ತನ್ನನ್ನು ತಾನೇ ಆಧ್ಯಾತ್ಮಿಕ ಗುರು ಎಂದು ಕರೆದುಕೊಂಡಿರುವ ಸ್ವಯಂ ಘೋಷಿತ ದೇವಮಾನವ ಜಗ್ಗಿ ವಾಸುದೇವ್ ಅವರ ‘ಇಶಾ ಫೌಂಡೇಶನ್’ ವಿರುದ್ಧ ನಾನಾ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವುಗಳ ಕುರಿತು ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಈ ಬೆನ್ನಲ್ಲೇ, ಸುಮಾರು 150 ಪೊಲೀಸರು ತಮಿಳುನಾಡಿನ ಕೊಯಮತ್ತೂರು ಬಳಿಕ ಇಕ್ಕರೈ ಬೊಲುವಾಂಪಟ್ಟಿಯಲ್ಲಿರುವ ಇಶಾ ಫೌಂಡೇಶನ್ ಕೇಂದ್ರಕ್ಕೆ ದಾಳಿ ಮಾಡಿದ್ದು, ಶೋಧ ನಡೆಸಿದ್ದಾರೆ.
ಕೊಯಮತ್ತೂರಿನ ನಿವೃತ್ತ ಪ್ರೊಫೆಸರ್ ಎಸ್ ಕಾಮರಾಜ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ಇಶಾ ಫೌಂಡೇಶನ್ ವಿರುದ್ಧದ ಎಲ್ಲ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು.
ತಮಿಳುನಾಡಿನ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ವಾಸವಿರುವಂತೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ‘ಬ್ರೈನ್ ವಾಶ್’ ಮಾಡಲಾಗಿದೆ. ಅವರನ್ನು ತಲೆ ಬೋಳಿಸಿಕೊಂಡು, ಸನ್ಯಾಸಿಗಳಾಗುವಂತೆ ಒತ್ತಾಯಿಸಲಾಗಿದೆ. ಅಲ್ಲದೆ, ನಮ್ಮ ಸಂಪರ್ಕದಲ್ಲಿರಲು ಕೂಡಾ ಅವಕಾಶ ನೀಡುತ್ತಿಲ್ಲ ಎಂದು ಕಾಮರಾಜ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಸದ್ಗುರು ಯೋಗ ಕೇಂದ್ರದಿಂದ 6 ಮಂದಿ ನಾಪತ್ತೆ; ಹೈಕೋರ್ಟ್‌ಗೆ ಪೊಲೀಸರ ವರದಿ
ಇಶಾ ಫೌಂಡೇಶನ್ ಅರಣ್ಯ ಪ್ರದೇಶದಲ್ಲಿದ್ದು, ಅದರ ಕಾಂಪೌಂಡ್ ಗೋಡೆ ಮತ್ತು ಮುಂಭಾಗದ ಗೇಟ್ ಅನ್ನು ಅರಣ್ಯ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸ್ಥಳಗಳಿಗೆ ನಿರಂತರವಾಗಿ ಜನರು ಭೇಟಿ ನೀಡುವುದರಿಂದ ಆನೆಗಳ ಆವಾಸಸ್ಥಾನಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಕಟ್ಟಡಗಳನ್ನು ನಿರ್ಮಿಸಲು ಫೌಂಡೇಶನ್‌ಗೆ HACA ಅನುಮೋದನೆ ನೀಡಲು 2012ರಲ್ಲಿಯೇ ಅಂದಿನ ಕೊಯಮತ್ತೂರು ಜಿಲ್ಲಾಧಿಕಾರಿ ನಿರಾಕರಿಸಿದ್ದರು.
ಅದಾಗ್ಯೂ, ಅಲ್ಲಿಯೇ ಇಶಾ ಫೌಂಡೇಶನ್ ಕೇಂದ್ರವನ್ನು ಜಗ್ಗಿ ವಾಸುದೇವ್ ನಡೆಸುತ್ತಿದ್ದರು. ಇತ್ತೀಚೆಗೆ, ಅವರನ್ನು ಅಲ್ಲಿಂದ ಖಾಲಿ ಮಾಡಿಸಿ, ಹೊರಗಟ್ಟಲಾಗಿತ್ತು. ಬಳಿಕ, ಆತ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಪಡೆದುಕೊಂಡು, ಇಶಾ ಫೌಂಡೇಶನ್‌ಅನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದಾರೆ.
ಇದಲ್ಲದೆ, ಆರು ಮಂದಿ ನಾಪತ್ತೆ ಪ್ರಕರಣ, ವಂಚನೆ, ಅತ್ಯಾಚಾರ ಸಂಬಂಧಿತ ಪ್ರಕರಣಗಳಲ್ಲಿ ಇಶಾ ಫೌಂಡೇಶನ್ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ.
A major controversy has engulfed the renowned #IshaFoundation, led by spiritual leader #SadhguruJaggiVasudev, as a team of 150 police officers descended upon its #ThondamuthurAshram on Tuesday.
— Hate Detector 🔍 (@HateDetectors) October 1, 2024
The search, spearheaded by an Assistant Deputy Superintendent from #Coimbatore, came… pic.twitter.com/DrYVNWdupB
