ಉನ್ನತ ಮಟ್ಟದ ಭದ್ರತೆ ಹೊಂದಿದ್ದ ಸಂಸತ್ ಭವನದ ಸಂಕೀರ್ಣಕ್ಕೆ ನಕಲಿ ಆಧಾರ್ ಬಳಸಿ ಪ್ರವೇಶಿಸಲು ಯತ್ನಿಸಿದ್ದ ಮೂವರು ಕಾರ್ಮಿಕರನ್ನು ಸಿಐಎಸ್‌ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತರನ್ನು ನಂತರ ದೆಹಲಿ ಪೊಲೀಸ್ ವಶಕ್ಕೆ ನೀಡಲಾಯಿತು. ಬಂಧಿತರನ್ನು ಖಾಸೀಂ, ಮೊನೀಸ್ ಹಾಗೂ ಶೊಯೆಬ್ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ವಂಚನೆ ಹಾಗೂ ನಕಲಿ ಆರೋಪ ಸೇರಿದಂತೆ ಹಲವು ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ
ನಿಯಮಿತ ಭದ್ರತಾ ತಪಾಸಣೆಯ ವೇಳೆ ಸಂಸತ್ತಿನ ವಿದ್ಯನ್ಮಾನ ಪ್ರವೇಶ ದ್ವಾರದ ಬಳಿ ಸಿಐಎಸ್‌ಎಫ್ ಸಿಬ್ಬಂದಿ ಮೂವರನ್ನು ಬಂಧಿಸಿದ್ದಾರೆ. ಸಿಐಎಸ್‌ಎಫ್ ಸಿಬ್ಬಂದಿ ಪರಿಪೂರ್ಣವಾಗಿ ಗಮನಿಸಿದ ನಂತರ ಆಧಾರ್ ಕಾರ್ಡ್ ನಕಲಿ ಎಂದು ತಿಳಿದು ಬಂದಿದೆ.
ಬಂಧಿತರು ನಿರ್ಮಾಣ ಕಾಮಗಾರಿಯ ಉದ್ಯೋಗಿಗಳಾಗಿದ್ದು, ಸಂಸತ್ ಸಂಕೀರ್ಣದ ಒಳಭಾಗದಲ್ಲಿ ನಿರ್ಮಿಸಲಾಗುತ್ತಿದ್ದ ಸಂಸದರ ವಿಶ್ರಾಂತಿ ಕೋಣೆಯ ನಿರ್ಮಾಣಕ್ಕೆ ಆಗಮಿಸಿದ್ದರು. ದೇ ವೀ ಪ್ರಾಜೆಕ್ಟ್ಸ್ ಲಿ. ಸಂಸ್ಥೆ ಈ ನಿರ್ಮಾಣದ ಗುತ್ತಿಗೆಯನ್ನು ಪಡೆದುಕೊಂಡಿದೆ.
