ಅಪ್ರಾಪ್ತ ಮಗಳನ್ನೇ ಅತ್ಯಾಚಾರಿಗಳಿಗೆ ಒಪ್ಪಿಸಿದ್ದ ಬಿಜೆಪಿ ಮುಖಂಡೆ! ʼಶಿಸ್ತಿನ ಪಕ್ಷʼದಲ್ಲಿ ಹೀಗೇಕೆ?

Date:

Advertisements

ಅನಾಮಿಕ ಶರ್ಮಾ ಅನಕ್ಷರಸ್ಥೆಯಲ್ಲ. ಶಿಕ್ಷಿತೆ, ಮೇಲ್ವರ್ಗದ ಹೆಣ್ಣುಮಗಳು. ಅಷ್ಟೇ ಅಲ್ಲ ಮಹಾನ್‌ ಧಾರ್ಮಿಕ ಶ್ರದ್ಧೆಯ ಪಕ್ಷ, ಹೆಣ್ಣುಮಕ್ಕಳನ್ನು ದೇವತೆಯಂತೆ ಕಾಣುತ್ತೇವೆ ಎಂದು ಹೇಳಿಕೊಳ್ಳುವ ಬಿಜೆಪಿಯ ನಾಯಕಿ. ಹಿಂದೂಗಳ ಪವಿತ್ರ ಕ್ಷೇತ್ರ ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆಯಾಗಿದ್ದಾಕೆ! ಸ್ವಂತ ಮಗಳನ್ನು ಸಾಮೂಹಿಕ ಅತ್ಯಾಚಾರಕ್ಕೆ ತಳ್ಳಿ ಜೈಲು ಸೇರಿದ್ದಾಳೆ. ಬಿಜೆಪಿಗೆ ನೈತಿಕ ಶಿಸ್ತು ಬೇಕಿಲ್ಲವೇ ?

ಅಪ್ರಾಪ್ತ ಮಗಳನ್ನೇ ತನ್ನ ಪ್ರಿಯಕರನ ತಂಡದಿಂದ ಅತ್ಯಾಚಾರ ಮಾಡಿಸಿದ್ದ ತಾಯಿ! ಈ ಸುದ್ದಿ ಓದಿದಾಗ ಎಂಥವರಿಗೂ ಹೃದಯ ಹಿಂಡಿದಂತಾಗುತ್ತದೆ. ಇಷ್ಟು ಕೆಟ್ಟ ತಾಯಿ ಇರಲು ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ಅಪ್ಪನೇ ಮಗಳ ಮೇಲೆ ಅತ್ಯಾಚಾರ ಎಸಗಿರುವ ನೂರಾರು ಪ್ರಕರಣಗಳು ಸಿಗುತ್ತವೆ. ತಂದೆಯಿಂದ ಗರ್ಭಿಣಿಯಾದ, ಮಗುವನ್ನು ಹೆತ್ತ ನತದೃಷ್ಟ ಹೆಣ್ಣುಮಕ್ಕಳು ಸಿಗುತ್ತಾರೆ. ಆದರೆ ಹೆತ್ತ ಮಗಳನ್ನು ತನ್ನ ಸ್ವಾರ್ಥಕ್ಕಾಗಿ ಕಾಮದ ಪಾಪಕೂಪಕ್ಕೆ ತಳ್ಳುವ ಅಮ್ಮಂದಿರುವ ಅಪರೂಪ. ಇಲ್ಲವೇ ಇಲ್ಲ ಎಂದಲ್ಲ, ಬಹುತೇಕ ಅಕ್ರಮ ಸಂಬಂಧ ಪ್ರಕರಣಗಳಲ್ಲಿ ಇಂತಹ ಒತ್ತಡ ಅಥವಾ ಬೆದರಿಕೆಗೆ ಹೆಣ್ಣುಮಕ್ಕಳು ಬೀಳುತ್ತಾರೆ. ಬಡತನ, ಅನಕ್ಷರತೆ, ಮೌಢ್ಯ ಪರಿಸರದ ಪ್ರಭಾವವೂ ಕಾರಣವಾಗಬಹುದು. ಆದರೆ ಅನಾಮಿಕ ಶರ್ಮಾ ಎಂಬಾಕೆ ತನ್ನ ಸ್ವಾರ್ಥಕ್ಕೋಸ್ಕರ ಗೆಳೆಯನಿಗೆ ಮಗಳ ಬದುಕನ್ನು ಬಲಿ ಕೊಟ್ಟಿದ್ದಾಳೆ.

ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕ ಶರ್ಮಾ Anamika sharma ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿದ್ದಾಳೆ. ಅನಾಮಿಕ ಶರ್ಮಾ 2024ರವರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಳು. ಆಕೆ ಗಂಡನಿಂದ ಪ್ರತ್ಯೇಕವಾಗಿದ್ದಾಳೆ, ಆದರೆ ಮಗಳು ಅಪ್ಪನೊಂದಿಗೆ ಇದ್ದಳು. ಅಪರೂಪಕ್ಕೆ ತಾಯಿಯ ಬಳಿ ಬರುತ್ತಿದ್ದಳು. ಅನಾಮಿಕ ತನ್ನ ಪ್ರಿಯಕರ ಸುಮಿತ್‌ನ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಳು. ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಮಗಳ ಮೇಲೆ ಈಕೆಯ ಸ್ನೇಹಿತ ಸುಮಿತ್ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು. ಈ ವಿಚಾರ ತಂದೆಗೆ ಹೇಳದಂತೆ ಮಗಳಿಗೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.

Advertisements

ಸಂತ್ರಸ್ತೆಯ ತಂದೆಯ ದೂರಿನ ಅನ್ವಯ ಪೊಲೀಸರು ಮೂವರನ್ನು ಬಂಧಿಸಿ ಪೋಕ್ಸೋ ಕಾಯ್ದೆ ಸೇರಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.

ಈ ಅನಾಮಿಕ ಶರ್ಮಾ ಅನಕ್ಷರಸ್ಥೆ, ಹಿಂದುಳಿದ ಅಥವ ಬಡ ಕುಟುಂಬದ ಹೆಣ್ಣಲ್ಲ. ಶಿಕ್ಷಿತೆ, ಮೇಲ್ವರ್ಗದ ಹೆಣ್ಣುಮಗಳು. ಅಷ್ಟೇ ಅಲ್ಲ ಮಹಾನ್‌ ಧಾರ್ಮಿಕ ಶ್ರದ್ಧೆಯ ಪಕ್ಷ, ಹೆಣ್ಣುಮಕ್ಕಳನ್ನು ದೇವತೆ, ಮಾತೆಯಂತೆ ಕಾಣುತ್ತೇವೆ ಎಂದು ಹೇಳಿಕೊಳ್ಳುವ ಬಿಜೆಪಿಯ ನಾಯಕಿ. ಅದರಲ್ಲೂ ಹಿಂದೂಗಳ ಪವಿತ್ರ ಸ್ಥಳ ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆಯಾಗಿದ್ದಾಕೆ! ಈಕೆ ಪಕ್ಷದ ಕಾರ್ಯಕರ್ತೆಯರನ್ನು ಇಂತಹ ದುಷ್ಟಕೂಪಕ್ಕೆ ತಳ್ಳಿರುವ ಬಗ್ಗೆ ಅನುಮಾನಿಸಲೇ ಬೇಕು. ಸ್ವಂತ ಮಗಳನ್ನು ಕಾಮುಕರ ಕೈಗಿತ್ತ ಈಕೆ ಪಕ್ಷಕ್ಕಾಗಿ ದುಡಿಯಲು ಬಂದ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಗೆ ನಂಬಲು ಸಾಧ್ಯ? ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಬೇಕು.

00 4
ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆಯಾಗಿದ್ದ ಅನಾಮಿಕ (ಹಾರ ಹಾಕಿಕೊಂಡವಳು)

ಆಕೆ ತನ್ನ ಜೀವನವನ್ನು ಹೇಗೆ ಬೇಕೋ ಹಾಗೆ ಕಟ್ಟಿಕೊಳ್ಳಲು ಸ್ವತಂತ್ರಳು. ಆದರೆ ತನ್ನ ಮಗಳು ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯ ಬದುಕನ್ನು ತನ್ನ ಸ್ವಾರ್ಥಕ್ಕೆ ಬಲಿ ಕೊಡುವ ಹಕ್ಕು ಆಕೆಗಿಲ್ಲ. ತಾನೇ ಹೆತ್ತ ಮಗಳಿಗೆ ಇಂತಹ ಶಾಶ್ವತ ಆಘಾತ ನೀಡಲು ಆ ತಾಯಿಯದ್ದು ಅಷ್ಟು ಕಠಿಣ ಕಲ್ಲು ಹೃದಯವೇ? ಅಥವಾ ದೂರಾದ ಪತಿಯ ಮೇಲಿನ ದ್ವೇಷವೇ? ಇದು ಅಧ್ಯಯನ ಯೋಗ್ಯ ವಿಷಯ.

