ಅಕ್ರಮ ಗನ್ ಖರೀದಿ ಪ್ರಕರಣದಲ್ಲಿ ಮಗನ ಆರೋಪ ಸಾಬೀತಾದರೆ ಕ್ಷಮಿಸುವುದಿಲ್ಲ: ಜೋ ಬೈಡನ್

Date:

ಅಕ್ರಮ ಗನ್ ಖರೀದಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ತಮ್ಮ ಮಗ ಹಂಟರ್ ಬೈಡನ್ ತಪ್ಪಿತಸ್ಥನೆಂದು ಸಾಬೀತಾದರೆ ಆತನನ್ನು ಕ್ಷಮಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ನಿಮ್ಮ ಮಗ ತಪ್ಪಿತಸ್ಥನೆಂದು ಸಾಬೀತಾದರೆ ಅವನನ್ನು ಕ್ಷಮಿಸುವುದಿಲ್ಲವೇ ? ಎಂಬ ಪತ್ರಕರ್ತರ ಪ್ರಶ್ನೆಗೆ ಬೈಡನ್, ಹೌದು ಕ್ಷಮಿಸುವುದಿಲ್ಲ ಎಂದು ಉತ್ತರಿಸಿದ್ದಾರೆ. ಡೆಲವೇರ್ ರಾಜ್ಯದಲ್ಲಿ ನಡೆಯುತ್ತಿರುವ ತನಿಖೆಯ ವರದಿ ಏನೇ ಬಂದರೂ ಅದನ್ನು ಸ್ವೀಕರಿಸುವುದಾಗಿ ಬೈಡನ್ ತಿಳಿಸಿದ್ದಾರೆ.

ಸಹೋದರ ಬಿಯೊ ಸಾವಿನ ಬಳಿಕ ಮಾದಕ ವ್ಯಸನಿಯಾಗಿದ್ದ ಬೈಡನ್ ಪುತ್ರ ಹಂಟರ್ ಇದೀಗ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವುದು ಬೈಡನ್ ಕುಟುಂಬಕ್ಕೆ ನೋವಿನ ಸಂಗತಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಫ್ರಾನ್ಸ್‌ಗೆ ತೆರಳುವ ಮುನ್ನ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಸಹ ವಿಚಾರಣೆ ಎದುರಿಸಿದ್ದಾರೆ. ಈ ಹಿಂದೆ ಶ್ವೇತಭವನವು ಸಹ ಬೈಡನ್ ತಮ್ಮ ಮಗನನ್ನು ಕ್ಷಮಿಸುವುದಿಲ್ಲ ಎಂದು ಹೇಳಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ

‘ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಅಧ್ಯಕ್ಷರು ಅವರ ಮಗನನ್ನು ಕ್ಷಮಿಸುವುದಿಲ್ಲ’ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಕರೈನ್ ಜೀನ್ ಪೀರೆ ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು.

ಅಕ್ರಮವಾಗಿ ಗನ್ ಖರೀದಿ ಮತ್ತು ಮಾದಕ ವಸ್ತು ಸೇವಿಸಿದ ಸಂದರ್ಭದಲ್ಲಿ ಗನ್ ಇಟ್ಟುಕೊಂಡಿದ್ದ ಆರೋಪವು ಬೈಡನ್ ಪುತ್ರ ಹಂಟರ್ ಬೈಡನ್ ಮೇಲಿದ್ದು, ಇವೆರೆಡೂ ಆರೋಪಗಳು ಅಮೆರಿಕದ ಫೆಡರಲ್ ಕಾನೂನಿನ ಉಲ್ಲಂಘನೆಯಾಗಿವೆ. ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರ ಮಗ ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲಾಗಿದೆ.

ಮೂರು ಆರೋಪಗಳಲ್ಲಿ ಬೈಡನ್ ನಿರಪರಾಧಿ ಎಂದು ಸಾಬೀತಾಗಿದೆ. ಆದರೆ ಮದ್ಯ ಮತ್ತು ಕೊಕೇನ್ ವ್ಯಸನಿಯಾಗಿರುವುದನ್ನು ಹಂಟರ್ ಒಪ್ಪಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ: ಮೋದಿ ಮಾಡಿದ ಘನಕಾರ್ಯವಾದರೂ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ...

ಶಾಲಾ ಮಿನಿಬಸ್ ಅಪಘಾತ; 12 ಮಕ್ಕಳು ದಾರುಣ ಸಾವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಅಪಘಾತಕ್ಕೀಡಾಗಿದ್ದು, 12 ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ...

ಜೈಲಿನಲ್ಲೇ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಸಾವು ಪ್ರಕರಣ; ತನಿಖೆ ನಡೆಸುವಂತೆ ಭಾರತಕ್ಕೆ ಅಮೆರಿಕ ಒತ್ತಾಯ

ಜೈಲಿನಲ್ಲಿದ್ದಾಗಲೇ 2021ರ ಜುಲೈ 5ರಂದು ಸಾವನ್ನಪ್ಪಿದ ಮಾನವ ಹಕ್ಕುಗಳ ಹೋರಾಟಗಾರ ಫಾದರ್...