ಯುವಕನೊಬ್ಬ ಇವಿಎಂ ಮೆಷಿನ್ ಮೂಲಕ ಬಿಜೆಪಿಗೆ 8 ಬಾರಿ ಮತ ಹಾಕಿರುವುದನ್ನು ರೆಕಾರ್ಡ್ ಮಾಡಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಉತ್ತರ ಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಈ ಬೆಳವಣಿಗೆ ನಡೆದಿದೆ. ಯುವಕ ತಾನು ಬಿಜೆಪಿಗೆ 8 ಬಾರಿ ಮತ ಹಾಕಿರುವುದನ್ನು ರೆಕಾರ್ಡ್ ಮಾಡಿಕೊಂಡಿದ್ದು, ಅದರಲ್ಲಿ ಫರೂಕಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರ ಹೆಸರು ಕಾಣಿಸುತ್ತಿದೆ. ಸದ್ಯ ಈ ವಿಡಿಯೋ ಎಕ್ಸ್ (ಟ್ವಿಟರ್)ನಲ್ಲಿ ವೈರಲ್ ಆಗುತ್ತಿದೆ.
अगर चुनाव आयोग को लगे कि ये गलत हुआ है तो वो कुछ कार्रवाई ज़रूर करे, नहीं तो…
भाजपा की बूथ कमेटी, दरअसल लूट कमेटी है। #नहीं_चाहिए_भाजपा pic.twitter.com/8gwJ4wHAdw
— Akhilesh Yadav (@yadavakhilesh) May 19, 2024
ವಿಡಿಯೋ ವೈರಲ್ ಆದ ನಂತರ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ ಮುಖಂಡ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಟ್ವೀಟ್ ಮಾಡಿದ್ದು, ಚುನಾವಣಾ ಆಯೋಗವು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಟ್ವೀಟ್ ಅನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ರೀಟ್ವೀಟ್ ಮಾಡಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.
ವೈರಲಾಗಿರುವ ವಿಡಿಯೋದಲ್ಲಿ ಇರುವ ಯುವಕ 16 ವರ್ಷದವನೆಂದು ವರದಿಯಾಗಿದೆ. ಆತನೇ ಹಂಚಿಕೊಂಡ ವಿಡಿಯೋದಲ್ಲಿ ಎಂಟು ಬಾರಿ ಮತ ಚಲಾಯಿಸುತ್ತಿರುವಾಗ ಅದನ್ನು ಕೈ ಬೆರಳಿನ ಮೂಲಕ ಲೆಕ್ಕ ಮಾಡಿ, ತೋರಿಸಿದ್ದಾನೆ.
ಸದ್ಯ ಈ ವಿಡಿಯೋ ಉತ್ತರ ಪ್ರದೇಶದ ಎತಾಹ್ ಜಿಲ್ಲೆಯ ಖಿರಿ ಪಮರನ್ ಗ್ರಾಮದ್ದು ಎಂದು ವರದಿಯಾಗಿದೆ. ಈ ಗ್ರಾಮವು ಅಲಿಗಂಜ್ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದು, ಫರೂಕಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಮುಖೇಶ್ ರಜಪೂತ್ ಸ್ಪರ್ಧಿಸಿದ್ದಾರೆ. ಮೇ 13 ರಂದು ಸಾರ್ವತ್ರಿಕ ಚುನಾವಣೆಯ ನಾಲ್ಕನೇ ಹಂತದಲ್ಲಿ ಫರೂಕಾಬಾದ್ ಕ್ಷೇತ್ರದಲ್ಲಿ ಮತದಾನ ನಡೆದಿತ್ತು.
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವಕನನ್ನು ರಾಜನ್ ಸಿಂಗ್ ಠಾಕೂರ್ ಎಂದು ತಿಳಿದುಬಂದಿದೆ. ಆತನಿಗೆ ಇನ್ನೂ ಕೂಡ 18 ವರ್ಷ ತುಂಬಿಲ್ಲ ಎಂದು ಆತನ ತಂದೆ ಮಾಹಿತಿ ನೀಡಿರುವುದಾಗಿ Scroll.in ವರದಿ ಮಾಡಿದೆ.
ಯುವಕ ರಾಜನ್ ಸಿಂಗ್ ಠಾಕೂರ್ ಅವರ ತಂದೆ ಅನಿಲ್ ಸಿಂಗ್ ಠಾಕೂರ್(43) ಅವರು ಅನಿಲ್ ಖಿರಿ ಪಾಮರನ ಗ್ರಾಮದ ಅಧ್ಯಕ್ಷರಾಗಿದ್ದು, ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ವರದಿ ತಿಳಿಸಿದೆ.