ಈ ಸಮಾಜದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳು ಸಾಮೂಹಿಕ ಅತ್ಯಾಚಾರ ಎಂಬ ಪಿಡುಗಿನಿಂದ ನರಳುತ್ತಿರುವಾಗ, ಅಂಥವರಿಂದ ಪಾರು ಮಾಡುವ ಬಗೆ ಹೇಗೆ ಎಂದು ಸಮಾಜ ಚಿಂತಿಸುತ್ತಿರುವಾಗ, ಇಡೀ ಮಹಿಳಾ ಸಮುದಾಯ ಖಂಡಿಸುತ್ತಿರುವಾಗ ತಾಯಿಯೊಬ್ಬಳು ತನ್ನ ಮಗಳನ್ನೇ ಕಾಮುಕರ ಕಾಮತೃಷೆ ನೀಗಿಸಲು ಬಲಿ ಕೊಡುತ್ತಾಳೆ ಎಂದರೆ ಈ ಸಮಾಜ ಎಷ್ಟು ಅನಾಗರಿಕತೆಯ ಕಡೆಗೆ ಸಾಗುತ್ತಿದೆ ಎಂದು ಅಂದಾಜಿಸಬಹುದು.

ಬಹುತೇಕ ಪ್ರಕರಣಗಳಲ್ಲಿ ಒಂದು ಮುಖ್ಯ ಅಂಶ ಗಮನಿಸಬಹುದು. ದೇಶದ ಬಹುದೊಡ್ಡ ಸದಸ್ಯ ಬಲ ಇರುವ, ರಾಷ್ಟ್ರೀಯತೆ, ಧರ್ಮ ರಕ್ಷಣೆ, ಸನಾತನ ಸಂಸ್ಕೃತಿ, ಹೆಣ್ಣು ದೇವತೆ ಎಂದು ಬೊಗಳೆ ಬಿಡುವ ಬಿಜೆಪಿಯಲ್ಲಿ ಗುರುತಿಸಿಕೊಂಡ ಪುರುಷರು ಮತ್ತು ಮಹಿಳೆಯರೇ ಹೆಚ್ಚಾಗಿ ಅತ್ಯಾಚಾರ, ಸೆಕ್ಸ್‌ ಸ್ಕ್ಯಾಂಡಲ್‌ಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಹಾಗಾದರೆ ಪಕ್ಷದಲ್ಲಿ ನೈತಿಕತೆ ಶಿಸ್ತು ನಗಣ್ಯವೇ ಎಂಬ ಅನುಮಾನ ಬರುತ್ತದೆ. ಪದೇ ಪದೇ ಬಿಜೆಪಿಯ ನಾಯಕ- ನಾಯಕಿಯರು ಇಂತಹ ಹೇಸಿಗೆ ಕೃತ್ಯಗಳಲ್ಲಿ ಸಿಲುಕಿಕೊಳ್ಳುವುದು ಪಕ್ಷಕ್ಕೆ ಮುಜುಗರ ತರುವ ಸಂಗತಿ ಅಲ್ಲವೇ ಎಂದು ಯೋಚಿಸಬೇಕಿದೆ. ಬೇಟಿ ಬಚಾವೋ ಎಂದಿದ್ದ ಪಕ್ಷದ ಕತೆ ಹಾಳಾಗಲಿ, ಹೆಣ್ಣುಮಕ್ಕಳು ಇವರಿಂದ ಬಚಾವ್‌ ಆದರೆ ಅಷ್ಟೇ ಸಾಕು ಎಂಬಂತಾಗಿದೆ.

