ಜಮ್ಮು-ಕಾಶ್ಮೀರದ ಸೋನಾಮಾರ್ಗ್ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಪ್ರಸಿದ್ಧ ರೆಸಾರ್ಟ್ ಪಟ್ಟಣವಾದ ಸೋನಾಮಾರ್ಗ್ನ ಮಾರುಕಟ್ಟೆಯಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡ ಬೆಂಕಿ ಸೋನಾಮಾರ್ಗ್ ಮಾರುಕಟ್ಟೆಯ ಪಕ್ಕದ ಅಂಗಡಿಗಳಿಗೂ ಹರಡಿದೆ. ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಕೆಲಸ ಮಾಡಿದ್ದಾರೆ.