ಆಪರೇಷನ್ ಸಿಂಧೂರ ಆರಂಭವಾದ ಬಳಿಕ ಜಮ್ಮು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಗಡಿ ಜಿಲ್ಲೆಗಳ ಮೇಲೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಗಳಿಂದಾಗಿ ಕನಿಷ್ಠ 31 ಶಾಲೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಆಪರೇಷನ್ ಸಿಂಧೂರದ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ನಡೆದ ದಾಳಿ-ಪ್ರತಿ ದಾಳಿ ವೇಳೆ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳು ಅಧಿಕ ಹಾನಿಗೊಳಗಾಗಿವೆ. ಪೂಂಚ್ನಲ್ಲಿ 13 ಮತ್ತು ರಾಜೌರಿಯಲ್ಲಿ 3 ಜನರು ಸೇರಿದಂತೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಮನೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನೂರಾರು ಕಟ್ಟಡಗಳು ಹಾನಿಗೊಂಡಿವೆ.
