ಮೂರು ವರ್ಷದ ಬಾಲಕಿ ಮೇಲೆ ಆಕೆಯ ಸಂಬಂಧಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವಡಮಲಪೇಟೆಯಲ್ಲಿ ನಡೆದಿದೆ.
22 ವರ್ಷದ ಆರೋಪಿ ಸುಶಾಂತ್ ಶುಕ್ರವಾರ ಸಂಜೆ 4:30ರ ಸುಮಾರಿಗೆ ಬಾಲಕಿಗೆ ಚಾಕಲೇಟ್ ಆಮಿಷವೊಡ್ಡಿ ಸಮೀಪದ ಹೊಲಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಯೇ ಆಕೆಯ ಶವವನ್ನು ಹೂತು ಹಾಕಿದ್ದಾನೆ ಎಂದು ತಿರುಪತಿ ಜಿಲ್ಲಾ ಎಸ್‌ಪಿ ಸುಬ್ಬರಾಯುಡು ತಿಳಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ನಿದ್ದೆ ಬರಿಸುವ ಇಂಜೆಕ್ಷನ್ ನೀಡಿ ಅತ್ಯಾಚಾರ; ವೈದ್ಯ ಬಂಧನ
ಬಾಲಕಿಯು ಮನೆಗೆ ವಾಪಸ್ ಬರದ ಕಾರಣ ಆಕೆಯ ಪೋಷಕರು ಬಾಲಕಿಗಾಗಿ ಹುಡುಕಾಡಿದ್ದಾರೆ. ಆಕೆ ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು.
ಬಾಲಕಿ ಎಲ್ಲಿಯೂ ಸಿಗದಿದ್ದಾಗ ಬಾಲಕಿಯ ಪೋಷಕರು ಆತನನ್ನು ಪ್ರಶ್ನಿಸಿದ್ದರು. ಪೋಷಕರ ಅನುಮಾನದ ಆಧಾರದಲ್ಲಿ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದಾಗ ಆರೋಪಿ ತಾನು ಅತ್ಯಾಚಾರ ಎಸಗಿ ಬಾಲಕಿಯ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ.
