ಹರಿಯಾಣದಲ್ಲಿ ಕಾಂಗ್ರೆಸ್‌ನ ಕೆಲವು ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿ ಬಿಜೆಪಿ ಮುನ್ನಡೆ ಗಳಿಸಲು ಕಾರಣವಾಗಿದ್ದ ಆಪ್, ಜಮ್ಮು ಕಾಶ್ಮೀರದಲ್ಲಿ ಮೊದಲ ಗೆಲುವಿನ ಖಾತೆ ತೆರೆದಿದೆ. ದೋಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೇಹ್‌ರಾಜ್ ಮಲಿಕ್ ಅವರು ಬಿಜೆಪಿಯ ಗಜಯ್ ಸಿಂಗ್ ವಿರುದ್ಧ 4 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಮೇಹ್‌ರಾಜ್ ಮಲಿಕ್ ಅವರು ಆಮ್ ಆದ್ಮಿ ಪಕ್ಷ 2020ರಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಜಯ ಗಳಿಸಲು ಕಾರಣರಾಗಿದ್ದರು. ಚುನಾವಣಾ ಆಯೋಗದ ವರದಿಯ ಪ್ರಕಾರ ಗಜಯ್ ಸಿಂಗ್ ವಿರುದ್ಧ 13 ಸುತ್ತುಗಳಲ್ಲೂ ಮುನ್ನಡೆ ಸಾಧಿಸಿದ್ದರು. ದೋಡಾ ಕ್ಷೇತ್ರದಲ್ಲಿ 2014ರಲ್ಲಿ ಬಿಜೆಪಿಯ ಶಕ್ತಿ ರಾಜ್ ಗೆಲುವು ಗಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ
ದೋಡಾ ಕ್ಷೇತ್ರದಲ್ಲಿ 1962 ರಿಂದಲೂ ಸಂಪ್ರಾದಾಯಿಕವಾಗಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಗಳು ಜಯ ಗಳಿಸುತ್ತಿದ್ದಾರೆ.
ಒಟ್ಟು 90 ಕ್ಷೇತ್ರಗಳ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಎನ್‌ಸಿ – ಕಾಂಗ್ರೆಸ್ ಮೈತ್ರಿಕೂಟ 48, ಬಿಜೆಪಿ 29 ಹಾಗೂ ಪಿಡಿಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.