अपनी हार सामने देख कर भाजपा जनादेश को झुठलाने के लिए सरकारी तंत्र पर दबाव बना कर लोकतंत्र को लूटना चाहती है।
कांग्रेस चुनावी ड्यूटी कर रहे सभी अधिकारियों से यह अपेक्षा करती है कि वो सत्ता के दबाव के सामने अपनी संवैधानिक ज़िम्मेदारी न भूलें।
वरना INDIA की सरकार बनते ही ऐसी… https://t.co/fk4wXL8QZy
— Rahul Gandhi (@RahulGandhi) May 19, 2024
ಘಟನೆಯ ಬಗ್ಗೆ Scroll.in ಜೊತೆಗೆ ಮಾತನಾಡಿರುವ ಯುವಕನ ತಂದೆ, “ಮಗನ ವಿಡಿಯೋ ಬಗ್ಗೆ ತಪ್ಪಾಗಿ ಬಿಂಬಿಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಯಂತ್ರವನ್ನು ಪರೀಕ್ಷಿಸುತ್ತಿದ್ದಾಗ ಅದರಲ್ಲಿ ಮತ ಹಾಕಿದ್ದಾನೆ” ಎಂದು ಹೇಳಿದ್ದಾರೆ.
ವಿಡಿಯೋ ವೈರಲಾಗಿರುವ ಬಳಿಕ, ತನ್ನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆಸಲಾಗಿತ್ತು ಮತ್ತು ಇದುವರೆಗೂ ತನ್ನ ಮಗನ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ಕೂಡ ಖುದ್ದು ಅವರೇ ಮಾಹಿತಿ ನೀಡಿದ್ದಾರೆ.
चुनाव आयोग जी,
देख रहे हैं.. एक लड़का 8-8 बार वोट कर रहा है.
अब तो जागिए. pic.twitter.com/2UQqE1XfLv
— Congress (@INCIndia) May 19, 2024
ಘಟನೆಯ ಬಗ್ಗೆ ಮಾತನಾಡಿರುವ ಫರೂಕಾಬಾದ್‌ನ ಅಧಿಕಾರಿ ಸುಭಾಷ್ ಚಂದ್ರ ಪ್ರಜಾಪತಿ, “ಯುವಕ ಮತಯಂತ್ರದಲ್ಲಿ ಹಲವು ಬಾರಿ ಮತ ಹಾಕಿರುವ ವಿಡಿಯೋ ವೈರಲಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಈ ಬಗ್ಗೆ ಶೀಘ್ರದಲ್ಲೇ ಪ್ರಕರಣವನ್ನು ದಾಖಲಿಸಲಿದ್ದೇವೆ” ಎಂದು ತಿಳಿಸಿರುವುದಾಗಿ Scroll.in ತಿಳಿಸಿದೆ.
You can see the names of the candidates.
1. BJP : Mukesh Rajput
2. SP : Dr. Naval Kishor Shakya
3. BSP : Kranti Pandey pic.twitter.com/CzJWtHnRy3— Mohammed Zubair (@zoo_bear) May 19, 2024
ಈ ಬಗ್ಗೆ ಕಾಂಗ್ರೆಸ್ ಕೂಡ ತಮ್ಮ ‘ಎಕ್ಸ್’ ಖಾತೆಯಲ್ಲಿ ವೈರಲ್ ವಿಡಿಯೋ ಹಂಚಿಕೊಂಡಿದ್ದು, “ಚುನಾವಣಾ ಆಯೋಗದವರೇ, ಕನಿಷ್ಠ ಈಗಲಾದರೂ ಎಚ್ಚೆತ್ತುಕೊಳ್ಳಿ. ನೀವು ನೋಡುತ್ತಿದ್ದೀರಲ್ವಾ. ಒಬ್ಬ ಹುಡುಗ 8-8 ಬಾರಿ ಮತ ಚಲಾಯಿಸುತ್ತಿದ್ದಾನೆ. ಇನ್ನಾದರೂ ಕ್ರಮ ಕೈಗೊಳ್ಳಿ” ಎಂದು ಕೇಂದ್ರ ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ, ಒತ್ತಾಯಿಸಿದ್ದಾರೆ.
