ಬಾನುಗೆ ಬೂಕರ್: ಅಭಿನಂದನೆ ಸಲ್ಲಿಸಲೂ ಮೋದಿ ಹೃದಯ ದಾರಿದ್ರ್ಯ

Date:

Advertisements

ಅಂತಾರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಹೇಳದಷ್ಟೂ ಹೃದಯ ದಾರಿದ್ರ್ಯ ತೋರಿದ್ದಾರೆ ಪ್ರಧಾನಮಂತ್ರಿ ಮೋದಿ.

ಕೇವಲ 56 ಅಂಗುಲ ಅಗಲದ ಎದೆ ಇದ್ದರೆ ಸಾಲದು, ಅದರೊಳಗೊಂದು ಹೃದಯವೂ ಇರಬೇಕೆಂದು ಹಿಂದೊಮ್ಮೆ ಹೇಳಿದ್ದರು ಪ್ರಿಯಾಂಕಾ ಗಾಂಧೀ. ಹತ್ತು ದಿನಗಳ ಹಿಂದೆ ಪ್ರಕಟವಾದ ಸಿ.ಬಿ.ಎಸ್.ಇ. ಶಾಲಾ ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದ ಮಕ್ಕಳಿಗೆ ಅಭಿನಂದನೆ ಹೇಳಿದ್ದರು. ಈ ಮಕ್ಕಳಿಗೆ ತೋರಿದ ಇದೇ ಹೃದಯವಂತಿಕೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ, ಭಾರತದ ಬಾವುಟವನ್ನು ಎತ್ತಿ ಹಿಡಿದ ಮಹಿಳೆಗೂ ತೋರಬಹುದಿತ್ತು. ವಿಶ್ವಗುರು ಎಂದು ನಗಾರಿ ಬಾರಿಸುವವರು ‘ವಿಶ್ವಗುರುವಿನ’ ಪತಾಕೆ ಹಾರಿಸಿದವರನ್ನು ಅಭಿನಂದಿಸಬೇಕಲ್ಲವೇ? ದೀಪಾ ಭಾಸ್ತಿ ಅವರು ಮಾಡಿದ್ದ ಬಾನು ಅವರ ಸಣ್ಣ ಕತೆಗಳ ಇಂಗ್ಲಿಷ್ ಅನುವಾದ ‘ಹಾರ್ಟ್ ಲ್ಯಾಂಪ್’ಗೆ ಇದೇ ತಿಂಗಳ 21 ರಂದು ಬೂಕರ್ ಪ್ರಶಸ್ತಿ ದೊರೆತಿತ್ತು.

ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧೀ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisements

ಸದಾ ಪ್ರಚಾರ ಪಡೆಯುವುದರಲ್ಲಿ ಮುಂಚೂಣಿಯಲ್ಲಿರುವ ನರೇಂದ್ರ ಮೋದಿಯವರು, ನಮ್ಮ ದೇಶಕ್ಕೆ ಇಷ್ಟೊಂದು ಪ್ರತಿಷ್ಠಿತ ಪ್ರಶಸ್ತಿ ಬಂದಿದ್ದರೂ ಕೂಡ ಒಂದು ಅಭಿನಂದನಾ ಟ್ವೀಟ್ ಕೂಡ ಮಾಡದಿರುವುದು ಅವರ ಸಣ್ಣತನಕ್ಕೆ ಸಾಕ್ಷಿ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ಹೃದಯ ದಾರಿದ್ರ್ಯ ಪ್ರದರ್ಶಿಸಿರುವುದು ಇದೇ ಮೊದಲೇನಲ್ಲ.

