ಬಿಹಾರ ಸರ್ಕಾರ ಬಿಡುಗಡೆ ಮಾಡಿರುವ ಜಾತಿ ಸಮೀಕ್ಷೆಯ ಅಂಕಿಅಂಶಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಹೇಳಿದೆ.
ಇದರಿಂದ ಸಮೀಕ್ಷೆಯ ತೀರ್ಮಾನಗಳು ಹಾಗೂ ನೀತಿಯನ್ನು ಪ್ರಶ್ನಿಸುವವರಿಗೆ ಅನುಕೂಲವಾಗುತ್ತದೆ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ನೇತೃತ್ವದ ಪೀಠ ತಿಳಿಸಿದೆ.
ಸಂಜೀವ್ ಖನ್ನಾ ಪೀಠಕ್ಕೆ ಸರ್ಕಾರೇತರ ಪ್ರತಿನಿಧಿಯಾಗಿ ಹಾಜರಾದ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್, ಬಿಹಾರ ಸರ್ಕಾರ ಈಗಾಗಲೇ ಸಮೀಕ್ಷೆ ನಿರ್ಧಾರದಿಂದ ಮುಂದೆ ಕಾಲಿಟ್ಟಿದ್ದು, ರಾಜ್ಯದ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 70ಕ್ಕೆ ಹೆಚ್ಚಿಸಿದೆ ಎಂದರು.
ಸಮೀಕ್ಷೆಯ ವರದಿಯನ್ನು ಸಲ್ಲಿಸಿದ ರಾಮಚಂದ್ರನ್ ಅವರು ಸರ್ಕಾರವು ವರದಿಯನ್ನು ಜಾರಿಗೊಳಿಸದಂತೆ ಮಧ್ಯಂತರ ತಡೆಯಾಜ್ಞೆ ಒಳಗೊಂಡ ಮಧ್ಯಂತರ ಪರಿಹಾರವನ್ನು ಜಾರಿಗೊಳಿಸುವಂತೆ ನ್ಯಾಯಾಲಯವನ್ನು ಕೋರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಅತಿಥಿ ಉಪನ್ಯಾಸಕರು ಇತ್ತ ಸರಕಾರ; ನಡುವೆ ನಲುಗದಿರಲಿ ವಿದ್ಯಾರ್ಥಿಗಳು
ವಿಷಯಗಳು ಬೇಗನೆ ಚಲಿಸುತ್ತವೆ. ಈ ವಿಷಯವು ಆಗಸ್ಟ್‌ನಿಂದಲೇ ಬಾಕಿಯಿದೆ. ಈ ನಡುವೆ ಮೀಸಲಾತಿಯನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಿಸಲಾಗಿದೆ. ಆದ ಕಾರಣ ಮಧ್ಯಂತರ ಪರಿಹಾರ ನೀಡಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತೇನೆ ಎಂದು ರಾಮಚಂದ್ರನ್ ತಿಳಿಸಿದರು.
ಬಿಹಾರ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ನ್ಯಾಯವಾದಿ ಶ್ಯಾಮ್ ದಿವನ್, ಸಮೀಕ್ಷೆಯು ಈಗಾಗಲೇ ಸರ್ಕಾರ ಸಾರ್ವಜನಿಕರಿಗೆ ಲಭ್ಯವಿರಿಸಿದೆ. ರಾಜ್ಯ ವಿಧಾನಸಭೆಯಲ್ಲಿಯೂ ಮಂಡಿಸಲಾಗಿದೆ ಎಂದರು
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖನ್ನಾ, ಸಮೀಕ್ಷೆಯ ಆಯ್ದ ಅಂಕಿಅಂಶಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿದರೆ ಸಮಸ್ಯೆಯುಂಟಾಗುತ್ತದೆ. ಯಾರಾದರು ಸಮೀಕ್ಷೆಯನ್ನು ಪ್ರಶ್ನಿಸಬೇಕು ಎಂದುಕೊಂಡರೆ ಅಪೂರ್ಣ ಮಾಹಿತಿಯಿಂದ ಸಮಸ್ಯೆಯಾಗುತ್ತದೆ. ಆದ ಕಾರಣ ಸಾರ್ವಜನಿಕರಿಗೆ ಲಭ್ಯವಿರಿಸಿ ಎಂದು ಮುಂದಿನ ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿದರು.
ಇತ್ತೀಚಿಗಷ್ಟೆ ಬಿಹಾರ ಸರ್ಕಾರವು ಸಮೀಕ್ಷೆ ಕೈಗೊಂಡು ಇತರ ಹಿಂದುಳಿದ ವರ್ಗಗಳು ಮತ್ತು ರಾಜ್ಯದ ಜನಸಂಖ್ಯೆಯ ಶೇ. 63 ರಷ್ಟಿದೆ, ಅದರಲ್ಲಿ ಅತ್ಯಂತ ಹಿಂದುಳಿದ ವರ್ಗಗಳು ಶೇ. 36 ರಷ್ಟಿದ್ದರೆ, ಒಬಿಸಿ ಶೇ. 27.13, ಪರಿಶಿಷ್ಟ ಜಾತಿಯ ಜನ ಶೇ. 19.7 ಮತ್ತು ಪರಿಶಿಷ್ಟ ಪಂಗಡಗಳ ಜನ ಶೇ 1.7 ರಷ್ಟಿದ್ದಾರೆ ಎಂದು ಹೇಳಿತ್ತು.