ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಗಡಿಪಾರು ಮಾಡ್ಬೇಕು. ಅವರನ್ನು ಯಾವುದಾದರೂ ಆಲದಮರಕ್ಕೆ ನೇಣು ಹಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ, ದ್ವೇಷಪೂರಿತ ವಿವಾದಾತ್ಮಕ ಭಾಷಣ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ದತ್ತಮಾಲೆ ಅಭಿಯಾನದ ಧರ್ಮಸಭೆಯಲ್ಲಿ ದ್ವೇಷ ಭಾಷಣ ಮಾಡಿದ ಮುತಾಲಿಕ್, “ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25,000 ಬಾಂಗ್ಲಾದೇಶದ ಮುಸ್ಲಿಮರಿದ್ದಾರೆ. ಅವರನ್ನು ಜಮೀರ್ ಸಾಕುತ್ತಿದ್ದು, ಮತದಾರರ ಪಟ್ಟಿ ತಯಾರು ಮಾಡಿದ್ದಾನೆ” ಎಂದು ಏಕವಚನದಲ್ಲಿ ಮಾತನಾಡಿದ್ದಾರೆ.
“ಜಮೀರ್ ನನ್ನ ಬಿಜೆಪಿಯವರು ಗಡಿಪಾರು ಮಾಡಬೇಕು. ಗಡಿಪಾರು ಬೇಡ ಯಾವುದಾದರೂ ಆಲದಮರಕ್ಕೆ ನೇಣು ಹಾಕಬೇಕು. ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲದ ವ್ಯಕ್ತಿ” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.