ರವೀಶ್ ಕುಮಾರ್ – 2019

ದೇಶದ ಹಿರಿಯ ಪತ್ರಕರ್ತ ರವೀಶ್ ಕುಮಾರ್ ‘ಏಷ್ಯಾದ ನೋಬೆಲ್’ ಎಂದೇ ಬಣ್ಣಿಸಲಾಗುವ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿಗೆ 2019ರಲ್ಲಿ ಭಾಜನರಾಗಿದ್ದರು. ಎನ್‌ಡಿಟಿವಿ ಹಿಂದಿ ಚಾನೆಲ್‌ನಲ್ಲಿದ್ದ ಸಂದರ್ಭದಲ್ಲಿ ಪ್ರೈಮ್ ಟೈಮ್ ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದ ರವೀಶ್ ಕುಮಾರ್ ಅವರಿಗೆ, ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಗಮನ ಸೆಳೆಯುವಂತೆ ಮಾಡಿದ್ದಕ್ಕಾಗಿ ಹಾಗೂ ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ಈ ಅಂತಾರಾಷ್ಟ್ರೀಯ ಪ್ರಶಸ್ತಿಯು ಲಭಿಸಿತ್ತು.

ರವೀಶ್
ರವೀಶ್ ಕುಮಾರ್

ರವೀಶ್ ಕುಮಾರ್ ಅವರು ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಮತ್ತು ಕೋಮುವಾದವನ್ನು ದಿಟ್ಟವಾಗಿ ಖಂಡಿಸುವ ಕೆಲವೇ ಕೆಲವು ಪತ್ರಕರ್ತರಲ್ಲೊಬ್ಬರು.

ಗೀತಾಂಜಲಿ ಶ್ರೀ – 2022

ಗೀತಾಂಜಲಿ ಶ್ರೀ ಅವರು ಹಿಂದಿ ಭಾಷೆಯ ಪ್ರಮುಖ ಲೇಖಕಿಯಾಗಿ ಗುರುತಿಸಿಕೊಂಡವರು. ಇವರು 2018ರಲ್ಲಿ ಬರೆದಿದ್ದ “ರೇತ್ ಸಮಾಧಿ” ಪುಸ್ತಕವನ್ನು ಅಮೆರಿಕದ ಡೇಸಿ ರಾಕ್​ವೆಲ್ ಇಂಗ್ಲಿಷ್​ಗೆ ಅನುವಾದಿಸಿದ್ದರು.

geetanjali and author
ಅನುವಾದಕಿ ಅಮೆರಿಕದ ಡೇಸಿ ರಾಕ್​ವೆಲ್ ಅವರೊಂದಿಗೆ ಗೀತಾಂಜಲಿ ಶ್ರೀ

‘ಟೂಂಬ್ ಆಫ್ ಸ್ಯಾಂಡ್’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿದ್ದ ಈ ಕೃತಿಗೆ 2022ರಲ್ಲಿ ಬೂಕರ್ ಪ್ರಶಸ್ತಿ ಸಂದಿತ್ತು. ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದೀ ಮೂಲದ ಕೃತಿ ಎಂಬ ಗೌರವಕ್ಕೂ ಪಾತ್ರವಾಗಿತ್ತು. ಅಷ್ಟೇ ಅಲ್ಲದೆ ಬೂಕರ್ ಗೆದ್ದ ಮೊದಲ ದಕ್ಷಿಣ ಏಷ್ಯಾದ ಭಾಷಾ ಕೃತಿ ಎಂಬ ಹೆಗ್ಗಳಿಕೆ ಹೊಂದಿತ್ತು. ಇವರನ್ನೂ ಅಭಿನಂದಿಸದೆ ಹೋದರು ಪ್ರಧಾನಿ ಮೋದಿ. ಗೀತಾಂಜಲಿಶ್ರೀ ಕೋಮುವಾದದ ವಿರುದ್ಧ ದನಿ ಎತ್ತಿದವರಾಗಿದ್ದರು ಎಂಬುದು ಇಲ್ಲಿ ಉಲ್ಲೇಖಿಸಬೇಕಾದ ಸಂಗತಿ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

28 COMMENTS

    • Simple and nice comment. Yella kelasakku nimge appreciate madlikke modiji ne beku… Ivalappa ivlu matthe ivala maga modi sir ge vote hakalla… Devarane en madidru ivarige holeli hunese hannu toladange…

      • Howdu , ene madidru ivarige khushi illa. Ishtu modiji bagge comment hakidiya udda article madi , neen enu prashasti padedavarige abhinandan helthaidiya athva jagla hachthaidiya . Be grateful for the work you are doing . Don’t judge others. Nimma athara 100 tappu itkondu bere avara mele comment madodu. Morons . You wish the person and keep quiet.

