ವ್ಯಕ್ತಿಯೊಬ್ಬ ಹಿಂದೂ ದೇಶದಲ್ಲಿರಬೇಕಾದರೆ ನೀನು ಜೈ ಶ್ರೀರಾಮ್ ಎನ್ನಬೇಕು ಎಂದ ವ್ಯಕ್ತಿಯೊಬ್ಬನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಫ್ಯಾಕ್ಟ್ ಚೆಕ್ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಮದ್ಯಪಾನ ಮಾಡಿದ್ದ ಈ ವ್ಯಕ್ತಿ ಮೆಡಿಕಲ್ ಸ್ಟೋರ್ ಮಾಲೀಕನಿಗೆ ‘ನೀನು ಹಿಂದೂ ದೇಶದಲ್ಲಿ ವಾಸಿಸಲು ಬಯಸಿದರೆ, ನೀನು ಜೈ ಶ್ರೀರಾಮ್ ಹೇಳಬೇಕು’ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ ಮೆಡಿಕಲ್ ಸ್ಟೋರ್ ಮುಂದೆ ಕೆಲ ಸಮಯ ನಿಂತು ಅಂಗಡಿ ಮಾಲೀಕನಿಗೆ ಬೆದರಿಕೆಯೊಡ್ಡಿದ್ದಾನೆ” ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೊಹಮ್ಮದ್ ಝುಬೈರ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಲ ಬಾಚುವ ಮೃತ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ. ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಆದೇಶ
”ಮೊಹಮ್ಮದ್ ಝುಬೈರ್ ಪೋಸ್ಟ್‌ಗೆ ಬೆಂಬಲ ವ್ಯಕ್ತಪಡಿಸಿರುವ ನೆಟ್ಟಿಗರೊಬ್ಬರು, ಭಾರತೀಯ ಸಂವಿಧಾನವು ನಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ, ನಾವು ಯಾರ ಮೇಲೂ ಯಾವುದೇ ಘೋಷಣೆಯನ್ನು ಹೇರುವಂತಿಲ್ಲ ಎಂದು ಟ್ವೀಟ್ ಮಾಡಿದರೆ, ಮತ್ತೊಬ್ಬರು ಗುಜರಾತ್‌ನಲ್ಲಿ ಈ ರೀತಿಯ ಘಟನೆಗಳು ಎಲ್ಲೆ ಮೀರಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
A man ( Drunk?) can be heard saying to the shopkeeper, "If you want to live in Hindu country, You'll have to say Jai Shri Ram"
Incident from Gujarat. Accused arrested.pic.twitter.com/1dNqvxCRe3— Mohammed Zubair (@zoo_bear) November 28, 2023