25 ಪುಸ್ತಕಗಳ ನಿಷೇಧ: ‘ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ’

Date:

Advertisements

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರ ಭಾವವನ್ನು ಪ್ರಚೋದಿಸುವ ಅಂಶಗಳನ್ನು ಹೊಂದಿವೆ ಎಂಬ ಆರೋಪದ ಮೇಲೆ 25 ಪುಸ್ತಕಗಳನ್ನು ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ನಿಷೇಧಿಸಿದ್ದಾರೆ. ಮನೋಜ್ ಸಿನ್ಹಾ ಅವರ ಕ್ರಮವು ಭಾರತೀಯ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರದ ವಿರುದ್ಧ ದ್ವೇಷ ಬಿತ್ತುವ ಅಥವಾ ತಿರಸ್ಕಾರವನ್ನು ಪ್ರಚೋದಿಸುವ ಕಂಟೆಂಟ್‌ಗಳನ್ನು ಹೊಂದಿರುವ ಪುಸ್ತಕಗಳು ಅಥವಾ ಪ್ರಕಟಣೆಗಳನ್ನು ಜಪ್ತಿ ಮಾಡಲು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್ 98 ಅವಕಾಶ ನೀಡುತ್ತದೆ. ಇದೇ ಸೆಕ್ಷನ್‌ಅನ್ನು ಬಳಸಿಕೊಂಡು ಲೆಫ್ಟಿನೆಂಟ್‌ ಗವರ್ನರ್ ಸಿನ್ಹಾ ಅವರು 25 ಪುಸ್ತಕಗಳನ್ನು ನಿಷೇಧಿಸಿದ್ದಾರೆ.

”ನಿಷೇಧಿತ ಕೃತಿಗಳು ದೇಶದ ವಿರುದ್ದ ಹಿಂಸಾತ್ಮಕ ಕೃತ್ಯಗಳಿಗೆ ಪ್ರಚೋದನೆ ನೀಡುತ್ತವೆ. ಪ್ರತ್ಯೇಕವಾದವನ್ನು ಉತ್ತೇಜಿಸುತ್ತವೆ. ಭಯೋತ್ಪಾದನೆಯ ವೈಭವೀಕರಣ ಹಾಗೂ ಇತಿಹಾಸವನ್ನು ತಿರುಚಿದ ನಿರೂಪಣೆಗಳನ್ನು ಹೊಂದಿವೆ. ಹೀಗಾಗಿ, ಬಿಎನ್‌ಎಸ್‌ ಸೆಕ್ಷನ್ 98ರ ಅಡಿಯಲ್ಲಿ ಪುಸ್ತಕಗಳನ್ನು ನಿಷೇಧಿಸಲಾಗಿದೆ” ಎಂದು ಸಿನ್ಹಾ ಅವರ ಕ್ರಮವನ್ನು ಗೃಹ ಇಲಾಖೆ ಸಮರ್ಥಿಸಿಕೊಂಡಿದೆ.

Advertisements

ಸಿನ್ಹಾ ಅವರು ನಿಷೇಧಿಸಿರುವ ಪುಸ್ತಕಗಳಲ್ಲಿ ಹಲವು ಪುಸ್ತಕಗಳು ಪ್ರಮುಖ ಪತ್ರಕರ್ತರು, ಪ್ರಸಿದ್ಧ ಇತಿಹಾಸಕಾರರು ಹಾಗೂ ರಾಜಕೀಯ ವಿಶ್ಲೇಷಕರಾದ ಎ.ಜಿ ನೂರಾನಿ ಮತ್ತು ಸುಮಂತ್ರ ಬೋಸ್ ಅವರಂತಹ ಲೇಖಕರು ರಚಿಸಿರುವ ಕೃತಿಗಳಾಗಿವೆ. ಈ ಪುಸ್ತಕಗಳು ಪ್ರಪಂಚದಾದ್ಯಂತ ಗೌರವಿಸಲ್ಪಟ್ಟ ಪ್ರಕಾಶನ ಸಂಸ್ಥೆಗಳಾದ ಪೆಂಗ್ವಿನ್, ಹಾರ್ಪರ್‌ಕಾಲಿನ್ಸ್ ಹಾಗೂ ರೌಟ್‌ಲೆಡ್ಜ್ ಪ್ರಕಟಿಸಿದ ಕೃತಿಗಳಾಗಿವೆ. ಆದರೆ, ಅವುಗಳನ್ನು ಕೇಂದ್ರ ಸರ್ಕಾರದ ಆಣತಿಯಲ್ಲಿ ಕೆಲಸ ಮಾಡುತ್ತಿರುವ ಸಿನ್ಹಾ ಅವರು ಉದ್ದೇಶಪೂರ್ವಕವಾಗಿ ನಿಷೇಧಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇ‍ಷ ಸ್ಥಾನಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್ 370ಅನ್ನು ರದ್ದುಪಡಿಸಿದ ಆರು ವರ್ಷಗಳ ವಾರ್ಷಿಕೋತ್ಸವದ ದಿನದಂದು ಗೃಹ ಇಲಾಖೆಯು ಪುಸ್ತಕಗಳನ್ನು ರದ್ದುಗೊಳಿಸಿರುವುದು ಆಕ್ರೋಶ ಮತ್ತು ವಿವಾದಕ್ಕೆ ಕಾರಣವಾಗಿದೆ.

ಈ ಲೇಖನ ಓದಿದ್ದೀರಾ?: ತಮಿಳುನಾಡಿನ ಜಾತಿ ತಾರತಮ್ಯವೂ; ಕರಾಳ ಮುಖ ಬಿಚ್ಚಿಟ್ಟ ದಲಿತ ಇಂಜಿನಿಯರ್ ಕೆವಿನ್ ಹತ್ಯೆಯೂ

ಪುಸ್ತಕ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರುವ ಜಾಗತಿಕ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಡಿಯಾ, ”ಈ ಕೃತಿಗಳು ನಿಖರ ಮಾಹಿತಿಗಳನ್ನು ಒಳಗೊಂಡಿದ್ದು, ಯಾವುದೇ ಹಿಂಸಾತ್ಮಕ ಅಥವಾ ಪ್ರಚೋದನಾತ್ಮಕ ಬರವಣಿಗೆಗಳನ್ನು ಹೊಂದಿಲ್ಲ. ಇವು ಭಯೋತ್ಪಾದನಾ ಕೈಪಿಡಿಗಳಲ್ಲ. ಸರಿಯಾದ ಕಾನೂನು ಪ್ರಕ್ರಿಯೆ ಇಲ್ಲದೆ ಕೇವಲ ಆದೇಶಗಳ ಮೂಲಕ ಕೃತಿಗಳನ್ನು ನಿಷೇಧಿಸುವುದು ಸಮ್ಮತವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

”ಇದು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಬೆದರಿಕೆ” ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಬಣ್ಣಿಸಿದೆ.

‘ಒಂದು ನಿರ್ಧಿಷ್ಟ ದೃಷ್ಟಿಕೋನವನ್ನು ಪ್ರತಿಪಾದಿಸುವುದು ಅಥವಾ ಅಭಿವ್ಯಕ್ತಪಡಿಸುವುದು ಯಾವುದೇ ರೀತಿಯಲ್ಲೂ ಹಿಂಸಾಚಾರಕ್ಕೆ ಪ್ರಚೋದನೆಯಾಗುವುದಿಲ್ಲ’ ಎಂಬುದನ್ನು ಸುಪ್ರೀಂ ಕೋರ್ಟ್‌ ಹಲವು ಬಾರಿ ಸ್ಪಷ್ಟಪಡಿಸಿದೆ. ಆದರೂ, ಗೃಹ ಇಲಾಖೆಯು ತನ್ನ ಸಿದ್ಧಾಂತದ ವಿರುದ್ಧದ ಟೀಕೆ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಹವಣಿಸುತ್ತಿದೆ ಎಂದು ಹಲವರು ಕಿಡಿಕಾರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಪಾಕಿಸ್ತಾನದ.. ಬಾಯಲ್ಲಿ ಮಾತಾನಾಡಿದರೆ ಯಾರು ಸುಮ್ಮನಿರುತ್ತಾರೆ.. ಇದೇ.. ವಾಕಿಸ್ತಾನ. ಬಾಂಗ್ಲಾದೇಶದಲ್ಲಿ.. ಇದ್ದಾರೆ ನೇಣು ಹಾಕುತ್ತಿದ್ದರು… ದೇಶಾಭಿಮಾನ.. ಬೇಕು..ಆದ್ರೆ ಕೆಲವರ ಚಪಲಕ್ಕೆ.. ಜನ ಬಲಿಯಾಗುತ್ತಿದ್ದಾರೆ ಬ್ರೈಸ್ ವಾಶ್ ಮಾಡಿ.. ಯುವಕರಿಗೆ.. ಹಿಂಸೆಯ ಪ್ರಚೋಧನೆ ನಿಡಲಾಗಿದೆ.. ನಮ್ಮ ನೆಲದ ಅನ್ನ ತಿಂದು ನಮಗ. ಭತ್ತಿ ಇಡುವವರನ್ನು.. ನೋಡಿ.. ಶಾಂತಿ. ಎ೦ದು ಸುಮ್ಮನಿರಬೇಕ.. ವಾಕ್ ಸ್ವಾತಂತ್ಯ ದೇಶದ್ರೋಹಕ್ಕೆ ಅನ್ವಯವಾಗುವುದಿಲ್ಲ.. ಬಾಯಿಗೆ ಬಂದಂತೆ ದ್ವೇಷದ.. ಮಾತುಗಳನ್ನು.. ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಬೇಕು.. ಬುದ್ಧಿಜೀವಿಗಳು.. ಕಪ್ಪ ತಿಂದು.. ಲದ್ಧಿ ತಿನ್ನುವ ಜೀವಿಗಳು. ಆಗಿದ್ದಾರೆ. ದೇಶಪ್ರೇಮ ರಾಷ್ಟ್ರೀಯತೆ ಅವರಿಗೆ.. ಅಸಹ್ಯ ಇಂಥವರಿಗೆ.. ಕನಿಕರ ತೋರಿದರೆ.. ಬಾಂಗ್ಲಾದೇಶದಲ್ಲಿ ಹಿಂದುಗಳ.. ಮೇಲೆ ಸೇಡು.ಇಲ್ಲಿ ಮುಂದುವರೆಯುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X