ಯಾದಗಿರಿ ಜಿಲ್ಲೆಯಲ್ಲಿ ಸತತವಾಗಿ ಮೂರು ದಿನಗಳ ಕಾಲ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳ, ಕೆನಾಲ್ ಮೈದುಂಬಿ ಹರಿಯುತ್ತಿದ್ದು, ಹೆಬ್ಬಾಳ ಕೆ ಗ್ರಾಮದ ಸೇತುವೆ ಸಂಪೂರ್ಣ ನೀರಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹೆಬ್ಬಾಳ ಕೆ ಗ್ರಾಮದಲ್ಲಿ ಸೇತುವೆ ಎತ್ತರ ಕಡಿಮೆ ಇರುವುದರಿಂದ ಸತತವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿದೆ. ಸುತ್ತಮುತ್ತ ಎಂಟು (8) ಗ್ರಾಮಗಳಿಗೆ ಈ ಸೇತುವೆ ಮಾರ್ಗವಾಗಿ ಹೋಗಬೇಕು. ಗ್ರಾಮಗಳಿಗೆ ತೆರಳಲು ವಾಹನ ಸವಾರರಿಗೆ ಹಾಗೂ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿರುವುದು ತಿಳಿದುಬಂದಿದೆ.

ಸುರಪುರ ಕ್ಷೇತ್ರದ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕ ಹೆಬ್ಬಾಳ ಕೆ ಗ್ರಾಮದ ಸೇತುವೆ (ಬ್ರಿಡ್ಜ್) ಎತ್ತರಕ್ಕೇರಿಸಿ ಜನರಿಗೆ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಜನರಿಗೆ ಅನುಕೂಲ ಮಾಡಿಕೊಂಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕೋಲಾರ | ಬದುಕು, ಕನಸುಗಳನ್ನು ಅಡವಿಟ್ಟು ಗೆಲ್ಲುವ ಸಂಕಲ್ಪದಿಂದ ಅಧ್ಯಯನ ಮಾಡಿ: ಜಿಲ್ಲಾಧಿಕಾರಿ ಎಂ.ಆರ್.ರವಿ
ಆದಷ್ಟು ಶೀಘ್ರವಾಗಿ ನಮ್ಮ ಗ್ರಾಮಕ್ಕೆ ಬಂದು ಸಮಸ್ಯೆಯನ್ನು ಮನಗಂಡು ಪರಿಶೀಲಿಸಿ ಸೇತುವೆ ಎತ್ತರಕ್ಕೆ ನಿರ್ಮಾಣ ಮಾಡಿಕೊಡಲು ಕಾಮಗಾರಿ ನಡೆಸಿ ನಮ್ಮಗೆ ಅನುಕೂಲ ಮಾಡಿಕೊಡಬೇಕೆಂದು ಮಾಧ್ಯಮದ ಮೂಲಕ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ವರದಿ: ಸಿಟಿಜನ್ ಜರ್ನಲಿಸ್ಟ್ ಪರಶುರಾಮ