ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ಕಸ್ಟಡಿಯಲ್ಲಿರುವಾಗಲೆ ಮೂವರು ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಭಾರತೀಯ ಸೇನೆ ಆಂತರಿಕ ತನಿಖೆಗೆ ಆದೇಶಿಸಿದೆ.
ಡಿಸೆಂಬರ್ 21ರಂದು ಪೂಂಚ್ ಜಿಲ್ಲೆಯಲ್ಲಿ ಅಪರಿಚಿತ ಉಗ್ರಗಾಮಿಗಳ ದಾಳಿಯಿಂದ ಮೃತಪಟ್ಟ ಭಾರತೀಯ ಸೈನಿಕರ ಸಾವಿನ ಕುರಿತು ತನಿಖೆ ನಡೆಸಲು ಅನುಮಾನ ವ್ಯಕ್ತವಾದ ಮೂವರು ನಾಗರಿಕರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. 27 ರಿಂದ 42 ವಯಸ್ಸಿನ ಮೂವರು ನಾಗರಿಕರು ಡಿ.22 ರಂದು ಮೃತಪಟ್ಟಿದ್ದರು.
ಮೃತ ಯುವಕರ ಸಂಬಂಧಿಕರು ಹಾಗೂ ಸ್ಥಳೀಯ ರಾಜಕೀಯ ನಾಯಕರು ಸೇನಾಧಿಕಾರಿಗಳ ವಿಚಾರಣೆ ಸಮಯದಲ್ಲಿ ಕಸ್ಟಡಿಯಲ್ಲಿಯೇ ಚಿತ್ರಹಿಂಸೆಗೊಳಗಾಗಿ ಮೂವರು ಯುವಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
ಈ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನದ ಭಾಗವಾಗಿ ಮೂವರ ನಾಗರಿಕರ ಸಾವಿನ ಬಗ್ಗೆ ಸಮಗ್ರವಾಗಿ ತನಿಖೆಗೊಳಪಡಿಸಲು ಭಾರತೀಯ ಸೇನೆ ಆದೇಶಿಸಿದೆ ಎನ್ನಲಾಗಿದೆ. ಇದರ ಜೊತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ತನಿಖೆ ಕೈಗೊಳ್ಳುವ ಸಂದರ್ಭದಲ್ಲಿ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡುವುದಾಗಿ ಸೇನೆ ಬದ್ಧವಾಗಿರುವುದಾಗಿ ತಿಳಿಸಿದೆ.