ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದ ಇಪ್ಪತ್ತೆಂಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 19 ಮಂದಿ ಕೊಲೆ ಯತ್ನ, ಮಹಿಳೆಯ ಮೇಲೆ ಅಪರಾಧ, ದ್ವೇಷ ಭಾಷಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.
ಅತ್ಯಂತ ತೀವ್ರವಾದ ಆರೋಪಗಳನ್ನು ಎದುರಿಸುತ್ತಿರುವ ಸಚಿವರ ಪೈಕಿ ಇಬ್ಬರು ಭಾರತೀಯ ದಂಡ ಸಂಹಿತೆ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿದ್ದಾರೆ.
ಬಂದರು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶಾಂತನು ಠಾಕೂರ್ ಮತ್ತು ಈಶಾನ್ಯ ಪ್ರದೇಶದ ಶಿಕ್ಷಣ ಮತ್ತು ಅಭಿವೃದ್ಧಿ ರಾಜ್ಯ ಸಚಿವ ಸುಕಾಂತ ಮಜುಂದಾರ್ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದೆ ಎಂದು ಎಡಿಆರ್ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಮೋದಿ ಸರ್ಕಾರದ ಅತ್ಯಂತ ಶ್ರೀಮಂತ ಸಂಸದ ಚಂದ್ರಶೇಖರ್ ಪೆಮ್ಮಸಾನಿ ಆದಾಯವೆಷ್ಟು?
ಐವರು ಸಚಿವರ ಮೇಲೆ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಎಡಿಆರ್ ವರದಿ ಉಲ್ಲೇಖಿಸಿದೆ. ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಶಾಂತನು ಠಾಕೂರ್, ಸುಕಾಂತ ಮಜುಂದಾರ್, ಸುರೇಶ್ ಗೋಪಿ ಮತ್ತು ಜುಯಲ್ ಓರಾಮ್ ವಿರುದ್ಧ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಪ್ರಕರಣಗಳಿವೆ.
Analysis of Criminal, Financial, and Other Background Details of Union Council of Ministers in the 18th Lok Sabha#ADRReport: https://t.co/On2i0fGUU2
Support us: https://t.co/lK9cQpqzJQ#KnowYourNeta #LokSabhaElections2024 pic.twitter.com/rec2eNO2gf
— ADR India & MyNeta (@adrspeaks) June 11, 2024
ಸಂಜಯ್ ಕುಮಾರ್ ವಿರುದ್ಧ ಕನಿಷ್ಠ 30 ಗಂಭೀರ ಆರೋಪಗಳಿರುವ 42 ಪ್ರಕರಣಗಳಿದ್ದರೆ, ಶಾಂತನು ಠಾಕೂರ್ ವಿರುದ್ಧ 23 ಪ್ರಕರಣಗಳು ಮತ್ತು 37 ಗಂಭೀರ ಆರೋಪಗಳಿವೆ. ಸಚಿವ ಸುಕಾಂತ ಮಜುಂದಾರ್ ವಿರುದ್ಧ 16 ಪ್ರಕರಣಗಳಿದ್ದು, 30 ಗಂಭೀರ ಆರೋಪಗಳಿವೆ.
ಇದನ್ನು ಓದಿದ್ದೀರಾ? ಬಿಜೆಪಿ ಸೋಲು | ಅಯೋಧ್ಯೆ ಜನರನ್ನು ದೂಷಿಸುತ್ತಿರುವ ಮೂರ್ಖರು; ರಾಮನನ್ನೇ ಮರೆತ ಮೋದಿ
ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿರುವ ಎಂಟು ಸಚಿವರುಗಳನ್ನು ಎಡಿಆರ್ ಗುರುತಿಸಿದೆ. ಎಂಟು ಸಚಿವರು ದ್ವೇಷ ಭಾಷಣದ ಆರೋಪ ಹೊತ್ತಿದ್ದಾರೆ. ಅಮಿತ್ ಶಾ, ಶೋಭಾ ಕರಂದ್ಲಾಜೆ, ಧರ್ಮೇಂದ್ರ ಪ್ರಧಾನ್, ಗಿರಿರಾಜ್ ಸಿಂಗ್, ನಿತ್ಯಾನಂದ ರೈ, ಬಂಡಿ ಸಂಜಯ್ ಕುಮಾರ್, ಶಾಂತನು ಠಾಕೂರ್ ಮತ್ತು ಸುಕಾಂತ ಮಜುಂದಾರ್ ವಿರುದ್ಧ ದ್ವೇಷ ಭಾಷಣದ ಆರೋಪವಿದೆ.
ಇನ್ನು ಮುಖ್ಯವಾಗಿ ಈ ಸಚಿವರುಗಳು ಜಾಮೀನು ರಹಿತ ಅಪರಾಧಗಳು, ಗರಿಷ್ಠ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಿರುವ ಅಪರಾಧಗಳು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಅಪರಾಧ, ಕೊಲೆ, ಆಕ್ರಮಣ, ಅತ್ಯಾಚಾರ, ಅಪಹರಣ ಮೊದಲಾದ ಅಪರಾಧಗಳನ್ನು ಹೊಂದಿದ್ದಾರೆ.
71 ಸಚಿವರಲ್ಲಿ 70 ಮಂದಿ ಕೋಟ್ಯಾಧಿಪತಿಗಳು!
ವರದಿಯ ಪ್ರಕಾರ, 71 ಸಚಿವರಲ್ಲಿ 70 ಮಂದಿ ‘ಕೋಟ್ಯಾಧಿಪತಿಗಳು’ ಅಥವಾ ಕನಿಷ್ಠ 1 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆರು ಮಂದಿಯಲ್ಲಿ ಅತೀ ಹೆಚ್ಚು ಅಥವಾ ನೂರು ಕೋಟಿ ರೂಪಾಯಿಗಿಂತ ಅಧಿಕ ಆಸ್ತಿಯಿದೆ. ಡಾ ಚಂದ್ರಶೇಖರ್ ಪೆಮ್ಮಸಾನಿ 5,705 ಕೋಟಿ ರೂ, ಜ್ಯೋತಿರಾದಿತ್ಯ ಎಂ. ಸಿಂಧಿಯಾ 424 ಕೋಟಿ ರೂ, ಎಚ್.ಡಿ. ಕುಮಾರಸ್ವಾಮಿ 217 ಕೋಟಿ ರೂ, ಅಶ್ವಿನಿ ವೈಷ್ಣವ್ 144 ಕೋಟಿ ರೂ, ರಾವ್ ಇಂದರ್ ಜಿತ್ ಸಿಂಗ್ 121 ಕೋಟಿ ರೂ ಮತ್ತು ಪಿಯೂಷ್ ಗೋಯಲ್ 110 ಕೋಟಿ ರೂಪಾಯಿ ಆಸ್ತಿಯಿದೆ.