ಸುಪ್ರೀಂಕೋರ್ಟ್‌ನಲ್ಲಿ ಅನಾವರಣ ಮಾಡಿರುವ ನೂತನ ಪ್ರತಿಮೆಯಲ್ಲಿ ನ್ಯಾಯದೇವತೆ ಕಣ್ಣಿಗೆ ಕಪ್ಪುಬಟ್ಟೆ ಧರಿಸಿರುವ ಮತ್ತು ಖಡ್ಗ ಹಿಡಿದಿರುವ ದೃಶ್ಯ ಮಾಯವಾಗಿದೆ. ಹೊಸ ಪ್ರತಿಮೆಯಲ್ಲಿ ನ್ಯಾಯದೇವತೆ ಕಣ್ಣು ತೆರೆದುಕೊಂಡಿದ್ದಾಳೆ ಹಾಗೂ ಎಡಗೈಯಲ್ಲಿ ಭಾರತದ ಸಂವಿಧಾನದ ಪ್ರತಿ ಹಿಡಿದುಕೊಂಡಿದ್ದಾಳೆ. ಆದರೆ ಬಲಗೈಯಲ್ಲಿರುವ ನ್ಯಾಯದ ತಕ್ಕಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಬ್ರಿಟಿಷ್ ಪರಂಪರೆಯಿಂದ ಭಾರತ ಮುಂದಕ್ಕೆ ಚಲಿಸಬೇಕು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಬದಲಾವಣೆಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದು, ಅವರ ಪ್ರಕಾರ, ಕಾನೂನು ಎಂದೂ ಕುರುಡಾಗಿರಲು ಸಾಧ್ಯವಿಲ್ಲ. ಅದು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ- ಬಿಜೆಪಿ ಪಾಲಿಗೆ ವರವೇ ಅಥವಾ ಶಾಪವೇ?
“ನ್ಯಾಯದೇವತೆ ಕೈಯಲ್ಲಿ ಖಡ್ಗದ ಬದಲು ಸಂವಿಧಾನವನ್ನು ಹಿಡಿದಿರಬೇಕು. ಈ ಮೂಲಕ ಸಂವಿಧಾನದ ಮೂಲಕವೇ ಆಕೆ ನ್ಯಾಯದಾನ ಮಾಡುತ್ತಾಳೆ ಎನ್ನುವ ಸಂದೇಶ ದೇಶಕ್ಕೆ ತಲುಪಬೇಕು ಎನ್ನುವುದು ಅವರ ಆಶಯ” ಎಂದು ಮೂಲಗಳು ಸ್ಪಷ್ಟಪಡಿಸಿವೆ. ಖಡ್ಗ ಹಿಂಸೆಯ ಪ್ರತೀಕವಾಗಿದ್ದು, ನ್ಯಾಯಾಲಯಗಳು ಸಂವಿಧಾನದ ಕಾನೂನುಗಳ ಅನ್ವಯ ನ್ಯಾಯದಾನ ಮಡುತ್ತವೆ ಎನ್ನುವುದು ಸಿಜೆಐಯವರ ಸಮರ್ಥನೆ.
ಸಾಮ್ರಾಜ್ಯಶಾಹಿ ಆಡಳಿತದ ಅವಧಿಯ ಈ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯದೇವತೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರುತ್ತಿತ್ತು. ಕೈಯಲ್ಲಿ ಆಕೆ ಹಿಡಿದಿದ್ದ ಖಡ್ಗ, ಅನ್ಯಾಯವನ್ನು ತಡೆಯುವ ಆಕೆಯ ಅಧಿಕಾರ ಹಾಗೂ ಶಕ್ತಿಯ ಪ್ರತೀಕವಾಗಿತ್ತು.
ನಮ್ಮ ದೇಶದಲ್ಲಿ ಕಾಣುವ ನ್ಯಾಯದೇವತೆಯ ಮೂರ್ತಿ ಮೂಲತಃ ರೋಮ್ ಸಾಮ್ರಾಜ್ಯದ ಕಲ್ಪನೆ. ಇದು ಮೊದಲ ಬಾರಿ ಕಂಡು ಬಂದಿದ್ದು ರೋಮ್ನ ಆಗಸ್ಟಸ್ ಸಾಮ್ರಾಜ್ಯದಲ್ಲಿ ನ್ಯಾಯದೇವತೆ ಅಂದರೆ ಲೇಡಿ ಆಫ್ ಜಸ್ಟಿಸ್ ರೋಮನ್ ಪುರಾಣಗಳಲ್ಲಿ ಬರುವ ಜಸ್ಟಿಟಿಯಾ ಎಂಬ ದೇವತೆ. ಆಕೆ ನ್ಯಾಯಕ್ಕೆ ಅಧಿಪತಿ 16ನೇ ಶತಮಾನದಲ್ಲಿ ಮೊದಲ ಬಾರಿ ಈ ನ್ಯಾಯದೇವತೆಯ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಯಿತು. ಯಾರಿಗೂ ಕೂಡ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ, ನ್ಯಾಯದೇವತೆಯೂ ಕೂಡ ಕಟಕಟೆಗೆ ಬಂದ ಆರೋಪಿಗಳಲ್ಲಿ ಬೇಧಭಾವ ಇಲ್ಲದಿರಲಿ ಎಂಬ ಉದ್ದೇಶದಿಂದ ನ್ಯಾಯದೇವತೆಯ ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು.
16ನೇ ಶತಮಾನದಿಂದಲೂ ನ್ಯಾಯದೇವತೆ ಇದೇ ರೀತಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಹಾಗೂ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡ ರೂಪದಲ್ಲಿಯೇ ಇದ್ದಾಳೆ. ವಿಶ್ವದ ಅನೇಕ ರಾಷ್ಟ್ರಗಳ ಕೋರ್ಟ್ಗಳಲ್ಲಿ ಇದೇ ನ್ಯಾಯದೇವತೆಯ ಪ್ರತಿಮೆಯನ್ನು ಇಡಲಾಗಿದೆ. ಮೊಟ್ಟ ಮೊದಲ ಬಾರಿ ಈ ನ್ಯಾಯದೇವತೆಯ ಎದುರು ಕೋರ್ಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹನ್ಸ್ಗೈಂಗ್,1543ರಲ್ಲಿ ಬರ್ನ್ನಲ್ಲಿ ಈ ನ್ಯಾಯದೇವತೆಯ ಎದುರು ಮೊದಲ ವಿಚಾರಣೆ ನಡೆಸಲಾಗಿತ್ತು. ಆಗ ಬರ್ನ್ ರೋಮನ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು.
