ವಿಜಯಪುರದಲ್ಲಿ ದಸರಾ ಹಬ್ಬದ ಪ್ರಯುಕ್ತ ಎಕ್ಸಿಬಿಷನ್ ನಡೆಸಲಾಗುತ್ತಿದೆ. ಎಕ್ಸಿಬಿಷನ್‌ನಲ್ಲಿ ಆಟವಾಡಲು ತೆರಳಿದ್ದ ಯುವತಿಯೊಬ್ಬರು ರೇಂಜರ್ ಸ್ವಿಂಗ್‌ನಿಂದ ಬಿದ್ದ ಸಾವನ್ನಪ್ಪಿದ್ದಾರೆ. ಆಕೆಯ ಸಾವಿನ ಪ್ರಕರಣದಲ್ಲಿ ಎಕ್ಸಿಬಿಷನ್ ನಡೆಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರದ ಫಿಶ್ ಟನಲ್ ಎಕ್ಪೋದಲ್ಲಿ ಎಕ್ಸಿಬಿಷನ್ ನಡೆಯುತ್ತಿದೆ. 21 ವರ್ಷದ ನಿಖಿತಾ ಬಿರಾದರ್ ತಮ್ಮ ಕುಟುಂಬದೊಂದಿಗೆ ಎಕ್ಸಿಬಿಷನ್ ನೋಡಲು ತೆರಳಿದ್ದವು. ಈ ವೇಳೆ, ನಿಖಿತಾ ಮತ್ತು ಆಕೆಯ ಸ್ನೇಹಿತೆ ತಲೆ ಕೆಳಗಾಗಿ ತಿರುಗಿಸುವ ರೇಂಜರ್ ಸ್ವಿಂಗ್‌ನಲ್ಲಿ ಆಟವಾಡಲು ಹೋಗಿದ್ದರು. ರೇಂಜರ್ ಸ್ಟಿಂಗ್ ತಿರುಗಲು ಆರಂಭಿಸುತ್ತಿದ್ದಂತೆ ನಿಖಿತಾ ಸೇರಿ ಹಲವರು ಕಿರುಚಾಡಿದ್ದಾರೆ. ಮಿಷನ್‌ಅನ್ನು ನಿಲ್ಲಿಸುವಂತೆ ಕೂಗಿಕೊಂಡಿದ್ದಾರೆ.
ಆದರೂ, ರೇಂಜರ್ ಸ್ವಿಂಗ್ ಆಪರೇಟರ್‌ಗಳು ಅವರ ಮಾತನ್ನು ನಿರ್ಲಕ್ಷಿಸಿದ್ದಾರೆ. ಆದೇ ಸಮಯದಲ್ಲಿ, ನಿಖಿತಾಗೆ ಹಾಕಲಾಗಿದ್ದ ಸೇಫ್ಟಿ ಬೆಲ್ಟ್ ಸಡಿಲಗೊಂಡು, ಕಳಚಿಕೊಂಡಿದೆ. ಪರಿಣಾಮ ಆಕೆ ಸ್ವಿಂಗ್‌ನಿಂದ ಕೆಳಗೆ ಬಿದ್ದಿದ್ದು, ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾರೆ.
ದುರ್ಘಟನೆಗೆ ಫೀಶ್ ಟನಲ್ ಎಕ್ಪೋ ಮ್ಯಾನೇಜ್ಮೆಂಟ್‌ನ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ. ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಕ್ಸ್ಪೋ ಮ್ಯಾನೇಜರ್, ಆಪರೇಟರ್, ಕ್ಯಾಷಿಯರ್ ಸೇರಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.