ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ದೆಹಲಿ ನಿವಾಸದಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2 ಬಿಎಂಡಬ್ಲ್ಯು, 36 ಲಕ್ಷ ನಗದು ಹಾಗೂ ಕೆಲವು ಅಘೋಷಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿ ನಿವಾಸದಿಂದ ಹೇಮಂತ್ ಸೊರೇನ್ ನಾಪತ್ತೆಯಾಗಿರುವ ಕಾರಣದಿಂದ ಇ.ಡಿ ತಂಡಕ್ಕೆ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಭೂ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ವಿಚಾರಣೆಗೊಳಪಡಿಸಲು ಸೊರೇನ್ ದೆಹಲಿ ನಿವಾಸಕ್ಕೆ ಇ.ಡಿ ಅಧಿಕಾರಿಗಳು ಆಗಮಿಸಿದ್ದರು. ಸೊರೇನ್ ನಾಪತ್ತೆಯಾದ ಕಾರಣ ಇಡಿ ಅಧಿಕಾರಿಗಳು ಕಳೆದ 13 ಗಂಟೆಗಳಿಂದ ಜಾರ್ಖಂಡ್ ನಿವಾಸದಲ್ಲಿಯೇ ಉಳಿದುಕೊಂಡಿದ್ದಾರೆ.
ಮೂಲಗಳ ಪ್ರಕಾರ ಇ.ಡಿ ತಂಡ ಸೊರೇನ್ ಸುಳಿವಿಗಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಣ್ಣಿಟ್ಟಿದೆ. ಜನವರಿ 27ರಂದು ಸೊರೇನ್ ಖಾಸಗಿ ಕಾರಣ ಹೇಳಿಕೊಂಡು ದೆಹಲಿಯಿಂದ ರಾಂಚಿಗೆ ಆಗಮಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
ಇ.ಡಿ ಕ್ರಮ ಕೈಗೊಳ್ಳುವ ಭಯದಿಂದ ಕಳೆದ 18 ಗಂಟೆಗಳಿಂದ ಜಾರ್ಖಂಡ್ ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ಬಿಜೆಪಿ ರಾಜ್ಯ ನಾಯಕರು ಮನವಿ ಸಲ್ಲಿಸಿದ್ದಾರೆ.
ಇ.ಡಿ. ಈ ಮೊದಲು ಜನವರಿ 20ರಂದು ಸೊರೇನ್ ಅವರನ್ನು ವಿಚಾರಣೆಗೊಳಪಡಿಸಿತ್ತು. ವಿಚಾರಣೆ ಪೂರ್ಣಗೊಳ್ಳದ ಕಾರಣ ಜನವರಿ 29 ಅಥವಾ 31 ರಂದು ಪುನಃ ಲಭ್ಯವಾಗುವಂತೆ ಸಮನ್ಸ್ ನೀಡಿತ್ತು.
ಜಾರ್ಖಂಡ್ ನಿವಾಸದ ಬಳಿ 144 ಸೆಕ್ಷನ್ ಜಾರಿ
ಇ.ಡಿ.ಯಿಂದ ಬಂಧನಕ್ಕೊಳಗಾಗುವ ಭೀತಿಯ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ರಾಂಚಿಯ ಹೇಮಂತ್ ಸೊರೇನ್ ನಿವಾಸದ ಬಳಿ 100 ಮೀಟರ್‌ವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸಿಎಂ ನಿವಾಸದ ಜೊತೆ ರಾಜಭವನ ಹಾಗೂ ರಾಂಚಿಯ ಇ.ಡಿ ಕಚೇರಿ ಬಳಿಯಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.