ಟೈಗರ್‌ ಶ್ರಾಫ್‌ ಮೇಲಿನ ಗುಂಡಿನ ದಾಳಿ ಪ್ರಕರಣ; ಬಂಧಿತ ರೆಹಾನ್‌ ಬಗ್ಗೆ ತಂದೆಯಿಂದ ಮಹತ್ವದ ಮಾಹಿತಿ

Date:

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತನಾಗಿರುವ ಹರಿಯಾಣದ ಯುವಕ ರೆಹಾನ್‌ 9ನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಿದ್ದ. ಅಲ್ಲದೆ, ನಾಲ್ಕೈದು ತಿಂಗಳ ಹಿಂದೆ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಎಂದು ಆತನ ತಂದೆ ರೈಸುದ್ದೀನ್‌ ಅನ್ಸಾರಿ ತಿಳಿಸಿದ್ದಾರೆ.

- Advertisement -

ರಾಜಸ್ಥಾನದ ಕೋಟಾದಲ್ಲಿ ಭಾನುವಾರ ನಡೆದ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾದ ಮೂವರು ಶಂಕಿತರಲ್ಲಿ ಸೋನಿಪತ್‌ನ ರೆಹಾನ್‌ ಕೂಡ ಒಬ್ಬ. ಟೈಗರ್‌ ಶ್ರಾಫ್‌ ಅವರು ಪ್ರಯಾಣಿಸುತ್ತಿದ್ದ ಪುಣೆ–ಜೈಪುರ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ದಾಳಿ ನಡೆದಿತ್ತು ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಏನಿದು ʼಮಶೀನ್‌ ರೀಡಬಲ್‌ʼ ಮತದಾರರ ಪಟ್ಟಿ? ಅದನ್ನು ಹಂಚಿಕೊಳ್ಳದೆ...

17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಸೂಚಿಸಿದೆ. ವಿಪಕ್ಷಗಳ ವಿರೋಧಕ್ಕೆ ಮಣಿದು ಕೊನೆಗೂ ಓದಲು ಸಾಧ್ಯವಾಗುವ PDF ಪ್ರತಿಗಳನ್ನು ರಾಜಕೀಯ ಪಕ್ಷಗಳಿಗೆ ಒದಗಿಸುವಂತೆ ನಿರ್ದೇಶಿಸಿದೆ. ಹಾಗಾದರೆ,...

ದೈನಂದಿನ ಕೂಲಿ ಕೆಲಸ ಮಾಡುವ ರೈಸುದ್ದೀನ್‌ ಅನ್ಸಾರಿ ಅವರು ಸೋನಿಪತ್‌ನ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರೆಹಾನ್‌ಗೆ ಸುಮಾರು 18-19 ವರ್ಷ ವಯಸ್ಸಾಗಿದ್ದು, ಕಳೆದ ಹತ್ತು ವರ್ಷಗಳಿಂದ ತನ್ನೊಂದಿಗೆ ವಾಸಿಸುತ್ತಿಲ್ಲ ಎಂದು ಹೇಳಿದ್ದಾರೆ. ಪತ್ನಿಯಿಂದ ಸುಮಾರು ಒಂದು ದಶಕದ ಹಿಂದೆ ಪ್ರತ್ಯೇಕವಾಗಿದ್ದಾಗಿ ಅವರು ತಿಳಿಸಿದ್ದಾರೆ.

“ನನಗೆ ಇಬ್ಬರು ಗಂಡು ಮಕ್ಕಳು. ಆದರೆ ರೆಹಾನ್‌ ಕಳೆದ ಹತ್ತು ವರ್ಷಗಳಿಂದ ನನ್ನೊಂದಿಗೆ ವಾಸಿಸುತ್ತಿಲ್ಲ. ನಾಲ್ಕೈದು ತಿಂಗಳ ಹಿಂದೆ ಬಂದೂಕಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಾರ್ಖಾನೆಯಲ್ಲಿ ಕೆಲಸ ಮಾಡುವ ಆತನ ತಾಯಿ ಜಾಮೀನಿನ ವ್ಯವಸ್ಥೆ ಮಾಡಿದ್ದರು” ಎಂದು ರೈಸುದ್ದೀನ್‌ ಹೇಳಿದ್ದಾರೆ.

ರೆಹಾನ್‌ನ ಸ್ನೇಹಿತರ ಸಹವಾಸವೇ ಹಿಂದಿನ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಆತ ಸಿಲುಕಲು ಕಾರಣ ಎಂದು ತಂದೆ ಆರೋಪಿಸಿದ್ದಾರೆ. ರೆಹಾನ್‌ನಿಂದ ಬಂದೂಕು ವಶಪಡಿಸಿಕೊಂಡ ಬಳಿಕ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಬಂಧನದ ವಿಷಯವನ್ನು ತಮ್ಮ ಪತ್ನಿಯಿಂದ ತಿಳಿದುಕೊಂಡಿದ್ದಾಗಿ ಹೇಳಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ರೆಹಾನ್‌ ಕೆಲವು ದಿನ ತಾಯಿಯೊಂದಿಗೆ ಇದ್ದ. ನಂತರ ನ್ಯಾಯಾಲಯದ ವಿಚಾರಣೆಗೆ ಮುನ್ನವೇ ಮನೆಯಿಂದ ಹೊರಟುಹೋದ ಎಂದು ತಂದೆ ಹೇಳಿದ್ದಾರೆ.

