ಅತಿ ಹೆಚ್ಚು ತಾಪಮಾನದ ವರ್ಷಗಳಲ್ಲಿ 2022ಕ್ಕೆ 5ನೇ ಸ್ಥಾನ: ವಿಶ್ವಸಂಸ್ಥೆ

Date:

Advertisements
  • 1850ರಿಂದ ಜಾಗತಿಕ ಉಷ್ಣಾಂಶದ ದತ್ತಾಂಶ ಲಭ್ಯ ಎಂದ ವಿಶ್ವಸಂಸ್ಥೆ
  • ಜಾಗತಿಕ ತಾಪಮಾನದ ಸ್ಥಿತಿಗತಿ-2022 ವರದಿಯಲ್ಲಿ ಮಾಹಿತಿ ಬಹಿರಂಗ

2022ರಲ್ಲಿ ಅತಿಹೆಚ್ಚು ತಾಪಮಾನ ದಾಖಲಾಗಿದ್ದು ಜಾಗತಿಕವಾಗಿ ಅತಿಹೆಚ್ಚು ಸರಾಸರಿ ಉಷ್ಣಾಂಶ ದಾಖಲಾದ ವರ್ಷಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ ಎಂದು ವಿಶ್ವಸಂಸ್ಥೆ ಅಂಗಸಂಸ್ಥೆಯಾಗಿರುವ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ವರದಿ ಹೇಳಿದೆ.

ಜಾಗತಿಕ ಸರಾಸರಿ ಉಷ್ಣಾಂಶಕ್ಕಿಂತ 2022ರಲ್ಲಿ 1.15 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಸರಾಸರಿ ಉಷ್ಣಾಂಶ ದಾಖಲಾಗಿದೆ. 1850ರಿಂದ ಜಾಗತಿಕ ಉಷ್ಣಾಂಶದ ದತ್ತಾಂಶಗಳು ಲಭ್ಯವಿದೆ.

ಅಲ್ಲದೆ 2015ರಿಂದ 2022ರ ನಡುವಣ ಅವಧಿ ಕಳೆದ 173 ವರ್ಷಗಳಲ್ಲಿ ಅತ್ಯಂತ ಬಿಸಿಯ ಎಂಟು ವರ್ಷಗಳಾಗಿವೆ ಎಂದು ಡಬ್ಲ್ಯುಎಂಒ ಹೇಳಿದೆ.

Advertisements

ಅತಿಹೆಚ್ಚು ತಾಪಮಾನ ದಾಖಲಾದ ವರ್ಷ, ಪ್ರದೇಶದ ಬಗ್ಗೆ ಡಬ್ಲ್ಯುಎಂಒ ಶುಕ್ರವಾರ (ಏಪ್ರಿಲ್ 21) ಬಿಡುಗಡೆಯಾದ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.

‘ಜಾಗತಿಕ ತಾಪಮಾನದ ಸ್ಥಿತಿಗತಿ-2022’ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

ಫೆಸಿಫಿಕ್‌ ಸಾಗರದ ಮೇಲ್ಮೈಗೆ ತಣ್ಣೀರಿನ ಪ್ರವಾಹಗಳನ್ನು ತರುವ ಮೂಲಕ ದಕ್ಷಿಣ ಏಷ್ಯಾ ಮತ್ತು ಆಸ್ಟ್ರೇಲಿಯದಲ್ಲಿ ಅತಿವೃಷ್ಟಿಗೆ ಕಾರಣವಾಗುವ ಎಲ್‌-ನಿನೊ ವಿದ್ಯಮಾನ 2020ರಲ್ಲಿ ಸಂಭವಿಸಿತ್ತು.

ಇದು ಸಾಮಾನ್ಯವಾಗಿ ಆರು-ಏಳು ವರ್ಷಗಳಿಗೆ ಒಮ್ಮೆ ಮರುಕಳಿಸುತ್ತದೆ. ಆದರೆ 2020ರಿಂದ ಅದು ಸತತ ಮೂರು ವರ್ಷ ಎಲ್‌-ನಿನೊ ಉಂಟಾಗಿದೆ.

