2017ರ ಜೂನ್ನಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕಿಸ್ತಾನ ಜಯಗಳಿಸಿದ ಬಳಿಕ ಮುಸ್ಲಿಂ ಯುವಕರು ವಿಜಯೋತ್ಸವ ನಡೆಸಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿದ್ದ 17 ಮಂದಿಯನ್ನು ಆರು ವರ್ಷದ ಬಳಿಕ ನ್ಯಾಯಾಲಯವು ಖುಲಾಸೆಗೊಳಿಸಿದೆ. ಅಲ್ಲದೇ, ಪೊಲೀಸರ ಕಟ್ಟುಕಥೆಯನ್ನು ಬಯಲಿಗೆಳೆದಿದೆ.
ಪಾಕಿಸ್ತಾನದ ವಿಜಯವನ್ನು ಆಚರಿಸಿದ ಆರೋಪದ ಮೇಲೆ 17 ಮುಸ್ಲಿಂ ಪುರುಷರು ಮತ್ತು ಇಬ್ಬರು ಅಪ್ರಾಪ್ತರ ಮೇಲೆ ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಾಗಿತ್ತು.
ಆರು ವರ್ಷಗಳ ನಂತರ ಇದೀಗ ಮಧ್ಯಪ್ರದೇಶದ ನ್ಯಾಯಾಲಯವು ಹಿಂದೂ ದೂರುದಾರ ಮತ್ತು ಸರ್ಕಾರಿ ಸಾಕ್ಷಿಗಳು ಸುಳ್ಳು ಹೇಳಿಕೆಗಳನ್ನು ನೀಡಲು ಒತ್ತಾಯಿಸಿರುವುದನ್ನು ಬಯಲಿಗೆಳೆದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ‘ ಪೊಲೀಸರ ಕಟ್ಟುಕಥೆ’ ಎಂದು ಹೇಳಿದೆ.
ತಾವು ಮಾಡದ ತಪ್ಪಿಗೆ ಅಕ್ಟೋಬರ್ 2023 ರಲ್ಲಿ ಬಿಡುಗಡೆಗೊಂಡ ನಿರಪರಾಧಿಗಳು ಆರು ವರ್ಷ ಜೈಲಿನಲ್ಲಿ ತಮ್ಮ ಜೀವನ ಕಳೆಯಬೇಕಾಗಿ ಬಂದಿತ್ತು. ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಥಳಿಸಲಾಯಿತು ಮತ್ತು ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿದ್ದಾರೆ.
Hello @manakgupta, Here is an update.
76 Months with a tag of “Traitor” or “Terrorist”, 6 years after the MP police accused 17 Muslim men of raising ‘Pakistan Zindabad’ slogans and celebrating Pakistan winning a cricket match, a court found the case was fabricated. One accused,… https://t.co/8SwlNedMBS pic.twitter.com/GczDGwctkH— Mohammed Zubair (@zoo_bear) March 20, 2024
40 ವರ್ಷದ ಒಬ್ಬ ಆರೋಪಿ ಇಬ್ಬರು ಮಕ್ಕಳ ತಂದೆ, ಈ ಪ್ರಕರಣದ ಕಾರಣದಿಂದಾಗಿ ಮನನೊಂದು ಮುರಿದು 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಕರಣದ ಹಿನ್ನೆಲೆ
18 ಜೂನ್ 2017 ರಂದು ಲಂಡನ್ನ ಓವಲ್ ಸ್ಟೇಡಿಯಂನಲ್ಲಿ ಭಾರತವು ಚಾಂಪಿಯನ್ ಟ್ರೋಫಿ ಫೈನಲ್ನಲ್ಲಿ ಸೋತಾಗ, ಮಧ್ಯಪ್ರದೇಶದ ಬುರ್ಹಾನ್ ಪುರ ಜಿಲ್ಲೆಯ ಮೊಹಾದ್ನ ಗ್ರಾಮಸ್ಥರು ಪಾಕಿಸ್ತಾನವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿದ್ದಾರೆ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಲ್ಲದೇ, ಪಟಾಕಿಗಳನ್ನು ಸಿಡಿಸಿದ್ದಾರೆ ಎಂಬ ವದಂತಿ ಹರಡಿಸಲಾಗಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ , 1860 ರ ಅಡಿಯಲ್ಲಿ ದೇಶದ್ರೋಹ ಮತ್ತು ಕ್ರಿಮಿನಲ್ ಪಿತೂರಿಗಾಗಿ ಮೊಕದ್ದಮೆ ದಾಖಲಿಸಲಾಗಿತ್ತು. ಆರೋಪಿಗಳು ತಾವು ತಪ್ಪು ಮಾಡಿಲ್ಲ ಎಂದು ಹೇಳಿದರೂ ಸಾಕ್ಷ್ಯಾಧಾರವಿಲ್ಲದೆ ಪ್ರಕರಣ ಮುಂದುವರಿಸಲಾಗಿತ್ತು.