        And congratulations to the person who has won this award.

  1. ದೇಶದ ಪ್ರಧಾನಿಯ ಕೆಲಸ ಎಲ್ಲರಿಗೂ ಅಭಿನಂದನೆ ಹೇಳೋದೆನ್ರೀ??

    ಕೋಮುಸೌಹಾರ್ದದ ಹೆಸರಿನಲ್ಲಿ ಬದುಕೋದು ನಮ್ಮಂತವರಿಗೆ ಮಾತ್ರ ಸರಿ ಹೋಗಬಹುದೆನೋ.. ದೇಶದ ಪ್ರಧಾನಿಗೆ ಹೃದಯ ದಾರಿದ್ರ್ಯ ಎನ್ನುವ ನಿಮ್ಮ ಕೀಳು ಮನಸ್ಥಿತಿಗೆ ಧಿಕ್ಕಾರವಿರಲಿ.

  2. ದೇಶದ ಪ್ರಧಾನಿಯ ಕೆಲಸ ಎಲ್ಲರಿಗೂ ಅಭಿನಂದನೆ ಹೇಳೋದೆನ್ರೀ??

    ಕೋಮುಸೌಹಾರ್ದದ ಹೆಸರಿನಲ್ಲಿ ಪ್ರಚಾರ ಪಡೆದು ಬದುಕೋದು ನಿಮ್ಮಂತವರಿಗೆ ಮಾತ್ರ ಸರಿ ಹೋಗಬಹುದೆನೋ.. ದೇಶದ ಪ್ರಧಾನಿಗೆ ಹೃದಯ ದಾರಿದ್ರ್ಯ ಎನ್ನುವ ನಿಮ್ಮ ಕೀಳು ಮನಸ್ಥಿತಿಗೆ ಧಿಕ್ಕಾರವಿರಲಿ.

    • ಈ ದಿನ. ಕಾಂ ಪತ್ರಿಕೆ ಕೂಡ
      ವಾಂತಿಭಾರತಿ ಸಹೋದರ ಸಮಾನ ಪತ್ರಿಕೆ ಅನಿಸಲ್ವಾ?

      ಇತ್ತೀಚೆಗೆ ಇವರ ಕೆಲವೊಂದು ಲೇಖನಗಳನ್ನು ನೋಡಿದ್ರೆ
      ಇಸ್ರೇಲ್ ಬಗ್ಗೆ ಕೆಟ್ಟದಾಗಿ ಹೇಳಿರುವವರ ಮಾತುಗಳನ್ನು ಹೈಲೈಟ್ ಮಾಡಿ
      ಮೋದಿಜಿ ಸರಕಾರದ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡುವ ವ್ಯಕ್ತಿಗಳ ನ್ಯೂಸ್ ಹೈಲೈಟ್ ಮಾಡಿ
      ಕೊಡೋದನ್ನು ಕಾಣುತ್ತಿದೆ

  3. ಅವರಿಗೆ ಈ ವಿಷಯ ತಿಳಿದಿದ್ದರೆ ಖಂಡಿತಾ ಮಾಡುತ್ತಾರೆ, ಸಿದ್ಧರಾಮಯ್ಯನ ಹಾಗೆ ದುರಹಂಕಾರಿ ಅಲ್ಲ, ರಾಹುಲ್ ಗಾಂಧಿ ಹಾಗೂ ಅವನ ವಂಶಸ್ಥರ ಹಾಗೆ ಹುಡುಕಿ ಹುಡುಕಿ ಸಾಬರ ಮನೆಗೆ ಮಾತ್ರ ಹೋಗಿ ಸಾಂತ್ವನ ಹೇಳುವವರಲ್ಲ,. ಪತ್ರಕರು ಎಂದರೆ ಯಾರ ಚಮಚಗಿರಿ ಮಾಡಬಾರದು, ನಿಮ್ಮ ಧ್ವನಿ ಕೂಡ ಎಡಚರ ಹಾಗೆ ಇದೆ.

