ತಮ್ಮ ರಾಜ್ಯದ 21ಕ್ಕೂ ಅಧಿಕ ಮೀನುಗಾರರನ್ನು ಹಾಗೂ ಅವರ ದೋಣಿಗಳನ್ನು ಬಿಡುಗಡೆಗೊಳಿಸಲು ಶ್ರೀಲಂಕಾವನ್ನು ಒತ್ತಾಯಿಸುವಂತೆ ತಮಿಳುನಾಡು ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಹಾಗೂ ಪಿಎಂಕೆಯ ನಾಯಕ ಎ ರಾಮ್‌ದಾಸ್ ಅವರು ದ್ವೀಪ ರಾಷ್ಟ್ರ ಶ್ರೀಲಂಕಾವು 21 ಮೀನುಗಾರರನ್ನು ಬಂಧಿಸಿದೆ. ಹಾಗೆಯೇ ಅವರ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾ.16ರಂದು ರಾತ್ರಿ ಶ್ರೀಲಂಕಾದ ಅಧಿಕಾರಿಗಳು ಮೀನುಗಾರರನ್ನು ಬಂಧಿಸಿದ್ದಾರೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
ಕೇಂದ್ರ ವಿದೇಶಾಂಗ ಸಚಿವ ಎಸ್ ಜಯಶಂಕರ್ ಅವರಿಗೆ ಪತ್ರ ಬರೆದಿರುವ ಅಣ್ಣಾಮಲೈ, ತಮಿಳುನಾಡಿನ ರಾಮೇಶ್ವರದ 21 ಮೀನುಗಾರರನ್ನು ಶ್ರೀಲಂಕಾದ ನೌಕಾದಳದ ಅಧಿಕಾರಿಗಳು ಬಂಧಿಸಿ ಅವರಿಗೆ ಸೇರಿದ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವರಿಗೆ ನೀವು ಸಹಾಯ ನೀಡಬೇಕೆಂದು ನಾವು ಮನವಿ ಮಾಡುತ್ತೇವೆ. ನಮ್ಮ ವಿದೇಶಾಂಗ ಇಲಾಖೆಯು ಮೀನುಗಾರರನ್ನು ಬೇಗನೆ ವಾಪಸ್ ಕರೆತರುವಂತೆ ಮಧ್ಯಸ್ಥಿಕೆ ವಹಿಸುವಂತೆ ಎಕ್ಸ್ ಮೂಲಕ ಮನವಿ ಮಾಡಿದ್ದಾರೆ.
ರಾಜ್ಯಸಭೆ ಸದಸ್ಯ ಎ ರಾಮದಾಸ್ , ಕಳೆದ ಒಂದು ವಾರದಿಂದ ತಮಿಳುನಾಡು ಹಾಗೂ ಪುದುಚೆರಿಯಿಂದ 58 ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ. ಅಲ್ಲದೆ ಕಳೆದ ಎರಡು ತಿಂಗಳಿನಿಂದ 80ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಲಾಗಿದೆ. ಶ್ರೀಲಂಕಾ ಸರ್ಕಾರ ತಮಿಳುನಾಡಿನ ಮೀನುಗಾರರನ್ನು ಅಂತ್ಯವಿಲ್ಲದ ಬಂಧನ ಹಾಗೂ ದಾಳಿಗಳನ್ನು ಕೇಂದ್ರ ಸರ್ಕಾರವು ತಡೆಯಬೇಕು. ಕೇಂದ್ರ ಸರ್ಕಾರವು 58 ಮೀನುಗಾರರು ಹಾಗೂ ಅವರ ಎಲ್ಲ ದೋಣಿಗಳನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