A lot of News Anchors did multiple debates including @manakgupta @RubikaLiyaquat @SudheerChaudhry @AMISHDEVGAN. Will they do it now? After the charges are proven to be false 76 months after witch hunts?
6 Years After 17 Muslim men were accused of raising Pakistan Zindabad… https://t.co/EmQCv92q14— Mohammed Zubair (@zoo_bear) March 20, 2024
ಆರು ವರ್ಷದ ನಂತರ ಇದೀಗ ಸಾಕ್ಷ್ಯಾಧಾರ ಇಲ್ಲದ ಕಾರಣ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ.
ಹಿಂದೂ ದೂರುದಾರರು ಮತ್ತು ಸರ್ಕಾರಿ ಸಾಕ್ಷಿಗಳು ಸುಳ್ಳು ಆರೋಪಗಳನ್ನು ಮಾಡಲು ನಮಗೆ ಒತ್ತಡ ಹೇರಲಾಗಿತ್ತು ಎಂದು ನ್ಯಾಯಾಲಯದಲ್ಲಿ ಸತ್ಯ ನುಡಿದ ಕಾರಣ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ದೇವಂದರ್ ಶರ್ಮಾ ಅವರು 16 ಮುಸ್ಲಿಂ ಆರೋಪಿಗಳನ್ನು (2019 ರಲ್ಲಿ ಒಬ್ಬರು ಮೃತಪಟ್ಟಿದ್ದಾರೆ) ಖುಲಾಸೆಗೊಳಿಸಿದರು.
कोर्ट को 76 माह लग गए 17 मुस्लिमो को निर्दोष साबित करने में।
यह व्यक्ति मध्य प्रदेश के बुरहानपुर जिले के सुभाष कोली हैं
19 जून 2017 को इनके नाम से उन मुस्लिमो के ऊपर पकिस्तान जिंदाबाद का नारा लगाने, मिठाई बाटने के आरोप में देशद्रोह का मामला दर्ज़ किया गया था
कोली ने घटना के… pic.twitter.com/EwiCYy3aqd
— Mobin LLB (@immobink) March 20, 2024
ದೇಶದ ಹಲವು ಗೋದಿ ಮಾಧ್ಯಮಗಳು ಅಂದು ಈ ಅಮಾಯಕರನ್ನು ‘ದೇಶದ್ರೋಹಿ’ಗಳೆಂದು ಬಿಂಬಿಸಿ ಸುದ್ದಿ ಪ್ರಸಾರ ಮಾಡಿದ್ದವು. ಇದೀಗ ಅವರು ಖುಲಾಸೆಗೊಂಡಾಗ ಸುಮ್ಮನಿದ್ದು, ಮಾಧ್ಯಮಗಳು ತಮ್ಮ ಕುತಂತ್ರ ಬುದ್ದಿಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
