ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಮತದಾನದಲ್ಲಿ ಪಾಲ್ಗೊಂಡಿರುವ ಯುವತಿ, ಮತದಾನದ ಮಹತ್ವವನ್ನು ಸಾರಿದ್ದಾರೆ.
ಮೂಲತಃ ಮಂಡ್ಯ ತಾಲೂಕಿನ ಕಾಳೇನಹಳ್ಳಿಯ ಸೋನಿಕಾ ಅವರು ಲಂಡನ್‌ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಅವರು ಶುಕ್ರವಾರ ಮಂಡ್ಯ ಬಂದು, ಮತದಾನ ಮಾಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಸೋನಿಕಾ ಲಂಡನ್‌ಗೆ ತೆರಳಿದ್ದರು. ಅಲ್ಲಿಯೇ ನೆಲೆಸಿದ್ದರು. ತಮ್ಮ ಸಹೋದರ ನೀಡಿದ ಮತದಾನದ ಅರಿವಿನಿಂದ ಎಚ್ಚೆತ್ತ ಅವರು, ಮಂಡ್ಯಕ್ಕೆ ಧಾವಿಸಿ, ಮತ ಚಲಾಯಿಸಿದ್ದಾರೆ.