ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶಾಲೆಗಳ ನಂತರ ಈಗ ಎರಡು ಪ್ರಮುಖ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಬುರಾರಿ ಆಸ್ಪತ್ರೆ ಹಾಗೂ ಸಂಜಯ್ ಗಾಂಧಿ ಆಸ್ಪತ್ರೆಗೆ ಇಮೇಲ್ ಮೂಲಕ ಬೆದರಿಕೆ ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಬಾಂಬ್ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ವಾರ ದೆಹಲಿ ಹಾಗೂ ಗುಜರಾತ್‌ನ ಅಹಮದಾಬಾದ್‌ನ ಶಾಲೆಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿತ್ತು.
ದೆಹಲಿ, ನೋಯ್ಡಾ ಹಾಗೂ ಗುರುಗ್ರಾಮ್‌ನ ಸುಮಾರು 131 ಶಾಲೆಗಳಿಗೆ ಮೇ 2 ರಂದು ಬೆದರಿಕೆ ಕರೆ ಬಂದಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಮೂರು ದಿನಗಳ ನಂತರ ಅಹಮದಾಬಾದ್‌ನ ಮೂರು ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿತ್ತು.
ಏಕ ಐಪಿ ಅಡ್ರಸ್ ಮೂಲಕ ಶಾಲೆಗಳು ಬೆದರಿಕೆ ಇಮೇಲ್ ಸ್ವೀಕರಿಸಿದ್ದವು. ಇವು ವಿಪಿಎಲ್ ಸಂಪರ್ಕ ಬಳಸಿ ಇಮೇಲ್ ಮಾಡಲಾಗಿತ್ತು. ಇವುಗಳ ಮೂಲ ರಷ್ಯಾದ ಡೊಮೈನ್ ಹೊಂದಿದ್ದವು.
ಇದಕ್ಕೂ ಮೊದಲು ಬೆಂಗಳೂರು, ಚೆನ್ನೈ, ಮುಂಬೈ ಶಾಲೆಗಳಿಗೆ ಇದೇ ರೀತಿ ಇಮೇಲ್ ಮೂಲಕ ಬೆದರಿಕೆ ಬಂದಿದ್ದವು. ಆನಂತರ ಇವು ಹುಸಿ ಬೆದರಿಕೆ ಎಂದು ತಿಳಿಯಲಾಯಿತು.
