ಹೋಳಿ ಹಬ್ಬದ ರಜೆಯ ಬಳಿಕ ಇಂದಿನಿಂದ ಮತ್ತೆ ಬಜೆಟ್ ಅಧಿವೇಶನ ಆರಂಭವಾಗಿದೆ. ಇಂದು ರಾಜ್ಯಸಭೆಯಲ್ಲಿ ಮಣಿಪುರ ಬಜೆಟ್ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆ, ರಾಜ್ಯಸಭೆ – ಉಭಯ ಸದನಗಳಲ್ಲಿಯೂ ಪ್ರಮುಖ ವರದಿ, ಮಸೂದೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಸುಮಾರು ಎರಡು ವರ್ಷಗಳ ಅವಧಿಯಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು, 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರವು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಮಣಿಪುರವನ್ನು ಕಟ್ಟಲು ನೀವು ಇಚ್ಛಿಸದಿದ್ದರೆ, ಅದನ್ನು ಆಳುವ ಹಕ್ಕು ನಿಮಗಿಲ್ಲ; ಸಂಸತ್‌ನಲ್ಲಿ ಸಂಸದ ಆರ್ಥರ್ ಅಬ್ಬರ
ಅದಾದ ಬಳಿಕ ಮಾರ್ಚ್ 11ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಣಿಪುರ ಬಜೆಟ್ ಅನ್ನು ಮಂಡಿಸಿದ್ದಾರೆ. ಸುಮಾರು 35,103.90 ಕೋಟಿ ರೂಪಾಯಿ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ಮಂಡಿಸಿದ್ದಾರೆ.
ಇನ್ನು ಮಣಿಪುರ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ಈ ಹಿಂದಿನ 32,656.81 ಕೋಟಿ ರೂಪಾಯಿ ಬಜೆಟ್‌ಗಿಂತ ಅಧಿಕ ಬಜೆಟ್ ಅನ್ನು 2025-26ನೇ ಹಣಕಾಸು ವರ್ಷದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಹಾಗೆಯೇ ಮಣಿಪುರದ ಕಾನೂನು ಸುವ್ಯವಸ್ಥೆ, ಹಿಂಸಾಚಾರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
