ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ನೈತಿಕ ಮೌಲ್ಯಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ ಎಂದು ವರ್ಲ್ಡ್ ವಿಷನ್ ಚೆನ್ನೈ ಆಫೀಸ್ನ ಸಪ್ಲೈ ಚೈನ್ ವ್ಯವಸ್ಥಾಪಕ ಪ್ರಕಾಶ ಸಂಗಮ ಜಿಲ್ಲೆಯ ಶಾಹಪುರ್ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಮಕ್ಕಳಿಗಾಗಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯಿಂದ ಮೇ.20 ರಿಂದ ಮೇ.22ರವರೆಗೆ 3ದಿನಗಳ ‘ಜೀವನಶಾಲೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳ ಬಗ್ಗೆ, ಸಾಮಾಜಿಕ ಅರಿವು ಮತ್ತು ಸ್ವಚ್ಛತೆ, ಪರಿಸರ ಸಂರಕ್ಷಣೆ ಕುರಿತು ಪಾಠ ಮತ್ತು ಹಾಡುಗಳ ಮೂಲಕ ಅರಿವು ಮೂಡಿಸಿದರು. ಕಾರ್ಯಕ್ರಮದ ಕೊನೆಯ ದಿನ ಪ್ರಕಾಶ್ ಸಂಗಮ್ ಅವರು, ಅಂಗನವಾಡಿ ಶಾಲೆಯ 67 ಮಕ್ಕಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಿದರು.
ವಲ್ಡ್ ಮೀಷನ್ ಇಂಡಿಯಾ ಸಂಸ್ಥೆಯ ಸುಂದರ ಮಾತನಾಡಿ, “ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಂಸ್ಥೆಯಿಂದ ಕೊಡುವ ಸವಲತ್ತುಗಳನ್ನು ಮಕ್ಕಳು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರು. ಈ ವೇಳೆ ಮಕ್ಕಳು ಹಾಡು ಹಾಗೂ ನೃತ್ಯದ ಮೂಲಕ ಪ್ರದರ್ಶನ ನೀಡಿದರು.
ಇದನ್ನು ಓದಿದ್ದೀರಾ? ಗದಗ | ಕಪ್ಪತಗುಡ್ಡದಲ್ಲಿ ಬೀಜದ ಉಂಡೆ ಎಸೆಯುವ ಜಾಗೃತಿ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ನಾಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಶಿವಣ್ಣ ದೊರೆ, ವರ್ಲ್ಡ್ ವಿಷನ್ ಸಂಸ್ಥೆಯ ಮಿಖಾಯಿಲ್, ರಾಬರ್ಟ್. ಸ್ವಯಂ ಸೇವಕರಾದ ಮೋಹನ್ ಕುಮಾರ್, ಶಿವಣ್ಣ, ಅಶೋಕ್, ಮೇನಕ ಇನ್ನಿತರರು ಭಾಗವಹಿಸಿದ್ದರು.