ತನ್ನ ತಾಯಿಯನ್ನು ಕೊಂದು ದೇಹದ ಕೆಲವು ಭಾಗಗಳನ್ನು ತಿಂದಿದ್ದ ವ್ಯಕ್ತಿಗೆ ಕೊಲ್ಲಾಪುರ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ಇದು ನರಭಕ್ಷಕತೆಯ ಪ್ರಕರಣ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ಅಪರಾಧಿ ಸುನಿಲ್ ಕುಚ್ಕೋರವಿಗೆ ಮರಣದಂಡನೆಯನ್ನು ವಿಧಿಸಿದೆ. ಇದು ನರಭಕ್ಷಕತೆಯ ಪ್ರಕರಣವಾಗಿದ್ದು, ಇದು ಅಪರೂಪದ ಅಪರೂಪದ ವರ್ಗಕ್ಕೆ ಸೇರುತ್ತದೆ ಎಂದು ಪೀಠ ಹೇಳಿದೆ.
“ಈ ಪ್ರಕರಣವು ಅಪರೂಪದಲ್ಲಿ ಅಪರೂಪದ ಪ್ರಕರಣದ ಅಡಿಯಲ್ಲಿ ಬರುತ್ತದೆ. ಅಪರಾಧಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದು ಮಾತ್ರವಲ್ಲದೆ ಆಕೆಯ ದೇಹದ ಭಾಗಗಳಾದ ಮೆದುಳು, ಹೃದಯ, ಯಕೃತ್ತು, ಮೂತ್ರಪಿಂಡ, ಕರುಳುಗಳನ್ನು ತೆಗೆದು ಬಾಣಲೆಯಲ್ಲಿ ಬೇಯಿಸುತ್ತಿದ್ದ” ಎಂದು ಹೈಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಸಂಬಂಧಿಯನ್ನು ಕಚ್ಚಿದ ನಾಯಿಯನ್ನೇ ಕೊಂದು ತಿಂದ ವ್ಯಕ್ತಿ; ಬಂಧನ
“ತನ್ನ ತಾಯಿಯ ಪಕ್ಕೆಲುಬುಗಳನ್ನು ಬೇಯಿಸಿ ತಿಂದು, ಕೊನೆಯಲ್ಲಿ ಹೃದಯವನ್ನು ಬೇಯಿಸಿ ತಿನ್ನಲು ಹೊರಟ್ಟಿದ್ದನು. ಇದು ನರಭಕ್ಷಕತೆಯ ಪ್ರಕರಣವಾಗಿದೆ. ಇದು ನರಭಕ್ಷಕ ಪ್ರವೃತ್ತಿ ಆಗಿರುವುದರಿಂದ ಅಪರಾಧಿಯ ಸುಧಾರಣೆಗೆ ಯಾವುದೇ ಅವಕಾಶವಿಲ್ಲ. ಜೀವಾವಧಿ ಶಿಕ್ಷೆ ನೀಡಿದರೆ, ಜೈಲಿನಲ್ಲಿಯೂ ಇದೇ ರೀತಿಯ ಅಪರಾಧ ಮಾಡುವ ಅಪಾಯವಿದೆ” ಎಂದು ಕೋರ್ಟ್ ಅಭಿಪ್ರಾಯಿಸಿದೆ.
ವರದಿ ಪ್ರಕಾರ ಸುನಿಲ್ ಕುಚ್ಕೋರವಿ ತನ್ನ 63 ವರ್ಷದ ತಾಯಿ ಯಲ್ಲಮ್ಮ ರಾಮಾ ಕುಚ್ಕೋರವಿಯನ್ನು 2017ರ ಆಗಸ್ಟ್ 28ರಂದು ಕೊಲ್ಲಾಪುರ ನಗರದ ತಮ್ಮ ನಿವಾಸದಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದನು. ಬಳಿಕ ದೇಹವನ್ನು ಕತ್ತರಿಸಿ, ಬಾಣಲೆಯಲ್ಲಿ ಬೇಯಿಸಿ ಕೆಲವು ಅಂಗಗಳನ್ನು ತಿಂದಿದ್ದಾನೆ.
ಮದ್ಯ ಖರೀದಿಸಲು ತಾಯಿ ಹಣ ನೀಡಲಿಲ್ಲ ಎಂಬ ಕಾರಣದಿಂದಾಗಿ ಸುನಿಲ್ ಕುಚ್ಕೋರವಿ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಕೊಲ್ಲಾಪುರ ನ್ಯಾಯಾಲಯವು 2021ರಲ್ಲಿ ಮರಣದಂಡನೆ ವಿಧಿಸಿತ್ತು. ಅಪರಾಧಿ ತನ್ನ ವಿರುದ್ಧದ ಆರೋಪವನ್ನು ಪ್ರಶ್ನಿಸಿ ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದನು. ಈ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಕೊಲ್ಲಾಪುರ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
#deathconfirmation Bombay High Court confirms the death sentence of a Kolhapur man convicted for killing his mother and cooking her body parts.
— Bar and Bench (@barandbench) October 1, 2024
A bench of Justice Revati Mohite Dere and PK Chavan confimed the trial court order.
"We accordingly confirm the sentence accorded by… pic.twitter.com/XVzGSDkZNn