ಬಿಜೆಪಿಯ ರಾಷ್ಟ್ರಮಟ್ಟದ ನಾಯಕರಿಂದ ಹಿಡಿದು ಕೆಳಹಂತದ ಕಾರ್ಯಕರ್ತರವರೆಗೆ ಅನೇಕರು ಅತ್ಯಾಚಾರ, ಅನೈತಿಕ ಚಟುವಟಿಕೆಯ ವಿಡಿಯೋ ಚಿತ್ರೀಕರಣ, ಸೆಕ್ಸ್‌ ಸ್ಕ್ಯಾಂಡಲ್‌ಗಳಲ್ಲಿ ಭಾಗಿಯಾಗಿ ಸುದ್ದಿಯಾಗುತ್ತಿದ್ದಾರೆ. ಅದ್ಯಾಕೋ ಗೊತ್ತಿಲ್ಲ, ಸೆಕ್ಸ್‌ ಸ್ಕ್ಯಾಂಡಲ್‌, ಅತ್ಯಾಚಾರಗಳಲ್ಲಿ ಸಿಕ್ಕಿ ಬೀಳುತ್ತಿರುವವರಲ್ಲಿ ಬಹುತೇಕರು ಬಿಜೆಪಿಗರು. ಉತ್ತರ ಪ್ರದೇಶದ ಮೈನ್‌ಪುರಿಯ ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆಯ ಪುತ್ರ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ತರಹ ನೂರಾರು ಹೆಣ್ಣುಮಕ್ಕಳ ಸೆಕ್ಸ್‌ ವಿಡಿಯೋ ಮಾಡಿಟ್ಟುಕೊಂಡು ಸಿಕ್ಕಿ ಬಿದ್ದಿದ್ದಾನೆ. ಉತ್ತರ ಪ್ರದೇಶದ ಉನ್ನಾವೊ ಸಾಮೂಹಿಕ ಅತ್ಯಾಚಾರದ ಅಪರಾಧಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್‌ಸಿಂಗ್‌ ಸೆಂಗಾರ್‌ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪಿ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌. ಬಿಜೆಪಿಯ ಸಾಮಾಜಿಕ ಜಾಲತಾಣದ ಮೂವರು ಯುವಕರು ಬನಾರಸ್‌ ಬಿಎಚ್‌ಯು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಪಕ್ಷದ ಕಚೇರಿಯಲ್ಲಿ ಹೆಣ್ಣುಮಕ್ಕಳ ಜೊತೆ ಅನುಚಿತ ವರ್ತನೆ, ಸಾರ್ವಜನಿಕ ಸಭೆಗಳಲ್ಲಿ ಅಸಭ್ಯವಾಗಿ ವರ್ತಿಸುವುದು, ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವುದು, ಅವರ ಉಡುಗೆಯ ಬಗ್ಗೆ ಟೀಕೆ ಮಾಡುವುದು ಇವೆಲ್ಲ ಬಿಜೆಪಿ ನಾಯಕರಲ್ಲಿ ಕಾಣುವ ವಿಶೇಷ ಗುಣಗಳು.

ನಿನ್ನೆಯಷ್ಟೇ ಬಿಜೆಪಿ ಮುಖಂಡ ಮಧ್ಯಪ್ರದೇಶದ ಸಚಿವ ಕೈಲಾಶ್‌ ವಿಜಯ್‌ ವರ್ಗೀಯ ಹೆಣ್ಣುಮಕ್ಕಳು ಕನಿಷ್ಠ ಉಡುಗೆ ತೊಡುವ ಬಗ್ಗೆ ಟೀಕೆ ಮಾಡಿದ್ದಾನೆ. ಹೆಣ್ಣುಮಕ್ಕಳು ಸೀರೆಯುಡಬೇಕು, ಆಭರಣ ಧರಿಸಬೇಕು ಎಂದೆಲ್ಲ ಉಪದೇಶ ಕೊಟ್ಟಿದ್ದಾರೆ. ಆದರೆ, ಪುರುಷರು ಪರ ಸ್ತ್ರೀಯರನ್ನು ಕಾಮದ ಕಣ್ಣಿನಿಂದ ನೋಡಬಾರದು ಎಂದು ಉಪದೇಶ ನೀಡಿಲ್ಲ. ಕರ್ನಾಟಕದಲ್ಲಿ ಸಾಮೂಹಿಕ ಅತ್ಯಾಚಾರ, ಏಡ್ಸ್‌ ಹನಿಟ್ರ್ಯಾಪ್‌ ಆರೋಪಿ ಬಿಜೆಪಿಯ ಶಾಸಕ ಮುನಿರತ್ನ ಈಗಲೂ ಶಾಸಕನಾಗಿಯೇ ಮುಂದುವರಿದಿದ್ದಾನೆ. ತಮ್ಮ 82ನೇ ಇಳಿ ವಯಸ್ಸಿನಲ್ಲಿ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ. ಶಾಸಕ ರಮೇಶ್‌ ಜಾರಕಿಹೊಳಿ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಉಡುಪಿಯ ಮಾಜಿ ಶಾಸಕ ರಘುಪತಿ ಭಟ್‌, ಸದಾನಂದ ಗೌಡ ಅವರ ಅಶ್ಲೀಲ ವಿಡಿಯೋ ಹರಿದಾಡಿತ್ತು.

