ಒಡಿಶಾದ ಭುವನೇಶ್ವರದಲ್ಲಿರುವ ಭರತ್ಪುರ ಪೊಲೀಸ್ ಠಾಣೆಯಲ್ಲಿ ಸೇನಾಧಿಕಾರಿ ಭಾವಿ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದಲ್ಲಿ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಸೆಪ್ಟೆಂಬರ್ 14ರಂದು ಭುವನೇಶ್ವರದಲ್ಲಿ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ಅದರ ವಿರುದ್ಧವಾಗಿ ದೂರು ನೀಡಲು ಹೋದಾಗ ಪೊಲೀಸರು ಸೇನಾಧಿಕಾರಿ ಭಾವಿ ಪತ್ನಿ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಭುವನೇಶ್ವರದಲ್ಲಿ ಪೊಲೀಸರ ಮೇಲೆ ಹಲ್ಲೆ ಮತ್ತು ಪೊಲೀಸ್ ಠಾಣೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ ಆರೋಪದಲ್ಲಿ ಬಂಧನಗೊಂಡಿದ್ದ ಸೇನಾಧಿಕಾರಿ ಭಾವಿ ಪತ್ನಿ ಕಳೆದ ವಾರ ಬಿಡುಗಡೆಯಾಗಿದ್ದರು. ಅದಾದ ಬಳಿಕ ಪೊಲೀಸರ ವಿರುದ್ಧವೇ ಹಲ್ಲೆ, ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಮಾಧ್ಯಮಗಳಿಗೆ ತನಗೆ ಆದ ದೌರ್ಜನ್ಯದ ಬಗ್ಗೆ ವಿವರಿಸಿದ ಮಹಿಳೆ, ಪೊಲೀಸ್ ಇನ್ಸ್ಪೆಕ್ಟರ್ ಹಲ್ಲೆ ಮಾಡುವ ಮೊದಲು ತನ್ನ ಎದೆಯ ಮೇಲೆ ಪದೇ ಪದೇ ಒದ್ದಿರುವುದಾಗಿ ಆರೋಪಿಸಿದ್ದಾರೆ. ಸದ್ಯ ಈ ಘಟನೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಒಡಿಶಾ ಪೊಲೀಸರು ಭರತ್ಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ಮಧ್ಯರಾತ್ರಿ ಭುವನೇಶ್ವರದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸೇನಾ ಅಧಿಕಾರಿ ಮತ್ತು ಅವರ ಭಾವಿ ಪತ್ನಿಗೆ ಅಪರಿಚಿತ ಗೂಂಡಾಗಳ ಹಲ್ಲೆ ಮಾಡಿದ್ದಾರೆ. ಆದ್ದರಿಂದ ಇಬ್ಬರೂ ಪೊಲೀಸ್ ಠಾಣೆಯತ್ತ ಧಾವಿಸಿದ್ದರು. ಈ ವೇಳೆ ಪೊಲೀಸರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಈ ಜೋಡಿ ಆರೋಪಿಸಿದೆ.
ಇದನ್ನು ಓದಿದ್ದೀರಾ? ಒಡಿಶಾ: ಕ್ಷಿಪಣಿ ಉಡಾವಣೆ ಪರೀಕ್ಷೆಗಾಗಿ 10 ಸಾವಿರ ಜನರ ಸ್ಥಳಾಂತರ
ನನ್ನ ಬಟ್ಟೆ ಬಿಚ್ಚಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ವೇಳೆ ತನ್ನನ್ನು ರಕ್ಷಿಸಿಕೊಳ್ಳಲು ಮಹಿಳೆ ಅಧಿಕಾರಿಯೊಬ್ಬರಿಗೆ ಕಚ್ಚಿದ್ದಾರೆ ಎಂದು ಹೇಳಲಾಗಿದೆ. ಅದಾದ ಬಳಿಕ ಮಹಿಳೆಯನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 16ರಂದು ಘಟನೆಯ ಬಗ್ಗೆ ಸೇನೆಗೆ ತಿಳಿದ ನಂತರ ಒಡಿಶಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 17ರಂದು ಒತ್ತಡ ಹೆಚ್ಚಾದ ಕಾರಣ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ. ಸೆಪ್ಟೆಂಬರ್ 18ರಂದು ಐವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬಳಿಕ ಅಮಾನತುಗೊಳಿಸಲಾಗಿದೆ. ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಮಹಿಳೆಗೆ ಒಡಿಶಾ ಹೈಕೋರ್ಟ್ ಜಾಮೀನು ನೀಡಿದೆ.
ಸೆಪ್ಟೆಂಬರ್ 19ರಂದು ಮಹಿಳೆಯು ಬಿಡುಗಡೆಯಾಗಿ ಮಾಧ್ಯಮಕ್ಕೆ ತನ್ನ ಮೇಲಾದ ದೌರ್ಜನ್ಯದ ವಿವರಿಸಿದ್ದಾರೆ. ಸೆಪ್ಟೆಂಬರ್ 20ರಂದು ಸೇನಾಧಿಕಾರಿ ಔಪಚಾರಿಕ ದೂರನ್ನು ದಾಖಲಿಸಿದ ನಂತರ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಅಧಿಕೃತವಾಗಿ ಎಫ್ಐಆರ್ ದಾಖಲಿಸಲಾಗಿದೆ.
#WATCH | Odisha: An Indian Army Officer and his fiancée were allegedly assaulted at Bharatpur Police Station in Bhubaneswar.
— ANI (@ANI) September 20, 2024
His fiancée, alleges "When we went to Bharatpur Police Station to file a complaint, the entire police station was empty. Only one lady was sitting at the… pic.twitter.com/Iz74TK1wWG
