ಅಸ್ಸಾಂ ಪ್ರವಾಹ ಪರಿಸ್ಥಿತಿ ಗುರುವಾರದಿಂದ ಹದಗೆಟ್ಟಿದ್ದು, 9 ಜಿಲ್ಲೆಗಳಲ್ಲಿ 1.98 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ರೆಮಲ್ ಚಂಡಮಾರುತದ ನಂತರ ನಿರಂತರ ಮಳೆಯಯಾದ ಕಾರಣ ಪ್ರಮುಖ ನದಿಗಳ ನೀರಿನ ಮಟ್ಟ ಏರಿದ್ದರಿಂದ ಒಬ್ಬರು ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈಲಕಂಡಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದು, ಮಂಗಳವಾರದಿಂದ ಪ್ರವಾಹ ಮತ್ತು ಮಳೆಯಿಂದಾಗಿ ರಾಜ್ಯದಲ್ಲಿನ ಸಾವಿನ ಸಂಖ್ಯೆ 6 ಕ್ಕೆ ಏರಿಕೆಯಾಗಿದ್ದು, 18 ಮಂದಿ ಗಾಯಗೊಂಡಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ ನಾಗಾವ್, ನಾಗಾವ್, ಕರೀಮ್‌ಗಂಜ್, ಹೈಲಕಂಡಿ, ಪಶ್ಚಿಮ ಕರ್ಬಿ ಆಂಗ್ಲಾಂಗ್, ಕ್ಯಾಚಾರ್, ಹೊಜೈ, ಗೋಲಾಘಾಟ್, ಕರ್ಬಿ ಆಂಗ್ಲಾಂಗ್ ಮತ್ತು ದಿಮಾ ಹಸಾವೊ ಜಿಲ್ಲೆಗಳಲ್ಲಿ ಒಟ್ಟಾರೆಯಾಗಿ 1,98,856 ಜನರು ತೊಂದರೆಗೊಳಗಾಗಿದ್ದಾರೆ.
ಕಚಾರ್ ಅತ್ಯಂತ ಹೆಚ್ಚು ಪೀಡಿತ ಜಿಲ್ಲೆಯಾಗಿದ್ದು, 1,02,246 ಜನರು ಪ್ರವಾಹದ ನೀರಿನಲ್ಲಿ ತತ್ತರಿಸಿದ್ದರೆ, ನಂತರ ಕರೀಮ್‌ಗಂಜ್‌ನಲ್ಲಿ 36,959, ಹೊಜಾಯ್‌ನಲ್ಲಿ 22,058 ಮತ್ತು ಹೈಲಕಂಡಿಯಲ್ಲಿ 14,308 ಜನರು ಅಪಾಯದ ಸ್ಥಿತಿ ಎದುರಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
ರಾಜ್ಯದ ಒಟ್ಟು 3,238.8 ಹೆಕ್ಟೇರ್ ಪ್ರದೇಶದ ಬೆಳೆ ಕೊಚ್ಚಿಕೊಂಡು ಹೋಗಿದ್ದು, 2,34,53 ಪ್ರಾಣಿಗಳಿಗೂ ಹಾನಿಯುಂಟಾಗಿದೆ
ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಅದರ ಉಪನದಿಗಳೊಂದಿಗೆ ಪ್ರವಾಹ ಪೀಡಿತ ಜಿಲ್ಲೆಗಳ ಹಲವಾರು ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವರದಿ ತಿಳಿಸಿದೆ.
ಪ್ರವಾಹದಿಂದ 35,640 ಜನರು 110 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹೊಜೈನಲ್ಲಿ ಅತಿ ಹೆಚ್ಚು 19,646, ನಂತರ ಕ್ಯಾಚಾರ್‌ನಲ್ಲಿ 12,110, ಹೈಲಕಂಡಿಯಲ್ಲಿ 2,060 ಮತ್ತು ಕರೀಮ್‌ಗಂಜ್‌ನಲ್ಲಿ 1,613 ಜನರು ಆಶ್ರಯ ಪಡೆದಿದ್ದಾರೆ.
ಅಸ್ಸಾಂನ ಬರಾಕ್ ಕಣಿವೆ ಮತ್ತು ದಿಮಾಹಸಾವೊದ ಮೂರು ಜಿಲ್ಲೆ ಗಳಲ್ಲಿ ಜನಜೀವನ ಸ್ಥಗಿತಗೊಂಡಿದೆ. ಇತರ ಪೀಡಿತ ಜಿಲ್ಲೆಗಳಲ್ಲಿ ಗುರುವಾರ ಮಧ್ಯಂತರ ಮಳೆ ಮತ್ತು ಗುಡುಗು ಸಹಿತ ವರದಿಯಾಗಿದೆ.
