ಒತ್ತೆಯಾಳಾಗಿದ್ದ ಓರ್ವ ಮಹಿಳೆ, ಇಬ್ಬರು ಮಕ್ಕಳನ್ನು ಬಿಡುಗಡೆಗೊಳಿಸಿದ ಹಮಸ್

Date:

ಇಸ್ರೇಲ್-ಹಮಸ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ‘ಹಮಸ್ ನವಜಾತ ಶಿಶುಗಳ ಶಿರಚ್ಛೇದ ಮಾಡಿದೆ’ ಎಂಬ ಸುಳ್ಳು ಸುದ್ದಿ ಹರಡಿದ ಬೆನ್ನಲ್ಲೇ, ಒತ್ತೆಯಾಳಾಗಿದ್ದ ಓರ್ವ ಮಹಿಳೆ, ಇಬ್ಬರು ಮಕ್ಕಳನ್ನು ಹಮಸ್ ಬಿಡುಗಡೆಗೊಳಿಸಿದೆ.

ಹಮಸ್‌ನ ಕಸ್ಸಾಮ್ ಬ್ರಿಗೇಡ್ ಮಹಿಳಾ ಒತ್ತೆಯಾಳು ಮತ್ತು ಇಬ್ಬರು ಮಕ್ಕಳನ್ನು ಬಿಡುಗಡೆ ಮಾಡುವ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಈ ವಿಡಿಯೋವನ್ನು ಅಲ್-ಜಝೀರಾ ಪ್ರಸಾರ ಮಾಡಿದ್ದು, ಅಪರಿಚಿತ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಇಸ್ರೇಲ್ ಮತ್ತು ಗಾಝಾ ನಡುವಿನ ಗಡಿ ಭಾಗದಲ್ಲಿ ಹಮಸ್ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದೆ. ಆದರೆ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ‘ಅಲ್-ಜಝೀರಾ’ ಮಾಹಿತಿ ಹಂಚಿಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಮಸ್‌ನ ಕಸ್ಸಾಮ್ ಬ್ರಿಗೇಡ್ ಬಿಡುಗಡೆಗೊಳಿಸಿರುವ ವಿಡಿಯೋವನ್ನು ದೂರದಿಂದ ಚಿತ್ರೀಕರಿಸಲಾಗಿದ್ದು, ಅಪರಿಚಿತ ಮಹಿಳೆ ಮತ್ತು ಮಕ್ಕಳನ್ನು ಹಿಂದಿನಿಂದ ತೋರಿಸಲಾಗಿದೆ. ಬಿಡುಗಡೆಗೊಂಡವರ ವಿವರಗಳನ್ನು ಹಂಚಿಕೊಂಡಿಲ್ಲ.

ಇಸ್ರೇಲ್ ಮತ್ತು ಗಾಝಾ ನಡುವಿನ ಗಡಿಯಾಗಿರುವ ಬೇಲಿಯ ಸಮೀಪವಿರುವ ತೆರೆದ ಪ್ರದೇಶದಲ್ಲಿ ಅವರನ್ನು ಬಿಟ್ಟ ನಂತರ ಹಮಸ್‌ನವರು ದೂರ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇಸ್ರೇಲ್‌ನ ಅಧಿಕಾರಿಗಳು ಇನ್ನೂ ವೀಡಿಯೊ ಕುರಿತು ಪ್ರತಿಕ್ರಿಯಿಸಿಲ್ಲ ಎಂದು ಅಲ್-ಜಝೀರಾ ಮಾಹಿತಿ ನೀಡಿದೆ. ಹಮಸ್ ನವಜಾತ ಶಿಶುಗಳ ಶಿರಚ್ಛೇದ ಮಾಡಿದೆ ಎಂದು i24 NEWS ಎಂಬ ಇಸ್ರೇಲ್‌ನ ಚಾನೆಲ್ ಸುಳ್ಳು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸುಳ್ಳು ಸುದ್ದಿಗೆ ಪ್ರತಿಕ್ರಿಯಿಸಿರುವ ಹಮಸ್‌ನ ರಾಜಕೀಯ ವಿಭಾಗದ ಪ್ರತಿನಿಧಿ ಈಝ್ಝತ್ ಅಲ್ ರಿಷ್ಕ್, ‘ಕೆಲವೊಂದು ಪಾಶ್ಚಿಮಾತ್ಯ ಮಾಧ್ಯಮಗಳು ಪ್ಯಾಲೆಸ್ತೀನಿಯರ ಪ್ರತಿರೋಧದವನ್ನು ಸಹಿಸಲಾಗದೆ ಇಸ್ರೇಲ್ ಪರ ಅಜೆಂಡಾ ರೂಪಿಸಲು ಸುಳ್ಳು ಮತ್ತು ಅಪಪ್ರಚಾರ ಹರಡುವುದನ್ನು ಮುಂದುವರಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ; ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ಪ್ರತಿ ಸವಾಲು

"ಮಿಸ್ಟರ್​ ಕುಮಾರಸ್ವಾಮಿ, ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ​. ಚರ್ಚೆ ಮಾಡಲು ಸದನಕ್ಕೆ...

ಯಾರಿಗೂ ಮುಖ ತೋರಿಸದ ಸನ್ನಿವೇಶ ಕುಮಾರಸ್ವಾಮಿಗೆ ನಿರ್ಮಾಣವಾಗಲಿದೆ: ಡಿಕೆ ಶಿವಕುಮಾರ್‌

ಕುಮಾರಸ್ವಾಮಿ ಅವರು ನನ್ನ ಮೇಲೆ ಮನಬಂದಂತೆ ಆರೋಪಿಸುವುದನ್ನು ನೋಡಿಯೂ ನಮ್ಮ ಸಮುದಾಯಕ್ಕಾಗಿ...

ಇಂಫಾಲ| ಮಣಿಪುರವನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ ಎಂದ ಅಮಿತ್ ಶಾ!

ಮಣಿಪುರದ ಜನರನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ, ಆದರೆ ಬಿಜೆಪಿ ರಾಜ್ಯದ ವಿಭಜನೆಗೆ...

ರೇಟ್ ಫಿಕ್ಸ್, ಬ್ಲ್ಯಾಕ್‌ಮೇಲ್ ಮಾಡುವುದು ಕುಮಾರಸ್ವಾಮಿ ಗುಣ: ಡಿಸಿಎಂ ಡಿ.ಕೆ.ಶಿವಕುಮಾರ್

"ಕುಮಾರಸ್ವಾಮಿ ಅವರು ಯಾವ ರೇಟು, ಎಂತಹ ರೇಟು ಎಂದು ಹೇಳಬೇಕು. ಕುಮಾರಣ್ಣ,...