  4. ಕುವೆಂಪು, ಬೇಂದ್ರೆ, ಎಸ್ ಎಲ್ ಭೈರಪ್ಪ ಸೇರಿದಂತೆ ಕನ್ನಡದ ಅನೇಕ ಸಾಹಿತ್ಯ ದಿಗ್ಗಜರಿಗೆ ಸಿಗಲಾರದ ಬೂಕರ್ ಪ್ರಶಸ್ರಿ ಹೆಸರನ್ನೇ ಕೇಳದ ಒಬ್ಬ ಲೇಖಕಿಗೆ ಸಿಕ್ಕಿದೆಯೆಂದರೆ ಅದರ ಹಿಂದೆ ಇರುವ ಪೂರ್ವಗ್ರಹ ಭಾವನೆ ನಮ್ಮಂಥ ಸಾಮಾನ್ಯರಿಗೂ ಅರ್ಥವಾಗುತ್ತದೆ. ಭೈರಪ್ಪನವರಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ರಿ ಸಿಕ್ಕಾಗ ಹೃದಯ ದಾರಿದ್ರ್ಯ ಪ್ರದರ್ಶಿಸಿದ್ದ ನೀವೆಲ್ಲ ( ಕಾಂಗ್ರೆಸ್ ನಾಯಕರು ಸೇರಿ) ಒಬ್ಬ ಮುಸ್ಲಿಮ್ ಮಹಿಳೆಗೆ ಪ್ರಶಸ್ತಿ ದೊರಿದ ಕೂಡಲೇ ಬಾಯಿ ತೆರೆದುಕೊಂಡು ಓಡಿ ಬರುವ ಹಿಂದಿನ ಹುನ್ನಾರವೇ ತುಷ್ಟೀಕರಣ.
    ರಾಜಕೀಯ ನಾಯಕರು ತಮ್ಮ ಸಣ್ಣತನ ತೋರಲಿ ಆದರೆ ಪತ್ರಿಕಾ ಮಾಧ್ಯಮದವರಾದ ನಿಮಗೇನು ಗರ ಬಡಿದಿದೆ ಇಂಥ ತಾರತಮ್ಯ ತೋರಲು ? ನಿಮ್ಮಂಥವರ ಸಣ್ಣತನ ದೇಶಕ್ಕೆ ಅಪಾಯಕಾರಿ ಎಂಬ ಸಂಗತಿ ತಿಳಿದಿರಬೇಕು. ದೇಶದ ಮೇಲೆ ಉಗ್ರ ದಾಳಿಯಾದಾಗ ಪ್ರತಿಭಟಿಸದೇ ಹೇಡಿತನ ತೋರಿಸುವವರು ಮೋದಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಿಲ್ಲ, ಅದನ್ನು ಬಗ್ಗು ಬಡಿಯಲಿಲ್ಲ ಎಂಬ ಉತ್ತರನ ಪೌರುಷ ತೋರುವ ಕಾಂಗ್ರೆಸ್ ನಾಯಕರಂಥ ಮನಸ್ಥಿತಿ ನಿಮ್ಮಂಥ ಪತ್ರಕರ್ತರಿಗೆ ಶೋಭಿಸುವುದಿಲ್ಲ. ಈ ಸೋಗಲಾಡಿತನ ಬಿಟ್ಟು ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ತೊಡಗಿ.
    9448863309 ಉಮೇಶ ಬೆಳಕೂಡ, ಪತ್ರಕರ್ತ

    • ಅದೆಲ್ಲ ಅವರಿಗೆ ಯಲ್ಲಿ ಅರ್ಥ ಆಗುತ್ತೆ ಬಿಡಿ ಸರ್ ಯಾಕಂದ್ರೆ ಅವರುನೂ ಒಂದು ಪಕ್ಷದ ಚಿಲ್ಲರೆ ಕಾಸುಗಳಿಗೆ ಆಸೆ ಬಿದ್ದು ದೇಶದ ವಿರುದ್ಧ ಹಾಗೂ ನಿಷ್ಠಾವಂತರ ವಿರುದ್ಧ ಇವರು ಹೇಳಿಕೆಗಳನ್ನು ಕೊಡುತ್ತಾರೆ ಅಂದ್ರೆ ಇವರ ಮನಸ್ಥಿತಿ ಎಂತಹದ್ದು ಅಂತ ಎಲ್ಲರಿಗೂ ಗೊತ್ತಾಗುತ್ತೆ.. 🤔