ರೆಹಾನ್‌ನನ್ನು ತಮ್ಮ ಬಳಿಗೆ ಕಳುಹಿಸುವಂತೆ ಪತ್ನಿಗೆ ಈ ಹಿಂದೆ ತಿಳಿಸಿದ್ದೆ. ಆತನಿಗೆ ತಾಂತ್ರಿಕ ವೃತ್ತಿಯೊಂದರಲ್ಲಿ ತರಬೇತಿ ಕೊಡಿಸುವ ಉದ್ದೇಶವಿತ್ತು. ಆದರೆ, ಭಯದ ಕಾರಣದಿಂದ ಆತ ತನ್ನೊಂದಿಗೆ ವಾಸಿಸಲು ಬರಲಿಲ್ಲ ಎಂದು ರೈಸುದ್ದೀನ್‌ ತಿಳಿಸಿದ್ದಾರೆ. ರೆಹಾನ್‌ ವೆಲ್ಡಿಂಗ್‌ ಕೆಲಸ ಕಲಿತಿದ್ದ. ಗುರುಗ್ರಾಮದಲ್ಲಿ ವೆಲ್ಡರ್‌ ಆಗಿ ಕೆಲಸ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿ ಮನೆಯಿಂದ ಹೊರಡುತ್ತಿದ್ದ ಎಂದು ಅವರು ಹೇಳಿದ್ದಾರೆ.

ಟೈಗರ್‌ ಶ್ರಾಫ್‌ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಆರೋಪಿಗಳಿಗೆ ಹೆಚ್ಚಿನ ಹಣ ಹಾಗೂ ವಿದೇಶದಲ್ಲಿ ನೆಲೆಸುವ ಅವಕಾಶದ ಆಮಿಷವೊಡ್ಡಲಾಗಿತ್ತು ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. ರೆಹಾನ್‌ ಹೊರತುಪಡಿಸಿ, ಬಿಹಾರದ ಹೃತಿಕ್‌ ಎಂಬಾತನನ್ನು ಮತ್ತೊಬ್ಬ ಶಂಕಿತನಾಗಿ ಪೊಲೀಸರು ಗುರುತಿಸಿದ್ದಾರೆ. ಮೂರನೇ ಆರೋಪಿಯು ಅಪ್ರಾಪ್ತ ವಯಸ್ಕನಾಗಿರುವುದರಿಂದ ಆತನ ಗುರುತನ್ನು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಕಾರಿನ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್?‌

ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾದ ಪಾಣಿಪತ್‌ ಮೂಲದ ಅನಿಲ್‌ ಪಂಡಿತ್‌ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆತ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದಾಗಿಯೂ ಪೊಲೀಸರು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೀರ್ಥಹಳ್ಳಿ ಖಾಸಗಿ ಬಸ್‌ಗಳ ಅಕ್ರಮ ಧೋರಣೆ ಖಂಡಿಸಿ ಪ್ರತಿಭಟನೆ: ದುರ್ಗಾಂಬಾ ವಿರುದ್ಧ ಕಾನೂನು ಕ್ರಮ

ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದಲ್ಲಿ ತೀರ್ಥಹಳ್ಳಿ ಹಾಗೂ ಆಗುಂಬೆ ಭಾಗಕ್ಕೆ ತೆರಳುವ...

ಮೋದಿ ಸರ್ಕಾರದ ದುರಾಡಳಿತದ ಬಗ್ಗೆ ಹೇಳಿದ್ದಕ್ಕೆ ಚಾರಿತ್ರ್ಯ ಹರಣ; ನಿರ್ಭೀತ ಗಾಯಕಿ ನೇಹಾ ಸಿಂಗ್ ಹೋರಾಟದ ಹಾದಿ

​ಪ್ರಭುತ್ವದ ಲೋಪಗಳನ್ನು ಜನಪದದ ಸರಳ ಧಾಟಿಯಲ್ಲಿ ಪ್ರಶ್ನಿಸುವ ಹೆಣ್ಣುಮಗಳೊಬ್ಬಳ ದನಿಯನ್ನು ಅಡಗಿಸಲು...

ಮುಸ್ಲಿಂ ಕೈಗಾರಿಕೋದ್ಯಮಿಗಳ ಸಂಘದಿಂದ ಅ. 31ರಂದು ‘ಉಡಾನ್ 2026’ – ಹಲವು ಉದ್ಯಮಿಗಳು ಭಾಗಿ

ಕೈಗಾರಿಕಾ ವಲಯದ ಸವಾಲುಗಳನ್ನು ಎದುರಿಸಲು, ಸರ್ಕಾರದ ಸೂಕ್ತ ನೀತಿಗಳ ಬೆಂಬಲ ಪಡೆಯಲು...

ಮಣಿಪುರ ಹಿಂಸಾಚಾರ | ಗುಂಡೇಟಿಗೆ ಮೂವರು ಬಲಿ; ಸಿಎಂ ನಿವಾಸದ ಮುಂದೆ ಶವಗಳನ್ನಿಟ್ಟು ಪ್ರತಿಭಟನೆ

ಮಣಿಪುರದಲ್ಲಿ ಹಿಂಸಾಚಾರದ ಕೃತ್ಯ ಮುಂದುವರೆದಿದ್ದು, ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೂವರು...