ಭಾರತವು 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ. ಜನರು ಒಗ್ಗಟ್ಟಾಗಿ ವಿಶ್ವದ ಮುಂದೆ ಉತ್ತಮ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಬೇಕೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದರು.
ಆರ್‌ಎಸ್‌ಎಸ್‌ನ ಹಿರಿಯ ಪದಾಧಿಕಾರಿ ರಂಗಾ ಹರಿ ಅವರು ಬರೆದಿರುವ ‘ಪೃಥ್ವಿ ಸೂಕ್ತ – ಆನ್ ಓಡ್ ಟು ಮದರ್ ಅರ್ಥ್’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಜನರು ತಮ್ಮ ತಾಯ್ನಾಡಿನ ಬಗ್ಗೆ ಭಕ್ತಿ, ಪ್ರೀತಿ ಮತ್ತು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು. ನಾವು ನಮ್ಮ ಮಾತೃಭೂಮಿಯನ್ನು ರಾಷ್ಟ್ರೀಯ ಏಕತೆಯ ಅತ್ಯಗತ್ಯ ಭಾಗ ಎಂದು ಪರಿಗಣಿಸಬೇಕು ಎಂದು ಮೋಹನ್ ಭಾಗವತ್ ಮನವಿ ಮಾಡಿದರು.
“ನಮ್ಮದು 5 ಸಾವಿರ ವರ್ಷಗಳ ಹಿಂದಿನ ಜಾತ್ಯತೀತ ಸಂಸ್ಕೃತಿಯಾಗಿದೆ. ಇಡೀ ಪ್ರಪಂಚವು ಒಂದು ಕುಟುಂಬ. ಇದು ನಮ್ಮ ಭಾವನೆ. ಇದು ಸಿದ್ಧಾಂತವಲ್ಲ. ಅದನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳಿ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಮ್ಮುವಿನಲ್ಲಿನ ಹಿಂದೂಗಳಿಗೆ ಎಷ್ಟು ಹಣ ನೀಡಿದ್ದೀರಿ; ದಿ ಕಾಶ್ಮೀರ್ ಫೈಲ್ಸ್ ಚಿತ್ರತಂಡಕ್ಕೆ ನಟಿ ಆಶಾ ಪರೇಖ್ ಪ್ರಶ್ನೆ
“ದೇಶದಲ್ಲಿ ತುಂಬಾ ವೈವಿಧ್ಯತೆಯಿದೆ. ಪರಸ್ಪರ ಜಗಳವಾಡಬೇಡಿ. ನಾವು ಒಂದೇ ಎಂದು ಜಗತ್ತಿಗೆ ತಿಳಿಸಿ. ಇದು ಭಾರತದ ಅಸ್ತಿತ್ವದ ಏಕೈಕ ಉದ್ದೇಶವಾಗಿದೆ. ಲೋಕಕಲ್ಯಾಣಕ್ಕಾಗಿ ದಾರ್ಶನಿಕರು ‘ಭಾರತ’ವನ್ನು ಸೃಷ್ಟಿಸಿದ್ದಾರೆ. ಅವರು ತಮ್ಮ ಜ್ಞಾನವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೂ ಹಸ್ತಾಂತರಿಸುವ ಸಮಾಜವನ್ನು ಸೃಷ್ಟಿಸಿದ್ದಾರೆ” ಎಂದರು.
“ಅವರು ಕೇವಲ ಸನ್ಯಾಸಿಗಳಾಗಿ ಇರಲಿಲ್ಲ. ಅವರು ತಮ್ಮ ಕುಟುಂಬಗಳೊಂದಿಗೆ ಅಲೆದಾಡುವ ಜೀವನವನ್ನು ನಡೆಸುತ್ತಿದ್ದರು. ಬ್ರಿಟಿಷರು ಕ್ರಿಮಿನಲ್ ಬುಡಕಟ್ಟುಗಳೆಂದು ಘೋಷಿಸಿದ ಈ ಎಲ್ಲಅಲೆಮಾರಿಗಳು ಈಗಲೂ ಇದ್ದಾರೆ. ಅವರು ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದನ್ನು ಹೆಚ್ಚಾಗಿ ಕಾಣಬಹುದು. ಅವರಲ್ಲಿ ಕೆಲವರು ಆಯುರ್ವೇದ ಜ್ಞಾನವನ್ನು ಹಂಚಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.
“ನಮ್ಮ ಜನರು ಮೆಕ್ಸಿಕೋದಿಂದ ಸೈಬೀರಿಯಾದವರೆಗೆ ಜ್ಞಾನವನ್ನು ತೆಗೆದುಕೊಂಡು ಪ್ರಪಂಚದಾದ್ಯಂತ ಹೋದರು. ಭಾರತವು ಮುಖ್ಯವಾಗಿ ಆರ್ಥಿಕ ವಿಷಯಗಳ ಕುರಿತು ಚರ್ಚಿಸುವ ವೇದಿಕೆಯಾಗಿರುವ ಜಿ20 ಅನ್ನು ಮಾನವೀಯತೆಯ ಬಗ್ಗೆ ಯೋಚಿಸುವ ವೇದಿಕೆಯಾಗಿ ಪರಿವರ್ತಿಸುವುದರಲ್ಲಿ ಆಶ್ಚರ್ಯವಿಲ್ಲ. ವಸುದೈವ ಕುಟುಂಬಕಂ ಎಂಬ ಭಾವನೆಯನ್ನು ನೀಡುವ ಮೂಲಕ ನಾವು ಅದನ್ನು ಮಾಡಿದ್ದೇವೆ” ಎಂದರು.
ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೇರಿದಂತೆ ಹಲವರು ಹಾಜರಿದ್ದರು.