  5. The commentor should think that she never said a word of consolation to the victims of Bangladesh Hindus or many cases where Hindus are victims.
    Any moral ground to comment on PM who is utterly busy in entertaining and planning the ever changing security scenario in the world and our country.
    She should restrain from making such comments in future, lest her dignity will be at stake.

  6. ಇಂತಹ ಉಪಯೋಗವಿಲ್ಲದ ಪ್ರಶ್ನೆ ಮಾಡಿ ದ ಈ ದಿನ ಅಂಕಣಕ್ಕೆ ಧಿಕ್ಕಾರ. ಕೆಲಸಕ್ಕೆ ಬರೋ ವಿಚಾರಗಳನ್ನು ಮುದ್ರಿಸಿ. ಯಾರೇನು ಪ್ರಶಸ್ತಿ ಪಡೆದು ಭಾರತ ದೇಶಷದ ಬಗ್ಗೆ ವಿಶೇಷ ಗೌರವ ತೋರಿಸಲ್ಲ. ಕಿತ್ತು ತೋರಿಸಂತ ಸಾಧನೆ ಎಲ್ಲಿದೆ. ಮೊದಲು ಪ್ರಶಸ್ತಿ ಪಡೆದ ನಿಮ್ಮ ಮಕ್ಕಳನ್ನು ಸೇನೆಗೆ ಸೇರಿಸಿ.

  7. ಈ ಎಡಚರರಿಗೆ ಹುಳುಕು ಹುಡುಕುವುದೇ ಕೆಲಸವಾದರೆ modi ji ಗೆ ದೇಶದ ಬೇಕಾದಷ್ಟು ಕೆಲಸ ಇದೆ.

  8. ಅವರು ನಪಾಕಿಸ್ತಾನ ಬೆಂಬಲಿಸುವ ಭಯೋತ್ಪಾದಕರು ಮತ್ತು ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಿದ್ದರೆ. ನಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರದ ವಿರುದ್ಧ ಧ್ವನಿ ಎತ್ತಿದ್ದರೆ. ಪ್ರಧಾನಿಗೆ ಹೆಚ್ಚಿನ ಜವಾಬ್ದಾರಿಯುತ ವಿಷಯಗಳಲ್ಲಿ ಭಾಗವಹಿಸಬೇಕಾಗಿದೆ. ಅವರು ಎಲ್ಲರಿಗೂ ಶುಭ ಹಾರೈಸಲು ಕುಳಿತಿಲ್ಲ . ನಮ್ಮ ಪ್ರಧಾನ ಮಂತ್ರಿಯವರ ಬಗ್ಗೆ ಎಲ್ಲರೂ ಗೌರವಯುತ ಪದಗಳನ್ನು ಬಳಸಬೇಕು.

  9. ಮನಸ್ಸು ದರಿದ್ರ ಆಗಿದ್ರೆ ಪಹಲ್ಗಾಮ್ ದಾಳಿಲಿ ಗಂಡನ್ನ ಕಳಕೊಂಡವರಿಗಾಗಿ ಆಪರೇಷನ್ ಸಿಂಧೂರ ಮಾಡ್ತಿರಲಿಲ್ಲ..ಮನೇಲಿ ಬೆಚ್ಚಗೆ ಕೂತು ಬಾಯಿಗೆ ಬಂದಿದ್ ಬರಿತಿರಲ್ಲ, ಬೆಚ್ಚಗೆ ಕೂರೋಕೆ ಕಾರಣ ಯಾರು ಅನ್ನೋದನ್ನೂ ಮರೆತು..ನಿಮ್ಮಂತೋರಿದ್ರೆ ಪಾಕಿಸ್ತಾನ ಹಾಯಾಗಿ ಒಳಗೆ ನುಗ್ಗಿ ಬಂದು ಹೊಡಿತಾರೆ ..ತು ನಿಮ್ಮ

