ದೀರ್ಘಕಾಲದ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಮನೆ ಬಾಗಿಲಿಗೆ ಉಚಿತವಾಗಿ ಔಷಧಗಳನ್ನು ಒದಗಿಸುವ ಆಂಧ್ರ ಸರ್ಕಾರದ ಯೋಜನೆಯೂ ಮೆಚ್ಚುಗೆ ಗಳಿಸಿದೆ. ಇಲ್ಲಿಯವರೆಗೂ 1.4 ಲಕ್ಷ ಮನೆ ಬಾಗಿಲಿಗೆ ಉಚಿತ ಔಷಧಿಗಳನ್ನು ತಲುಪಿಸಿದೆ.
ಹಿಂದುಳಿದ ವರ್ಗಗಳಿಗೆ ಸೇರಿದ ರೋಗಿಗಳ ಮನೆ ಬಾಗಿಲಿಗೆ ಔಷಧಿಗಳನ್ನು ನೀಡುವ ಈ ಯೋಜನೆಯೂ ಮೆಚ್ಚುಗೆಯನ್ನು ಗಳಿಸಿದೆ. ಆಂಧ್ರಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಜತೆಗೆ ಇತರ ರಾಜ್ಯಗಳಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಚಿಂತನೆ ನಡೆಯುತ್ತಿದೆ. ಈ ಯೋಜನೆಯೂ ರಾಷ್ಟ್ರವ್ಯಾಪಿ ಆರೋಗ್ಯದ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ ಹಾಗೂ ಭರವಸೆ ಹುಟ್ಟು ಹಾಕಿದೆ.
‘ಆರೋಗ್ಯ ಸುರಕ್ಷಾ’ ಯೋಜನೆಯ ಭಾಗವಾಗಿರುವ ಈ ಉಪಕ್ರಮವು ವ್ಯಾಪಕ ಯಶಸ್ಸು ಗಳಿಸಿದೆ. ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು, ಮೂತ್ರಪಿಂಡದ ಕಾಯಿಲೆಗಳು ಹಾಗೂ ನರವೈಜ್ಞಾನಿಕ ಅಸ್ವಸ್ಥತೆಗಳಂತಹ ನಾನಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರಾಜ್ಯದಾದ್ಯಂತ ಹಲವಾರು ವ್ಯಕ್ತಿಗಳಿಗೆ ಈ ಯೋಜನೆಯೂ ಪರಿಹಾರವನ್ನು ನೀಡುತ್ತಿದೆ.
ಉಚಿತ ಔಷಧಿಗಳನ್ನು ಒದಗಿಸುವ ಆಂಧ್ರಸರ್ಕಾರದ ಯೋಜನೆಯೂ 2023ರ ಡಿಸೆಂಬರ್ 27ರಂದು ಪ್ರಾರಂಭವಾಯಿತು. ಈ ಯೋಜನೆಯೂ ಗಮನಾರ್ಹ ಆಕರ್ಷಣೆಯನ್ನು ಗಳಿಸಿದೆ. 1,40,000 ಕ್ಕೂ ಹೆಚ್ಚು ವ್ಯಕ್ತಿಗಳು 70 ವಿಧದ ಅಗತ್ಯ ಔಷಧಗಳ ವಿತರಣೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುವ ಮೂಲಕ ರಾಜ್ಯ ಸರ್ಕಾರವು ಆರೋಗ್ಯಶ್ರೀ, ಆರೋಗ್ಯ ಸುರಕ್ಷಾ ಮತ್ತು ನಿಶ್ಚಿತ ದಿನದ ಕಾರ್ಯಕ್ರಮ (ಎಫ್‌ಡಿಪಿ) ಯಂತಹ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಕ್ರಮವು ನಿರಂತರ ವೈದ್ಯಕೀಯ ಬೆಂಬಲದ ಅಗತ್ಯವಿರುವ ವ್ಯಕ್ತಿಗಳನ್ನು ಗುರುತಿಸಲು ಸರ್ಕಾರಕ್ಕೆ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.
ಕುಟುಂಬ ವೈದ್ಯರು ರೋಗಿಗಳ ಪರೀಕ್ಷೆ ಮಾಡಿದ ನಂತರ, ಸೂಚಿತ ಔಷಧಿಗಳ ಪಟ್ಟಿಯನ್ನು ಹೇಳಿದ ಮೇಲೆ ವೆಬ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಪ್ರಿಸ್ಕ್ರಿಪ್ಷನ್‌ಗಳ ಆಧಾರದ ಮೇಲೆ ಈ ಔಷಧಿಗಳನ್ನು ಆಂಧ್ರಪ್ರದೇಶ ವೈದ್ಯಕೀಯ ಸರಬರಾಜು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದೊಂದಿಗೆ (APMSIDC) ಸಂಬಂಧಿಸಿದ ಔಷಧಿಕಾರರು ಸಂಸ್ಕರಿಸುತ್ತಾರೆ. ಭಾರತೀಯ ಅಂಚೆ ಸೇವೆಗಳು ನೇರವಾಗಿ ರೋಗಿಗಳಿಗೆ ಕೊರಿಯರ್ ಸೇವೆಗಳ ಮೂಲಕ 24 ಗಂಟೆಗಳ ಒಳಗೆ ಔಷಧಿಗಳನ್ನು ಒದಗಿಸುತ್ತವೆ. ಆಯಾ ಗ್ರಾಮ ಆರೋಗ್ಯ ಚಿಕಿತ್ಸಾಲಯಗಳಿಗೆ ತ್ವರಿತವಾಗಿ ರವಾನಿಸುತ್ತಾರೆ. ಅವರು ರೋಗಿಗಳ ಮನೆ ಬಾಗಿಲಿಗೆ ಔಷಧಿ ತಲುಪಿಸುತ್ತಾರೆ.
