ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗಷ್ಟೇ ಘೋಷಣೆ ಮಾಡಿದೆ. ಅದರಂತೆ ಹೈವೋಲ್ಟೇಜ್ ಕ್ಷೇತ್ರ ಅಂತಲೇ ಬಿಂಬಿತವಾಗಿರುವ ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದೆ. ಜನರಿಗೆ ಹಂಚಲು ತಯಾರು ಮಾಡಿಟ್ಟಿದ್ದ ಬಿರಿಯಾನಿಯನ್ನು ಚುನಾವಣಾ ಅಧಿಕಾರಿಗಳು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಶಪಡಿಸಿಕೊಂಡಿದ್ದಾರೆ.
ನೀತಿ ಸಂಹಿತೆ ಜಾರಿಯಾದ ಬಳಿಕ ರಾಜಕೀಯ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಸಿ ಪಿ ಯೋಗೇಶ್ವರ್ ಟಿಕೆಟ್ ವಿಚಾರವಾಗಿ ಈ ಒಂದು ಸಭೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿಯ ಮೇರೆಗೆ ಚನ್ನಪಟ್ಟಣದ ರೆಸಾರ್ಟ್ ಮೇಲೆ ರಾಮನಗರ ರಾಮನಗರ ಚುನಾವಣಾ ಅಧಿಕಾರಿ ದಾಳಿ ನಡೆಸಿದ್ದಾರೆ.

ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಚನ್ನಪಟ್ಟಣದ ರೆಸಾರ್ಟ್‌ನಲ್ಲಿ ಕರೆಯಲಾಗಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಗೆ ಸಿದ್ಧವಾಗಿದ್ದ ಬಿರಿಯಾನಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾ ಅಧಿಕಾರಿಯಾದ ಉಪವಿಭಾಗಾಧಿಕಾರಿ ಬಿನೋಯ್ ನೇತೃತ್ವದಲ್ಲಿ ದಾಳಿಮಾಡಿದ ಅಧಿಕಾರಿಗಳು ಬಿರಿಯಾನಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಧಿಕಾರಿಗಳು ಅಡುಗೆ ಕೋಣೆಗೆ ತೆರಳಿ ಬಾಗಿಲು ಬಂದ್ ಮಾಡಿದ್ದು ಅಡುಗೆ ಸಿದ್ಧತೆಯನ್ನು ತಡೆದಿದ್ದಾರೆ. ನಂತರ ಊಟದ ಕೋಣೆಯತ್ತ ಹೋಗುತ್ತಿದ್ದ ಕಾರ್ಯಕರ್ತರನ್ನು ತಡೆದು, ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಊಟವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು. ಊಟದ ವ್ಯವಸ್ಥೆ ನಡೆಸಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ನಿರಾಸೆಗೊಂಡರು.

ಸುಮಾರು 500 ಜನರಿಗಾಗಿ ರೆಡಿಯಾಗುತ್ತಿದ್ದ ಬಾಡೂಟ ಸಂಪೂರ್ಣವಾಗಿ ವಶಕ್ಕೆ ಪಡೆಯಲಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಮುದ್ದೆ ಅನ್ನ ಸಾಂಬರ್ ರೆಡಿ ಮಾಡುತ್ತಿದ್ದು ಬೆಳಕಿಗೆ ಬಂದಿದೆ. ಅಲ್ಲದೆ, ಮಟನ್ ಬೋಟಿ, ಮಟನ್ ಸುಕ್ಕ, ಚಿಕನ್ ಬಿರಿಯಾನಿ ಚಿಕನ್ ಕಬಾಬ್, ಘೀ ರೈಸ್ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದು ಖಚಿತ: ಸಿ.ಪಿ. ಯೋಗೇಶ್ವರ್
“ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದು ಖಚಿತ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವುದು ನನ್ನ ಮೇಲೆ ನಿರ್ಧಾರವಾಗಲಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು” ಎಂದು ಸಿ.ಪಿ. ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೇಜಾನ್ ನಿಗರತಾಯಿದ್ದಾನೇ ಯೋಗೆಶ್ವರ್, ಓಂದೇ ಸತೀಗೆ ತಿಪ್ಪೆಗೋಗೋದು ಗ್ಯಾರಂಟಿ