ದೆಹಲಿಯಿಂದ ಅಮೆರಿಕದ ಸ್ಯಾನ್ ಪ್ರಾನ್ಸಿಸ್ಕೊಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವೊಂದು 8 ಗಂಟೆಗಳ ಕಾಲ ತಡವಾದ ಕಾರಣ ನಿಲ್ದಾಣದಲ್ಲಿ ಎಸಿ ವ್ಯವಸ್ಥೆಯಿಲ್ಲದೆ ಹಲವು ಪ್ರಯಾಣಿಕರು ಮೂರ್ಛೆ ಹೋದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಹಲವು ಪ್ರಯಾಣಿಕರು ತಮಗಾದ ನೋವುಗಳನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಹಲವರು ವಿಮಾನಕ್ಕಾಗಿ ನಿಲ್ದಾಣದಲ್ಲಿ ಕಾಯುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಬರೆದುಕೊಂಡಿರುವ ಪತ್ರಕರ್ತರಾದ ಶ್ವೇತಾ ಪುಂಜ್, ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವು 8 ಗಂಟೆಗಳ ಕಾಲ ತಡವಾದ ಕಾರಣ ಸೂಕ್ತವಾದ ಕುರ್ಚಿಯಿಲ್ಲದೆ ಹಲವರು ನೆಲದ ಮೇಲೆ ಕುಳಿತುಕೊಂಡಿದ್ದರು. ಕೆಲವರು ಎಸಿ ವ್ಯವಸ್ಥೆಯಿಲ್ಲದ ಕಾರಣ ಮೂರ್ಛೆ ಕೂಡ ಹೋದರು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಟ್ಯಾಗ್ ಮಾಡಿರುವ ಶ್ವೇತಾ ಅವರು ಇಡೀ ಘಟನೆಯನ್ನು ಅಮಾನವೀಯ ಎಂದು ಕರೆದಿದ್ದಾರೆ.
“ಏರ್ ಇಂಡಿಯಾದ ಖಾಸಗೀಕರಣದ ಕಥೆಯು ವಿಫಲವಾಗಿದೆ. ಡಿಜಿಸಿಎ ಎಐ 183 ವಿಮಾನವು 8 ಗಂಟೆಗಳ ಕಾಲ ತಡವಾಗಿದೆ. ಪ್ರಯಾಣಿಕರು ಎಸಿ ವ್ಯವಸ್ಥೆಯಿಲ್ಲದೆ ಕೆಳಗೆ ಕುಳಿತ್ತಿದ್ದರು. ಎಸಿಯಿಲ್ಲದ ಕಾರಣ ಕೆಲವರು ಅಸ್ವಸ್ಥರಾದರು. ಇದು ಅಮಾನವೀಯ” ಎಂದು ಶ್ವೇತ ಪುಂಜ್ ಹೇಳಿದ್ದಾರೆ.
ಶ್ವೇತಾ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ, ನಾವು ಅಡಚಣೆಗಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ತಂಡ ತಡವಾಗಿರುವ ಬಗ್ಗೆ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂಬುವನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ನಿರಂತರ ಬೆಂಬಲ ಹಾಗೂ ತಿಳುವಳಿಕೆಗಾಗಿ ಮೆಚ್ಚಿಗೆ ವ್ಯಕ್ತಪಡಿಸುತ್ತೇವೆ. ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸಲು ನಮ್ಮ ತಂಡಕ್ಕೆ ಜಾಗೃತಗೊಳಿಸಿದ್ದೇವೆ” ಎಂದು ಹೇಳಿದೆ.
