ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳಿಗೆ 100 ದಿನ ರಜೆ ಪಡೆಯುವ ಸೌಲಭ್ಯವಿದೆ. ಆದಾಗ್ಯೂ, 2020 ಮತ್ತು 2024ರ (ಅಕ್ಟೋಬರ್ ವರೆಗೆ) ನಡುವೆ ಈ ಪಡೆಗಳಲ್ಲಿರುವ 9.5 ಲಕ್ಷ ಸಿಬ್ಬಂದಿಗಳ ಪೈಕಿ ಕೇವಲ 42,000 ಸಿಬ್ಬಂದಿಗಳು ಮಾತ್ರವೇ 100 ದಿನಗಳ ರಜೆಯ ಲಾಭ ಪಡೆದಿದ್ದಾರೆ ಎಂಂದು ಕೇಂದ್ರ ಗೃಹ ಸಚಿವಾಲಯ (MHA) ಮಾಹಿತಿ ನೀಡಿದೆ.
ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಆತ್ಮಹತ್ಯೆಗಳು ಮತ್ತು ಸ್ವಯಂನಿವೃತ್ತಿಯನ್ನು ಕಡಿಮೆ ಮಾಡುವ ಮತ್ತು ಸಿಬ್ಬಂದಿಗಳು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ 100 ದಿನಗಳ ರಜೆ ನೀತಿಯನ್ನು ಘೋಷಿಸಲಾಗಿತ್ತು. ಆದಾಗ್ಯೂ, ತೀರಾ ಕಡಿಮೆ ಸಿಬ್ಬಂದಿಗಳು ಈ ನೀತಿಯಡಿ ರಜೆ ಪಡೆದಿದ್ದಾರೆ.
ಸಂಸತ್ತಿನಲ್ಲಿ ಮಂಡಿಸಲಾದ ಗೃಹ ಸಚಿವಾಲಯದ ಮಾಹಿತಿಯಂತೆ, ಕಳೆದ ನಾಲ್ಕು ವರ್ಷಗಳಲ್ಲಿ ಸಿಆರ್ಪಿಎಫ್ನ ಒಟ್ಟು 2,245 ಸಿಬ್ಬಂದಿಗಳು ಮಾತ್ರವೇ 100 ದಿನಗಳ ರಜೆ ಪಡೆದುಕೊಂಡಿದ್ದಾರೆ. ಆದಾಗ್ಯೂ, 2024ರಲ್ಲಿ ಕೇವಲ 71 ಮಂದಿ ಮಾತ್ರವೇ ರಜೆ ಮೇಲೆ ತಮ್ಮೂರಿಗೆ ಹೋಗಲು ಸಾಧ್ಯವಾಗಿದೆ.
ಇನ್ನು, ಗಡಿ ಭದ್ರತಾ ಪಡೆಯಲ್ಲಿ (BSF) ಒಟ್ಟು 21,733 ಸಿಬ್ಬಂದಿ 100 ದಿನ ರಜೆಯನ್ನು ತೆಗೆದುಕೊಂಡಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಪಡೆಯ 1,472 ಸಿಬ್ಬಂದಿ, ಸಶಸ್ತ್ರ ಸೀಮಾ ಬಾಲ್ನ (SSB) 6,142 ಸಿಬ್ಬಂದಿ ಹಾಗೂ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ನ (CISF) 8,838 ಸಿಬ್ಬಂದಿ ಈ ರಜೆಗಳನ್ನು ಪಡೆಯಲು ಸಾಧ್ಯವಾಗಿದೆ.
ಇದಲ್ಲದೆ, ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಕಾರ್ಯನಿರ್ವಹಿಸುವ ಮತ್ತು ಮಣಿಪುರದಲ್ಲಿ ನಿಯೋಜಿಸಲಾದ ಅಸ್ಸಾಂ ರೈಫಲ್ಸ್ನ 2,367 ಸಿಬ್ಬಂದಿಗಳು 100 ದಿನಗಳ ರಜೆ ಪಡೆದಿದ್ದಾರೆ. ಒಟ್ಟಾರೆಯಾಗಿ, 42,797 ಸಿಬ್ಬಂದಿಗಳು ರಜೆಯ ಉಪಯೋಗ ಪಡೆದುಕೊಂಡಿದ್ದಾರೆ.
100 day’s ರಾಜ ಇನ್ನೂ ನಮಗೆ ಸಿಗುತ್ತಿಲ್ಲ ಅದನ್ನು ಕೇಂದ್ರೀಯ ರಕ್ಷಣಾ ಮಂತ್ರಿಗಳು ಇನ್ನು ಬಿಲ್ ಪಾಸ್ ಮಾಡಿಲ್ಲ ಈ ತರಹದ ಸುಳ್ಳು ಸುದ್ದಿಗಳನ್ನು ಸಾಮಾನ್ಯ ಜನರಿಗೆ ಕೊಡಬೇಡಿ ಈ ಕೂಡಲೇ ಈ ಸುದ್ದಿಯನ್ನು ಇಂಟರ್ನೆಟ್ ನಿಂದ ಡಿಲೀಟ್ ಮಾಡು
100 ದಿನ ರಜೆ ಇನ್ನು ಶುರು ಆಗಿಲ್ಲ ವಿಷಯ ಗೊತ್ತಿಲ್ಲ ಅಂದ್ರೆ ಯಾಕೆ ಸುಳ್ಳು ಸುದ್ಧಿ ಹಾಕ್ತೀರಾ.
Don’t spread fake news I am also capf member bull shit news
Don’t spread fake news I am also capf member bull shit news 100 alla 60 days e l sariyagi sigtilla