ಕಲಬುರಗಿ | ಕಲ್ಲಿಗೆ ಹಾಲು ಎರೆಯುವುದು ಮೌಢ್ಯದ ಪರಮಾವಧಿ: ಸಿದ್ಧಬಸವ ಕಬೀರ್‌ ಸ್ವಾಮಿ

Date:

ಕಲ್ಲಿಗೆ ಹಾಲು ಎರೆಯುವುದು, ಹಾವಿಗೆ ಹಾಲು ಕುಡಿಸುವುದು, ಮೌಢ್ಯದ ಪರಮಾವಧಿ, ಬಸವಣ್ಣನವರು ಹೇಳಿದಂತೆ ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವನ್ನ ಕಳಸವಯ್ಯ’ ಎನ್ನುವಂತೆ ವೈಜ್ಞಾನಿಕ ಚಿಂತನೆಗಳು ಮೈಗೂಡಿಸಿಕೊಂಡರೆ ಬದುಕು ಬದುಕು ಸಾರ್ಥಕವಾಗುತ್ತದೆ ಎಂದು ಚಿಗರಳ್ಳಿ ಮಠದ ಸಿದ್ದಬಸವ ಕಬೀರ್ ಸ್ವಾಮೀಜಿ ಹೇಳಿದರು.

ಜೇವರ್ಗಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಬಂಧತ್ವ ವೇದಿಕೆ ಹಾಗೂ ದಲಿತ ಸೇನೆ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, “ಬಸವಾದಿ ಶರಣರ ವಚನಗಳನ್ನು ಪಠಿಸಿದರೆ ಸಾಲದು ಅವರ ಸತ್ಯ ನಿಷ್ಢೆ ಹಾಗೂ ಕಾಯಕ ನಿಜ ಜೀವನದಲ್ಲಿ ಅನುಷ್ಠಾನಗೊಳಿಸಿದರೆ ನಾಔು ಇನ್ನೊಬ್ಬರಿಗೆ ಆದರ್ಶವಾಗಬಹುದು” ಎಂದರು.

ಚಿಂತಕ, ಪತ್ರಕರ್ತ ಡಾ.ಶಿವರಂಜನ್ ಸತ್ಯಂಪೇಟೆ ಅವರು ಮಾತನಾಡಿ, “ಬಸವ ಪಂಚಮಿಯನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ, ನಿಮ್ಮ ಬೆಂಬಲಕ್ಕೆ ನಾವು ಸದಾ ಇರುತ್ತೇವೆ, ಜೇವರ್ಗಿ ತಾಲೂಕಿನ ಮನೆ-ಮನೆಗೂ ಬಸವಣ್ಣನವರ ವಿಚಾರಗಳು ಮುಟ್ಟಿಸೋಣ” ಎಂದು ನುಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಲೇಜು ಪ್ರಾಂಶುಪಾಲ ಪ್ರೊ ಕರೀಘೂಳೇಶ್ವರ ಮಾತನಾಡಿ, ” ಬುದ್ಧ ಬಸವ ಅಂಬೇಡ್ಕರ್‌ ಅವರ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಂಡರೆ ಸಮಾಜ ಬದಲಾಗಲು ಸಾಧ್ಯ, ಇಂಥ ಸಂಘಟನೆಗಳಿಂದ ಮಾತ್ರ ವೈಚಾರಿಕ ಚಿಂತನೆ ಪಸರಿಸಲು ಸಾಧ್ಯ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ ? ಕಲಬುರಗಿ | ಬಿಜೆಪಿ ನಾಯಕ, ರೌಡಿ ಶೀಟರ್‌ ಮಣಿಕಂಠ ರಾಠೋಡ್ ಪೊಲೀಸ್‌ ವಶಕ್ಕೆ

ಕಾರ್ಯಕ್ರಮದಲ್ಲಿ ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾನವ ಬಂಧುತ್ವ ವೇದಿಕೆ ಜೇವರ್ಗಿ ತಾಲೂಕ ಸಂಚಾಲಕ ಶಿವಕುಮಾರ ಗೋಲಾ, ದಲಿತ ಸೇನೆ ಜೇವರ್ಗಿ ತಾಲ್ಲೂಕ ಅಧ್ಯಕ್ಷ ಶಿವಶರಣ ಮಂದೇವಾಲ, ಉಪಾಧ್ಯಕ್ಷ ಜಗದೀಶ್ ನಡಗಟ್ಟಿ, ಯುವ ಘಟಕದ ಅಧ್ಯಕ್ಷ ಖಮರ್ ಪೀರಾಸಾಬ ಸೇರಿದಂತೆ ಪ್ರಮುಖರಾದ ಪ್ರಕಾಶ್ ಕಾಂಬಳೆ, ಭಾಗೇಶ್ ಸೊನ್ನ, ರಮೇಶ್ ಬಿರಾಳ, ಅಂಬರೀಷ್ ಬಿರಾಳ,ಭಾಗಣ್ಣ ಗೋಲಾ,ಯಮನಪ್ಪ ಗೋಲಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಕೋಮುವಾದದ ಮಾತುಗಳನ್ನಾಡುವ ಪ್ರಧಾನಿ ದೇಶಕ್ಕೆ ಬೇಕೆ?: ಸಚಿವ ಎಂ ಸಿ ಸುಧಾಕರ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು...

ಶಿವಮೊಗ್ಗ | ಕ್ಷೇತ್ರದ ರಕ್ಷಣೆಗೆ, ಅಭಿವೃದ್ಧಿಗೆ ಆದ್ಯತೆ: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕಾರವು ರಾಜಕಾರಣಿಗಳ ಬಳಿಯಿದೆ. ಸಮಸ್ಯೆಗಳು ಸಾಕಷ್ಟಿವೆ. ಆದರೂ, ಕೆಲವು...

ಯಾದಗಿರಿ | ಅಂಗಡಿ, ಸಂತೆ ಪ್ರದೇಶದಲ್ಲಿ ಎಸ್‌ಯುಸಿಐ ಚುನಾವಣಾ ಪ್ರಚಾರ

ಯಾದಗಿರಿಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಚುನಾವಣಾ ಪ್ರಚಾರದ ಅಂಗವಾಗಿ ಇಂದು ನಗರದ...