿ, ಪ್ರಾಂಶುಪಾಲರಾಗಲೀ ಯಾವುದೇ ಸಿಬ್ಬಂಸಿ ವಾಸ ಇರುವುದಿಲ್ಲ. ಹಾಗಾದರೆ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಪ್ರಾಂಶುಪಾಲರು, ವಾರ್ಡನ್‌ಗಳು ವಸತಿ ಶಾಲೆಯಲ್ಲಿರುವ ಆದೇಶ ಇದ್ದರೂ ಅದನ್ನು ಕೇರ್ ಮಾಡದೇ ಬೇಜವಾಬ್ದಾರಿತನದಿಂದ ವರ್ತಿಸುತಿದ್ದು, ವಿದ್ಯಾರ್ಥಿಗಳ ಗೋಳಾಟ ಕೇಳುವವರಿಲ್ಲ” ಎಂದು ಆರೋಪಿಸಿದರು.

“ಮೋಟ್ನಳ್ಳಿ ವಸತಿ ಶಾಲೆ(ಜವಳಿ ಪಾರ್ಕ್‌) ಸ್ಥಿತಿಯನ್ನೂ ಕೇಳುವವರಿಲ್ಲ. ವಾರ್ಡನ್ ಬಂದಾಗಿನಿಂದ ಅಲ್ಲಿಯ ವಸತಿಯಲ್ಲಿ ವಾಸವಾಗಿಲ್ಲ. ಜೇವರ್ಗಿ ಪಟ್ಟಣದ ನೆಲೋಗಿಯಲ್ಲಿ ಆತನ ಕುಟುಂಬ ಇರುವುದರಿಂದ ಅವರು ಅಲ್ಲೆ ಹೆಚ್ಚು ವಾಸವಾಗಿರುತ್ತಾರೆ.
ತಾನೊಬ್ಬ ವಾರ್ಡನ್‌ ಅನೋದನ್ನೇ ಮರೆತು ಬಿಟ್ಟಿದ್ದಾನೆ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರದೆ ಸರಿಯಾದ ಸಮಯಕ್ಕೆ ಊಟ ಉಪಹಾರ ನೀಡುತ್ತಿಲ್ಲ. ನೀರಿನ ವ್ಯವಸ್ಥೆ, ಶೌಚಾಲಯ ಸ್ವಚ್ಛವಾಗಿಲ್ಲ, ಮಕ್ಕಳು ಶೌಚಾಲಯಕ್ಕೆ ಹೊರಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಶಾಲೆಯ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದಿದ್ದು ಅಡುಗೆ ಕೋಣೆ, ನಿಲಯದ ಕೊಣೆ ದುರಸ್ತಿಯಲ್ಲಿವೆ, ದುರಸ್ತಿ ಆಗದೇ ಹಾಗೆ ಉಳಿದಿದ್ದು, ಇದಕ್ಕೆ ಬಂದ ಹಣ ಬಾಕಿ ಇದೆ. ಇಂತಹ ಅಧಿಕಾರಿಗಳಿಂದ ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಕೊನೆಯ ಸ್ಥಾನದಲ್ಲಿದೆ” ಎಂದು ಆರೋಪಿಸಿದರು.

“ಉನ್ನತ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ವಸತಿ ನಿಲಯಗಳ ಕಡೆ ಗಮನಹರಿಸಬೇಕು. ಸಂಬಂಧಪಟ್ಟ ಈ 3 ವಸತಿ ಶಾಲಗಳನ್ನು ವರ್ಗಾವಣೆ ಮಾಡಿ, ಪ್ರಾಂಶುಪಾಲರು ಹಾಗೂ ವಾರ್ಡನ್‌ಗಳನ್ನು ಕಲ್ಯಾಣ ಕರ್ನಾಟಕ ಭಾಗದಿಂದ ವಜಾಗೊಸಬೇಕು. ಇಂತಹ ಬೇಜವಾಬ್ದಾರಿ ಸಿಬ್ಬಂದಿಗಳಿಂದ ಬಡ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಕೂಡಲೇ ಇಂತಹವರನ್ನು ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ವರದಿ ಫಲಶೃತಿ | ಕಲಬುರಗಿ : ನಾವದಗಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು

ದಸಂಸ ಯಾದಗಿರಿ ಜಿಲ್ಲಾ ಸಾಂಚಾಲಕ ಶಿವಪುತ್ರ ಜವಳಿ, ಸಂಘಟನಾ ಸಂಚಾಲಕ ಚಂದಪ್ಪ ಮುನಿಯಪ್ಪನೋರ ಸೇರಿದಂತೆ ಶಿವಕುಮಾರ ತಳವಾರ, ಮರೆಪ್ಪೆ ಕ್ರಾಂತಿ, ಚಂದ್ರಶೇಖರ ಬಲಶೆಟ್ಟಿಹಾಳ, ಶಿವಲಿಂಗ ಹಸನಾಪೂರ, ಭೀಮಣ್ಣ ನಾಟೇಕಾರ, ಬಾಲರಾಜ ಖಾನಾಪುರ, ವೀರಭದ್ರಪ್ಪ ತಳವಾರಗೇರಾ, ರಂಗಸ್ವಾಮಿ, ತಾಯಪ್ಪ ಭಂಡಾರಿ, ಮಲ್ಲಿಕಾರ್ಜುನ ಹೊಸಮನಿ, ಎಂ ಪಟೇಲ್, ಮಲ್ಲಿಕಾರ್ಜುನ ಪೂಜಾರಿ, ತಿಪ್ಪಣ್ಣ ಶೆಳ್ಳಿಗಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X