ಈ ಕಾರಣದಿಂದ ವಾತಾವರಣ ತಂಪಾಗಿದ್ದರೂ 2022ರ ಜಾಗತಿಕ ಸರಾಸರಿ ಉಷ್ಣಾಂಶ ಅತ್ಯಧಿಕ ಮಟ್ಟದಲ್ಲಿ ಇತ್ತು ಎಂದು ಡಬ್ಲ್ಯುಎಂಒ ವರದಿ ಹೇಳಿದೆ.

1850ರಿಂದ 1900ರ ನಡುವಣ 50 ವರ್ಷಗಳ ಜಾಗತಿಕ ಸರಾಸರಿ ಉಷ್ಣಾಂಶ 13.9 ಡಿಗ್ರಿ ಸೆಲ್ಸಿಯಸ್‌ ಅನ್ನು ಜಾಗತಿಕ ಉಷ್ಣಾಂಶ ಎಂದು ಪರಿಗಣಿಸಲಾಗುತ್ತದೆ.

ಕೈಗಾರಿಕೆ ಮತ್ತು ಅಭಿವೃದ್ಧಿ ಕಾರಣಗಳಿಂದ ಈ ಉಷ್ಣಾಂಶದಲ್ಲಿ ಏರಿಕೆಯಾಗಿದೆ. ಈ ಸ್ಥಿತಿಯನ್ನು ಜಾಗತಿಕ ತಾಪಮಾನ ಏರಿಕೆ ಎಂದು ಕರೆಯಲಾಗುತ್ತದೆ. ಈ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ ಒಳಗೆ ನಿಯಂತ್ರಿಸಬೇಕು ಎಂಬುದು ಜಾಗತಿಕ ತಾಪಮಾನ ನಿಯಂತ್ರಣದ ಗುರಿ.

ಈ ಉಷ್ಣಾಂಶದಲ್ಲಿ ಏರಿಕೆಯಾದರೆ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ. ಜಾಗತಿಕ ಸರಾಸರಿ ಉಷ್ಣಾಂಶಕ್ಕಿಂತ 2022ರಲ್ಲಿ 1.15 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಉಷ್ಣಾಂಶ ದಾಖಲಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪೆತ್ತೇರಿ ತಾಲಾಸ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಶ್ವದಲ್ಲಿ ಹಲವೆಡೆ ಪ್ರಾಕೃತಿಕ ವಿಕೋಪಗಳು ಉಂಟಾಗಿವೆ ಎಂದು ಡಬ್ಲ್ಯುಎಂಒ ವರದಿ ವಿವರಿಸಿದೆ.

“ಜಾಗತಿಕವಾಗಿ ಹಸಿರುಮನೆ ಪರಿಣಾಮ ಹೆಚ್ಚಾಗುತ್ತಿದೆ. ಪರಿಣಾಮ ಹವಾಮಾನ ಬದಲಾವಣೆ ಮುಂದುವರಿಯುತ್ತದೆ. ಇದರಿಂದ ಜಗತ್ತಿನ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. 2022ರಲ್ಲಿ ಪೂರ್ವ ಆಫ್ರಿಕಾದಲ್ಲಿ ಕಂಡು ಬಂದ ಬರಗಾಲ, ಪಾಕಿಸ್ತಾನದಲ್ಲಿ ಹಿಂದೆಂದೂ ಕಾಣದ ಮಳೆ, ಚೀನಾ ಮತ್ತು ಯುರೋಪ್‌ನಲ್ಲಿ ದಾಖಲೆಯ ಶಾಖದ ಅಲೆಗಳು ಲಕ್ಷಾಂತರ ಜನರನ್ನು ಹೈರಾಣಾಗಿಸಿವೆ” ಎಂದು ವರದಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಭಾರತದ ‘ಐ ಡ್ರಾಪ್’ ಅಮೆರಿಕದ ಕಣ್ಣಿನ ಸೋಂಕುಗಳಿಗೆ, ಸಮಸ್ಯೆಗಳಿಗೆ ಕಾರಣ : ಸಿಡಿಸಿ

ತಾಪಮಾನ ಏರಿಕೆಯ ಪರಿಣಾಮ 2022ರಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಪೂರ್ವ ಮುಂಗಾರಿಯ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಆಹಾರದ ಭದ್ರತೆಯ ಮೇಲೆ ಹೊಡೆತ ಬಿದ್ದಿದೆ.

ಪರಿಣಾಮ ಆಹಾರದ ಅಭಾವ ಉಂಟಾಗಿದೆ ಎಂದು ವರದಿ ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X