ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದಲ್ಲಿ ಏಳು ವರ್ಷದ ಬಾಲಕಿಯ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವುತ್ತಿರುವಾಗ, ಬಾಲಕಿಯು ತನ್ನ ಪುಸ್ತಕ ಮತ್ತು ಶಾಲಾ ಬ್ಯಾಗನ್ನು ಎದೆಗಪ್ಪಿಕೊಂಡು ಓಡಿದ್ದು, ಈ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಜಲಾಲ್‌ಪುರದ ಅನನ್ಯಾ ಎಂಬ ಹುಡುಗಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ತನ್ನ ಶಿಕ್ಷಣ ಮುಂದುವರಿಸುವುದಕ್ಕಾಗಿ ಹುಡುಗಿಯ ಪರಿಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಜನರು ಗುಡಿಸಲುಗಳನ್ನು ಕೆಡವುವ ಮೊದಲು ಅವುಗಳಿಂದ ಅಗತ್ಯ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದರು. ಅನನ್ಯಾ ತನ್ನ ಪುಸ್ತಕಗಳ ಬಗ್ಗೆ ನೆನಪಾಗಿ ಪಕ್ಕದಲ್ಲಿನ ಗುಡಿಸಲನ್ನು ನೆಲಸಮ ಮಾಡುವಾಗ ತನ್ನ ಶಾಲಾ ಚೀಲ ಮತ್ತು ಪುಸ್ತಕಗಳೊಂದಿಗೆ ಗುಡಿಸಲಿನಿಂದ ಹೊರಗೆ ಓಡುತ್ತಿರುವುದು ಮೊಬೈಲ್‌ನಲ್ಲಿ ಸೆರೆಯಾಗಿದೆ.
"Beti Bachao, Beti Padhao" is just a hollow slogan for those in power.
— Prithviraj Sathe (@PrithvirajS_INC) March 22, 2025
In reality, they don’t even care about our daughters. Today, a first-grade student, Ananya from UP, is going viral—not for her achievements, but for carrying her books while her home is bulldozed.
Shameful! pic.twitter.com/XFxknJueca
ವಿದ್ಯಾರ್ಥಿನಿ ಅನನ್ಯಾ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದವರು. ಸ್ಥಳೀಯ ಆಡಳಿತವು ಭೂ ಅತಿಕ್ರಮಣ ಆರೋಪ ಹೊರಿಸಿ ಈ ಪ್ರದೇಶದಲ್ಲಿ ಹಲವಾರು ಮನೆಗಳನ್ನು ಕೆಡವಿತ್ತು. ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬುಲ್ಡೋಜರ್ ಬಳಸಿದಾಗ ಹಲವಾರು ಅಸಹಾಯಕ ಸ್ಥಳೀಯರು ಅಳುವುದು ಮತ್ತು ಕಿರುಚುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಅನನ್ಯಾ ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ವೀಡಿಯೊ ದೃಶ್ಯಗಳು ವೈರಲಾದ ಬಳಿಕ, ಯುಪಿಯ ಯೋಗಿ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಇಂತಹ ಕ್ರಮಗಳ ಮೂಲಕ ಅನನ್ಯಾ ಅವರಂತಹ ಅನೇಕ ಮಕ್ಕಳ ಕನಸುಗಳನ್ನು ಸರ್ಕಾರ ನಾಶಮಾಡಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸುತ್ತಿದ್ದಾರೆ. ಜೆಸಿಬಿ ಮೂಲಕ ಶಿಕ್ಷಣದ ಹಕ್ಕನ್ನು ಸಹ ನಿರಾಕರಿಸಲಾಗುತ್ತಿದೆ ಎಂಬ ಟೀಕೆಯನ್ನೂ ಕೂಡ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಎಚ್ಚರಿಕೆಗಳ ಹೊರತಾಗಿಯೂ ಯುಪಿ ಸರ್ಕಾರ ಬುಲ್ಡೋಜರ್ ರಾಜ್ ವಿರುದ್ಧ ತನ್ನ ಕ್ರಮವನ್ನು ಮುಂದುವರೆಸಿದೆ.
