ಐತಿಹಾಸಿಕ ಗೆಲುವಿನ ನಗೆ ಬೀರುವ ಮೂಲಕ ಬಿಜೆಪಿಯ ಬಲಿಷ್ಠ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಲ್ಲಿ ಡಿಸೆಂಬರ್ 27ರಂದು ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, 14 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಲು ತಯಾರಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಈ ಚುನಾವಣಾ ಫಲಿತಾಂಶದತ್ತ ಜನತೆ ಕಣ್ಣು ನೆಟ್ಟಿತ್ತು. ಹುಣಸಗಿ ಪಟ್ಟಣವು ತಾಲೂಕು ಕೇಂದ್ರವಾದ ಬಳಿಕ ಮೊದಲ ಚುನಾವಣೆ ಇದಾಗಿದ್ದು, 16 ವಾರ್ಡ್‌ಗಳ ಪೈಕಿ 14 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.
ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಮತೆಣಿಕೆಯಲ್ಲಿ ಕ್ಷಣಕ್ಷಣ~ ಕ್ಕೂ ಕುತೂಹಲ ಮೂಡಿದ್ದು ಗೆದ್ದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ಮಾಡಿದರೆ ಇತ್ತ ಸೋತ ಅಭ್ಯರ್ಥಿಗಳು ಮನೆಯ ಕಡೆ ಮುಖಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲವು ವಾರ್ಡಗಳಲ್ಲಿ ಕುತೂಹಲ ಮೂಡಿದ್ದು ಗೆದ್ದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ಮಾಡಿದರೆ ಇತ್ತ ಸೋತ ಅಭ್ಯರ್ಥಿಗಳು ಮನೆಯ ಕಡೆ ಮುಖಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲವು ವಾರ್ಡಗಳಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಹೊರಹೊಮ್ಮಿದೆ. ಒಟ್ಟು 16 ವಾರ್ಡಗಳ ಪೈಕಿ 14 ವಾರ್ಡಗಳು ಕಾಂಗ್ರೆಸ್ ಪಾಲಾಗಿದ್ದು , ಕೇವಲ 2 ಸ್ಥಾನಗಳು ಮಾತ್ರ ಬಿಜೆಪಿಯ ಪಾಲಾಗಿದೆ.
ಭೀಮವ್ವ ತಿಪ್ಪಣ್ಣ ಕಡಿಮನಿ, ಶಾಂತಪ್ಪ ನಂದಪ್ಪ, ಸಿದ್ದಪ್ಪ(ಸಿದ್ದು) ಮುದಗಲ್, ಕಾಸಿಂಸಾಬ ಟೊಣ್ಣೂರ, ಶರಣಮ್ಮ ಬಸವರಾಜ ಬೂದಿಹಾಳ, ಶರಣು ಎನ್ ದಂಡಿನ, ಮಲ್ಲಣ್ಣ ಬಸಪ್ಪ, ಅಬೇದ ಬೇಗಂ, ಖಾಸಿಂಸಾಬ ಮಹಿಬೂಬಸಾಬ, ಮರಲಿಂಗಪ್ಪ ಪಿಡ್ಡಪ್ಪ, ನಿಖಿತಾ ಗೂಳಪ್ಪ, ಜಯಶ್ರೀ ರಮೇಶ ವಾಲಿ, ಅನ್ನಮ್ಮ ಸಿದ್ದಣ್ಣ ಮಲಗಲದಿನ್ನಿ, ತಿಪ್ಪಣ್ಣ ನಾಯಕ ಹಣಮಾನಾಯ್ಕ ಇವರುಗಳು ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆಗಾಗಿ ರಾಮಮಂದಿರ ಉದ್ಘಾಟನೆ: ಬಿಜೆಪಿ ವಿರುದ್ಧ ಸಚಿವ ಕಿಡಿ
ವಿಜಯೋತ್ಸವ ಸಂಭ್ರಮ : ನೂತನ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹುಣಸಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಭರ್ಜರಿ ರೋಡ್ ಶೋ ಮಾಡುವುದರ ಮೂಲಕ ಆರಂಭವಾದ ಮೇರವಣಿಗೆ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಚಲಿಸಿ ಮಹಾಂತ ಸ್ವಾಮಿ ವೃತ್ತ ತಲುಪಿತು.
ಸಿಟಿಜನ್ ಜರ್ನಲಿಸ್ಟ್ ಬಾಪುಗೌಡ