ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಯನ್ನು ನೆಲಕ್ಕುರುಳಿಸಿ, ಅದನ್ನು ನಾಲೆಗೆ ಎಸೆದಿದ ಘಟನೆ ಪ್ರಯಾಗ್ ರಾಜ್ನ ಗಂಗಾನಗರದ ಕೊಡಾಪುರ್ ಗ್ರಾಮದಲ್ಲಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಪ್ರತಿಮೆಯನ್ನು ವ್ಯಾಜ್ಯವಿದ್ದ ಹೊಲದ ರಸ್ತೆಯೊಂದರಲ್ಲಿ ಸ್ಥಾಪಿಸಲಾಗಿತ್ತು ಎನ್ನಲಾಗಿದೆ ಎಂದು ಅವರು ಹೇಳಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ಈ ಪ್ರತಿಮೆಯನ್ನು ನೆಲಕ್ಕುರುಳಿಸಿದ್ದು, ನಂತರ ಅದನ್ನು ಸಮೀಪದ ನಾಲೆಯೊಂದಕ್ಕೆ ಎಸೆದಿದ್ದರು ಎಂದು ಹೇಳಲಾಗಿದೆ. ಈ ಪ್ರತಿಮೆಯ ವಿಚಾರದಲ್ಲಿ ಸ್ಥಳೀಯರ ನಡುವೆ ವೈಮನಸ್ಸು ಮೂಡಿತ್ತು ಎಂದು ಗಂಗಾನಗರ ಉಪ ಪೊಲೀಸ್ ಆಯುಕ್ತ ಕುಲದೀಪ್ ಗುಣಾವತ್ ಸೋಮವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಹಾಗೂ ಶೀಘ್ರದಲ್ಲೇ ಅಂಬೇಡ್ಕರ್ ಅವರ ನೂತನ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಸದ್ಯ ಸ್ಥಳದಲ್ಲಿ ಶಾಂತ ವಾತಾವರಣವಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದೂ ಅವರು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಹಲವು ಬಾರಿ ನಡೆದಿರುವ ಘಟನೆಗಳು
ಕಳೆದ ಕೆಲವು ವರ್ಷಗಳಿಂದ ಆಂಧ್ರಪ್ರದೇಶವು ಇಂತಹ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದೆ. ಫೆಬ್ರವರಿ 13, 2023 ರಂದು, ನಂದ್ಯಾಲ್ ಜಿಲ್ಲೆಯ ಬೊಮ್ಮಲಸತ್ರಂ ಗ್ರಾಮದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿಗಳ ಬಂಧನವಾಗಲಿಲ್ಲ.
ಫೆಬ್ರವರಿ 2021 ರಲ್ಲಿ, ಆಂಧ್ರಪ್ರದೇಶದ ಚಿಂತಲಪುಡಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪಾದರಕ್ಷೆಗಳ ಹಾರ ಹಾಕಿ ಅಪವಿತ್ರಗೊಳಿಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು. ಎರಡು ವರ್ಷಗಳ ಹಿಂದೆ, 2018 ರಲ್ಲಿ, ವಿಶಾಖಪಟ್ಟಣದ ಹೊರವಲಯದಲ್ಲಿರುವ ಪೆಡಗಂಟ್ಯಾಡದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸುವ ಹಲವಾರು ಘಟನೆಗಳು ನಡೆಯುತ್ತಲೇ ಇವೆ.
ಕಳೆದ ವರ್ಷ, ಡಿಸೆಂಬರ್ 2024 ರಲ್ಲಿ, ಗುಜರಾತ್ನ ಖೋಖರಾದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸ ಮಾಡಿದ್ದಕ್ಕಾಗಿ ಅಹಮದಾಬಾದ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
🚨 SHOCKING & SHAMEFUL
— Jan Ki Baat (@jankibaat1) July 21, 2025
In Prayagraj’s Kodapur village, Samajwadi Party supporters allegedly vandalized Dr. B.R. Ambedkar’s statue and threw it into a drain.#UttarPradesh pic.twitter.com/01Cx0P33K0