  10. ಮೊದಲು ನಿಮ್ಮ ಪತ್ರಿಕೆ ದೇಶ ಬೆಳಸೋಕಡೆ ಗಮನಕೊಡಿ ಕೋಮುವಾದ ಸೃಷ್ಟಿ ಮಾಡಬೇಡಿ ದೇಶದಲ್ಲಿ ಎಂದು ನಿಮ್ಮಲ್ಲಿ ವಿನಂತಿ ಜೈ ಭಾರತ ಮಾತಾ ಜೈ ಮೋದಿ ಜೀ

  11. ನಿನ್ನಂತವನಿಗೆ ನಾಚಿಕೆ ಆಗಬೇಕು ವರದಿ ಬರೆಯುವ ಅವನಿಗೆ .

    ಸಮಾಜದಲ್ಲಿ ನಾಗರಿಕ ಸಂಘರ್ಷ ಕೋಮು ಸಂಘರ್ಷ ಉಂಟುಮಾಡುವ ನಿಮ್ಮಂತಹ ಪತ್ರಿಕೆಗಳನ್ನ ವೆಬ್ ಸೈಟ್ ಗಳನ್ನ ಮೊದಲು ನಿಷೇಧ ಮಾಡಬೇಕು.

  12. ನಾಚಿಕೆ ಆಗಲ್ವಾ ನಿನಗೆ ಸಮಾಜದ ಶಾಂತಿ ಹಾಳು ಮಾಡುವ ಪತ್ರಿಕೆ ನಿಮ್ಮದು.

    ಎಲ್ಲ ವಿಷಯಗಳ ಬಗ್ಗೆ ಬರಿತಿಯಾ ಅಲ್ವಾ ಕಾಶ್ಮೀರಿ ಹಿಂದುಗಳಿಗೆ ಆದ ಅನ್ಯಾಯದ ಬಗ್ಗೆ ಬರಿ.

  13. ಹರೇಕಳ ಹಾಜಬ್ಬ ಹಾಗೂ ಕೊಪ್ಪಳದ ಸಾಮಾನ್ಯ ಮಹಿಳೆಗೆ ಪದ್ಮಶ್ರೀ ಪುರಸ್ಕಾರ ದೊರಕಿದಾಗ ನಿಮ್ಮ ಹೃದಯ ದಾರಿದ್ರ್ಯವನ್ನು ಯಾರ ಹತ್ತಿರ ಒತ್ತೆ ಇಟ್ಟಿದ್ದೀರಿ, ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ.

  14. ಲೇಖನಕ್ಕೊಂದು ಧಿಕ್ಕಾರ…
    ಹಾಗೆಯೇ ಪ್ರಜ್ಞಾಪೂರ್ವಕವಾಗಿ ಯೋಚಿಸಿ ಅತ್ಯುತ್ತಮ ಪ್ರತಿಕ್ರಿಯೆ ನೀಡಿರುವ ನನ್ನೆಲ್ಲಾ ದೇಶಬಾಂಧವರಿಗೆ ಹೃತ್ಪೂರ್ವಕ ಅಭಿನಂದನೆಗಳು💐💐 ಇದೇ ಬದಲಾವಣೆ ಯನ್ನೇ ತಾಯಿ ಭಾರತಿ ಬಯಸಿದ್ದು.. ನಿಮ್ಮಲ್ಲರ ಪ್ರತಿಕ್ರಿಯೆಗಳನ್ನು ಓದಿ ಮನತೃಪ್ತಿಯಾಯ್ತು…

  15. E.dina and vartha bharthi are congress sponsered anti hindu, anti-national channels, they dont want the country to go forward, these are like termites inside the country.

  16. ಆ ಫೇಕೂಗೆ ಅದೇನು ಪ್ರಶಸ್ಥಿ ಅಂತಾದರೂ ಗೋತ್ತಿರಬೇಕಲ್ಲವೇ, ಮೋಡನೋಡಿ ಮಿಸೈಲ್ ಬಿಟ್ಟವನಲ್ಲವೇ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X