“ಔಷಧಿಗಳ ವಿತರಣೆಯು ಆರೋಗ್ಯ ಸುರಕ್ಷಾದ ಒಂದು ಭಾಗವಾಗಿದ್ದು, ಇದಕ್ಕಾಗಿ ₹68 ಕೋಟಿ ಮೀಸಲಿಡಲಾಗಿದೆ. ಎಲ್ಲ ನಿವಾಸಿಗಳಿಗೆ, ವಿಶೇಷವಾಗಿ ದೀರ್ಘಕಾಲದ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಸುಲಭವಾಗಿ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಸರ್ಕಾರದ ಈ ಪ್ರಯತ್ನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ರೋಗಿಗಳ ಮನೆಗಳಿಗೆ ನೇರವಾಗಿ ಔಷಧಿಗಳನ್ನು ತಲುಪಿಸುವುದು ಅನುಕೂಲತೆ ಮತ್ತು ದಕ್ಷತೆಗೆ ಒತ್ತಿ ಹೇಳುತ್ತದೆ” ಎಂದು ಎಪಿಎಮ್‌ಎಸ್‌ಐಡಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಮುರಳೀಧರ ರೆಡ್ಡಿ ಅವರು ಹೇಳಿದರು.
“ಇದುವರೆಗೆ 1,33,000 ಔಷಧಿಗಳನ್ನು ರೋಗಿಗಳ ಮನೆಗೆ ತಲುಪಿಸಲಾಗಿದೆ. ಇನ್ನು ಹೆಚ್ಚಿನ ಔಷಧಿಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ಆಂಧ್ರಪ್ರದೇಶದಾದ್ಯಂತ ಜನರ ಯೋಗಕ್ಷೇಮ ಸುಧಾರಿಸುವಲ್ಲಿ ಈ ಕಾರ್ಯಕ್ರಮವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ. ದೀರ್ಘಕಾಲದ ರೋಗಿಗಳ ಜತೆಗೆ, ಹಾಸಿಗೆ ಹಿಡಿದ ವ್ಯಕ್ತಿಗಳು, ಅಪಘಾತಕ್ಕೊಳಗಾದವರು ಹಾಗೂ ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗದ ವೃದ್ಧರು ಸಹ ಈ ಯೋಜನೆಯ ಫಲಾನುಭವಿಗಳು”ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಖಾಸಗಿ ಬ್ಯಾಂಕ್ ಕಿರುಕುಳ ಆರೋಪ; ಉಡುಪಿ ಮೂಲದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
“ಆರೋಗ್ಯ ಸುರಕ್ಷಾ ಆರೋಗ್ಯ ಶಿಬಿರದಲ್ಲಿ ತಪಾಸಣೆ ಮಾಡಿದ ನಂತರ, ನಾನು ಮತ್ತು ನನ್ನ ಪತಿ ಮಧುಮೇಹಕ್ಕೆ ಔಷಧಿಗಳನ್ನು ಪಡೆಯುತ್ತಿದ್ದೇವೆ. ಇದು ನಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ” ಎಂದು ಹಿರಿಯ ನಾಗರಿಕ ಹಾಗೂ ಪೆನಮಲೂರಿನ ನಿವಾಸಿ ಎಂ ಸುಭದ್ರಾ ಹೇಳಿದರು.
ಇಲ್ಲಿಯವರೆಗೂ ಆಂಧ್ರಪ್ರದೇಶದ ಆರೋಗ್ಯ ಸುರಕ್ಷಾ ಯೋಜನೆಯ ಲಾಭವನ್ನು 1,40,167 ಜನರು ಪ್ರಯೋಜನ ಪಡೆದಿದ್ದಾರೆ. ಈಗಾಗಲೇ 1,33,036 ಔಷಧಗಳನ್ನು ರವಾನಿಸಲಾಗಿದೆ ಹಾಗೂ 7,130 ಮನೆಗಳಿಗೆ ಔಷಧಿಗಳ ರವಾನೆ ಪ್ರಕ್ರಿಯೆ ಬಾಕಿ ಇದೆ.