ಈ ವಿಡಿಯೋ ವೈರಲ್ ಆದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಅಂಬೇಡ್ಕರ್ ನಗರದ ಆಡಳಿತಾಧಿಕಾರಿಯೊಬ್ಬರು ತಮ್ಮ ಹೆಮ್ಮೆಯನ್ನು ಪ್ರದರ್ಶಿಸಲು ಜನರ ಗುಡಿಸಲುಗಳನ್ನು ಕೆಡವುತ್ತಿದ್ದಾರೆ. ಈ ಮಧ್ಯೆಯೇ ಓರ್ವ ಪುಟ್ಟ ಹುಡುಗಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಪುಸ್ತಕಗಳನ್ನು ಉಳಿಸಿಕೊಳ್ಳಲು ಓಡಿ ಹೋಗುವಂತೆ ಮಾಡಲಾಗಿದೆ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಹೇಳುವವರು ಇದೇ ಬಿಜೆಪಿಯವರು. ಇದು ವಿಪರ್ಯಾಸ ಎಂದು ಬರೆದಿದ್ದಾರೆ.
ये नन्हीँ अनन्या की माँ का Bank Account का डिटेल है,
— ANIL (@AnilYadavmedia1) March 23, 2025
नाम – Nitoo Yadav
A/C No. – 16568100041635
IFSC Code – BARB0JALFAI
बहादुर अनन्या की मदद कीजिए जिससे की वो पढ़कर अपने सपनों को साकार कर सके,
पैसे उसकी पढ़ाई में बाधा ना बनें,
आपका समय शुरू होता है अब, pic.twitter.com/ePs2EZpM8A
ಪುಟ್ಟ ಬಾಲಕಿಯ ಶಿಕ್ಷಣಾಸಕ್ತಿಯನ್ನು ಗಮನಿಸಿದ ಅಂಬೇಡ್ಕರ್ ನಗರ ಜಿಲ್ಲೆಯ ಸಮಾಜವಾದಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮತ್ತು ಫೈಜಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮ್ ಶಕಲ್ ಯಾದವ್ ಅವರು, ಬಾಲಕಿಗೆ ಮುಂದಿನ ಸಿಬಿಎಸ್‌ಇ ಮಂಡಳಿಯಿಂದ ಇಂಟರ್ಮೀಡಿಯೇಟ್‌ವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಒದಗಿಸುವುದಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಸ್ಥಳೀಯ ಪತ್ರಕರ್ತ ಅನಿಲ್ ಅವರೊಂದಿಗೆ ಮಾತನಾಡಿದ ಪುಟ್ಟ ಬಾಲಕಿ ಅನನ್ಯಾ, “ನಮ್ಮ ಮನೆಯನ್ನು ಕೆಡವಿದಾಗ ನನಗೆ ನನ್ನ ಪುಸ್ತಕಗಳ ಬಗ್ಗೆ ಆತಂಕವಾಯಿತು. ಅದಕ್ಕಾಗಿ ಓಡಿ ಹೋಗಿ, ಸಂಗ್ರಹಿಸಿಟ್ಟೆ. ಯಾಕೆಂದರೆ ನನಗೆ ಅದು ನಷ್ಟವಾಗುತ್ತಿದ್ದಲ್ಲಿ ಮುಂದೆ ತರಗತಿಗಳಿಗೆ ಹೋಗುವುದಕ್ಕೆ ಹಾಗೂ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಗೊತ್ತಿತ್ತು” ಎಂದು ತಿಳಿಸಿದ್ದಾರೆ.
ಪತ್ರಕರ್ತ ಅನಿಲ್ ಅವರು ಅನನ್ಯಾ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಸೋಷಿಯಲ್ ಮೀಡಿಯಾ ಮೂಲಕ ಕೋರಿಕೊಂಡಿದ್ದು, ಅನನ್ಯಾಳ ತಾಯಿಯ ಬ್ಯಾಂಕ್ ಖಾತೆಯ ವಿವರವನ್ನು ಹಂಚಿಕೊಂಡಿದ್ದಾರೆ. ಹಲವಾರು ಮಂದಿ ನೆಟ್ಟಿಗರು ಆರ್ಥಿಕ ನೆರವನ್ನು ಕಳುಹಿಸುತ್ತದ್ದಾರೆ.
अनन्या पढ़ना चाहती है,
— ANIL (@AnilYadavmedia1) March 23, 2025
IAS बनना चाहती है, लेकिन उस संगदिल IAS
की तरह नहीं,
जिसने अपने प्रभाव का इस्तेमाल करके अनन्या का घर गिरवा दिया,#अम्बेडकरनगर pic.twitter.com/Yho1PIQIFO