anamika sharma 1

ತಾಯ್ತನದ ವೈಭವೀಕರಣ ಅಷ್ಟೇ : ಆಪ್ತ ಸಮಾಲೋಚಕ ವಸಂತ ನಡಹಳ್ಳಿ

ಅನಾಮಿಕ ಶರ್ಮಾ ಪ್ರಕರಣವನ್ನು ನೋಡುವುದಾದರೆ, “ನಾವು ಹೆಣ್ಣನ್ನು, ತಾಯಿಯನ್ನು ಪುರುಷರಂತೆಯೇ ಮನುಷ್ಯರು ಎಂದು ನೋಡುತ್ತಿಲ್ಲ. ತಾಯಿಯನ್ನು ವೈಭವೀಕರಿಸುತ್ತೇವೆ. ಆದರೆ, ಆಕೆಯೊಳಗೂ ಒಬ್ಬ ಕ್ರೂರಿ ಇರುತ್ತಾನೆ” ಎಂದು ಆಪ್ತ ಸಮಾಲೋಚಕ ವಸಂತ ನಡಹಳ್ಳಿ ಹೇಳುತ್ತಾರೆ. ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಅವರು, “ನಾವು ತಾಯಿಯನ್ನು ವೈಭವೀಕರಿಸುತ್ತೇವೆ. ಕೆಟ್ಟ ತಂದೆ ಇರಬಹುದು, ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತೇವೆ. ಇದೆಲ್ಲ ವಿಕೃತಿಯಷ್ಟೇ. ಆಕೆಯೂ ಎಲ್ಲರಂತೆ ಮನುಷ್ಯಳು. ಅದೇ ಜೀವನದ ಸಂದರ್ಭದಲ್ಲಿ ಬೆಳೆದವಳು. ಇಂತಹ ಕೃತ್ಯಗಳನ್ನು ಮಾಡುವ ಎಲ್ಲರ ಮನಸ್ಥಿತಿಯೂ ಒಂದೇ ಆಗಿರುತ್ತದೆ. ಈ ಪ್ರಕರಣದಲ್ಲಿ ಆಕೆಗೆ ಒದಗಿ ಬಂದ ಪರಿಸ್ಥಿತಿ ಏನು ಎಂದು ಗೊತ್ತಿಲ್ಲ. ಗೆಳೆಯನನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅಥವಾ ಮಗಳನ್ನು ತನ್ನ ಬಳಿ ಉಳಿಸಿಕೊಳ್ಳಲು ಗಂಡನ ಮೇಲೆ ದ್ವೇಷದಿಂದ ಮಾಡಿದ್ದಳೋ ಗೊತ್ತಿಲ್ಲ. ನಾವು ಆಕೆಯಲ್ಲಿ ತಾಯ್ತನ ನೋಡುತ್ತೇವೆ ಆದರೆ, ಆಕೆಯೂ ಒಬ್ಬ ಮನುಷ್ಯಳು ಎಂದು ನೋಡಬೇಕು. ಪುರುಷನಿಗಿರುವ ಎಲ್ಲ ವಿಕೃತಿಗಳು ಮಹಿಳೆಯಲ್ಲೂ ಇರುತ್ತವೆ” ಎಂದು ಅವರು ವಿಶ್ಲೇಷಣೆ ಮಾಡುತ್ತಾರೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು

ಕಾಲೇಜು ವಿದ್ಯಾರ್ಥಿನಿಯೊಬ್ಬರು ಕೊಲೆಯಾಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿತ್ರದುರ್ಗ ನಗರದ ಹೊರವಲಯದ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ದಾವಣಗೆರೆ | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬಳು ಗೃಹಿಣಿ ಬಲಿ

ಸಾಲದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಸಾಲು ವಸೂಲಾತಿಗಾಗಿ ಮೈಕ್ರೋ...

Download Eedina App Android / iOS

X