ಡಾ.ಬಾಬು ಜಗಜೀವನರಾಂ ಭವನದಲ್ಲಿ ಸುಸಜ್ಜಿತವಾದ ಪಿಒಪಿ ಲೈಟಿಂಗ್, ಸೌಂಡ್ ಸಿಸ್ಟಂ, ಹೈಟೆಕ್ ಖುರ್ಚಿಗಳ ಸ್ಟೇಜ್ ವ್ಯವಸ್ಥೆ ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಮಾದಿಗ ದಂಡೋರ ಹೋರಾಟ ಸಮಿತಿ ಕಾರ್ಯಕರ್ತರು ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣವಾಗಿದ್ದು, ಈ ಭವನದಲ್ಲಿ ಯಾವುದೇ ಸುಸಜ್ಜಿತ ವ್ಯವಸ್ಥೆ ಇರುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ಸಭೆ-ಸಮಾರಂಭಕ್ಕೆ ಬೇಕಾದ ಅಗತ್ಯ ಸೌಲಭ್ಯಗಳೂ ಇಲ್ಲ. ಭವನಕ್ಕೆ ಕಾಂಪೌಂಡ್ ಇಲ್ಲ. ಭವನದ ರಕ್ಷಣೆಗಾಗಿ ಕಾಂಪೌಂಡ್ ನಿರ್ಮಾಣ ಮಾಡಬೇಕು. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಕೂಡ ಈವರೆಗೆ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಡಾ.ಬಾಬುಜಗಜೀವನರಾಂ ಭವನಕ್ಕೆ ಈಗಲಾದರೂ ಸುಸಜ್ಜಿತ ಪಿಒಪಿ ಲೈಟಿಂಗ್, ಸೌಂಡ್ ಸಿಸ್ಟಂ, ಹೈಟೆಕ್ ಖುರ್ಚಿಗಳ, ಸ್ಟೇಜ್ ವ್ಯವಸ್ಥೆ ಮಾಡಿ, ಧ್ವಜಸ್ತಂಭದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಕಡೆಗಣನೆ; ಸಚಿವ ತಿಮ್ಮಾಪುರರ ವಜಾಕ್ಕೆ ರೈತ ಸಂಘ
“ಒಂದು ವೇಳೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಯಾದಗಿರಿ ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಜಿಲ್ಲಾ ಉಪಾಧ್ಯಕ್ಷ ಮಲ್ಲು ಬೆಳಗೆರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಮುಂಡರಗಿ, ಗುರುಮಿಠಕಲ್ ತಾಲೂಕು ಅಧ್ಯಕ್ಷ ರಾಜು ಕಡೆಚೂರು, ನಿಂಗಪ್ಪ, ವಿಲ್ಸನ್ ಭಾಸ್ಕರ್ ಇದ್ದರು.