ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ 4,000ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿಕೆ ನೀಡುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್‌ಗೊಳಗಾಗಿದ್ದಾರೆ.
ಜೆಡಿಯು ಮುಖ್ಯಸ್ಥರಾದ ನಿತೀಶ್ ಮೂರು ತಿಂಗಳ ಹಿಂದೆಯಷ್ಟೇ ಇಂಡಿಯಾ ಮೈತ್ರಿಕೂಟ ತೊರೆದು ಎನ್‌ಡಿಎಗೆ ಮರಳಿದ್ದರು. ನವಾಡ ಜಿಲ್ಲೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದ್ದ ಸಾರ್ವಜನಿಕ ಸಮಾವೇಶದಲ್ಲೇ ಈ ಹೇಳಿಕೆ ನೀಡುವ ಮೂಲಕ, ಬಿಹಾರ ಸಿಎಂ ಮುಜುಗರಕ್ಕೀಡಾಗಿದ್ದಾರೆ.
Abki baar 4000 paar
Jokes aside, Nitish Kumar seems embarrassed to boast about the NDA’s prospects. It is almost as if he hoping against hope that NDA wins and his palti baazi is proven a success. No way.
No way! Abki baar 200 ke iss paar😊pic.twitter.com/uV4RL68OVy
— Salman Anees Soz (@SalmanSoz) April 7, 2024
ತನ್ನ ಭಾಷಣದ ವೇಳೆ ತೊದಲುತ್ತಾ ಮಾತನಾಡಿದ ನಿತೀಶ್ ಕುಮಾರ್, ‘ಚಾರ್ ಲಾಕ್” (ನಾಲ್ಕು ಲಕ್ಷ) ಎಂದು ಹೇಳಿ ನಂತರ ತಮ್ಮನ್ನು ತಾವೇ ಸರಿಪಡಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ನೋಡುತ್ತಾ, ‘ಚಾರ್ ಹಝಾರ್ ಸೇ ಭಿ ಝ್ಯಾದಾ’ (ನಾಲ್ಕು ಸಾವಿರಕ್ಕೂ ಹೆಚ್ಚು) ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮೋದಿ ಹೇಳುತ್ತಾ ಬಂದಿದ್ದಾರೆ. ಇದನ್ನೇ ಉಚ್ಛರಿಸಲು ಹೋಗಿ ನಿತೀಶ್ ಕುಮಾರ್ ಈ ಎಡವಟ್ಟು ಮಾಡಿಕೊಂಡಿದ್ದಾರೆ.
This should go viral and everyone in Bihar should watch this
Nitish Kumar had to touch Modi’s feet and then do Pranam to him. This is what Chief Minister has reduced to?
Stop treating someone like God. pic.twitter.com/6aH6UgR7CH
— AmOxxicillin FC (@amoxcicillin1) April 7, 2024
ಬಿಹಾರದ ದೀರ್ಘಕಾಲದ ಮುಖ್ಯಮಂತ್ರಿ ಎನಿಸಿಕೊಂಡಿರುವ ನಿತೀಶ್ ಕುಮಾರ್, ಆಡಿರುವ ಈ ಮಾತು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗಿದೆ.
ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದ ನಿತೀಶ್ ಕುಮಾರ್!
ನಿತೀಶ್ ಕುಮಾರ್ ಅವರು 25 ನಿಮಿಷಗಳ ಭಾಷಣ ಮಾಡಿದ್ದರು. ಅವರು ಮಾತು ಮುಗಿಸುತ್ತಿದ್ದಂತೆ ಮೋದಿ ಅವರ ಬಳಿ ಕುಳಿತು. ಈ ವೇಳೆ ಪರಸ್ಪರ ಮಾತನಾಡಿಕೊಂಡ ನಂತರ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಸದ್ಯ ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#WATCH | Patna: Former Bihar Deputy Chief Minister and RJD leader Tejashwi Yadav says, “Today I saw a picture of Nitish Kumar where he touched the feet of Prime Minister Narendra Modi…We felt very bad. What has happened? Nitish Kumar is our guardian…There is no other Chief… pic.twitter.com/HhC641XtoO
— ANI (@ANI) April 7, 2024
ನಿತೀಶ್ ಕುಮಾರ್ ಅವರ ಈ ನಡೆಯನ್ನು ಖಂಡಿಸಿರುವ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, “ಇಂದು ನಾನು ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿದ ಚಿತ್ರವನ್ನು ನೋಡಿದೆ. ನಮಗೆ ತುಂಬಾ ನೋವಾಯಿತು. ನಿತೀಶ್ ಕುಮಾರ್ ಅವರಷ್ಟು ಅನುಭವಿ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ ಮತ್ತು ಅವರು ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟುತ್ತಿದ್ದಾರೆ” ಎಂದು ತಿಳಿಸಿದರು.
