ಎಲ್ಲ ರೀತಿಯ ಅಮಾನುಷ ಲೈಂಗಿಕ ದೌರ್ಜನ್ಯಗಳು ಒಳಗೊಂಡು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು 2016ರಿಂ 2022ರ ಅವಧಿಯವರೆಗೆ ಶೇ.96 ರಷ್ಟು ಹೆಚ್ಚಳವಾಗಿದೆ ಎಂದು ಮಕ್ಕಳ ಹಕ್ಕುಗಳ ಸರ್ಕಾರೇತರ ಸಂಸ್ಥೆ ಸಿಆರ್‌ವೈ ಕೈಗೊಂಡ ಸಮೀಕ್ಷೆಯನ್ನು ಉಲ್ಲೇಖಿಸಿ ಎನ್‌ಸಿಆರ್‌ಬಿ ಅಂಕಿಅಂಶಗಳು ತಿಳಿಸಿದೆ.
ಸಿಆರ್‌ವೈ ನಿರ್ದೇಶಕರಾದ ಸುಬೆಂದೋ ಭಟ್ಟಾಚಾರ್ಜಿ ಅವರ ಹೇಳಿಕೆಯ ಪ್ರಕಾರ ಸುಧಾರಿತ ಸಾರ್ವಜನಿಕ ಅರಿವು ಹೆಚ್ಚಾಗುತ್ತಿರುವುದರಿಂದ ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳ ದಾಖಲಾತಿ ಹೆಚ್ಚಾಗುತ್ತಿವೆ.
ವರದಿ ಮಾಡುತ್ತಿರುವ ಕಾರ್ಯವಿಧಾನಗಳಲ್ಲಿ ಹೆಚ್ಚುತ್ತಿರುವ ವಿಶ್ವಾಸ, ನಿಖರ ಸಹಾಯವಾಣಿಗಳು, ಆನ್‌ಲೈನ್ ಪೋರ್ಟಲ್‌ಗಳು ಹಾಗೂ ವಿಶೇಷವಾದ ಏಜನ್ಸಿಗಳು ಸಂತ್ರಸ್ತರು ಹಾಗೂ ಅವರ ಪೋಷಕರನ್ನು ಇಂತಹ ಪ್ರಕರಣಗಳನ್ನು ಹೆಚ್ಚು ದಾಖಲಿಸಲು ಪ್ರೋತ್ಸಾಹ ನೀಡುತ್ತಿವೆ.
2016ರಿಂದ 2020 ಹೊರತುಪಡಿಸಿ ಅತ್ಯಾಚಾರ ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿವೆ ಎಂದು ಸಿಆರ್‌ಐ ವರದಿಯಲ್ಲಿ ತಿಳಿಸಲಾಗಿದೆ. 2021 ಹಾಗೂ 2022ರಲ್ಲಿ ಇಂತಹ ಪ್ರಕರಣಗಳು ಶೇ. 6.9 ರಷ್ಟು ಏರಿಕೆಯಾಗಿದೆ.
ಎಲ್ಲ ರೀತಿಯ ಲೈಂಗಿಕ ಅಮಾನುಷ ಕೃತ್ಯಗಳು ಐಪಿಸಿ ಮತ್ತು ವಿಶೇಷ ಸ್ಥಳೀಯ ಕಾನೂನುಗಳನ್ನು ಒಳಗೊಂಡಿರುವುದರೊಂದಿಗೆ ಒಟ್ಟಾರೆ 2016 ರಿಂದ 2022ರವರೆಗೆ ಶೇ.96.8 ರಷ್ಟು ಏರಿಕೆಯಾಗಿವೆ ಎಂದು ಸಿಆರ್‌ವೈ ಅಂಕಿಅಂಶಗಳಲ್ಲಿ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
2022ರಲ್ಲಿ ಒಂದರಲ್ಲಿಯೇ 38,911 ಮಕ್ಕಳ ಅತ್ಯಾಚಾರ ಹಾಗೂ ಅಮಾನುಷ ಲೈಂಗಿಕ ದುಷ್ಕೃತ್ಯ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಈ ಸಂಖ್ಯೆ 36,381 ನಷ್ಟಿತ್ತು.
2020ರಲ್ಲಿ 30,705, 2019ರಲ್ಲಿ 31132, 2018ರಲ್ಲಿ 30917 ಪ್ರಕರಣಗಳು ದಾಖಲಾಗಿವೆ.2017ರಲ್ಲಿ 27,616 ಹಾಗೂ 2016ರಲ್ಲಿ 19,765 ಪ್ರಕರಣಗಳು ಪ್ರಕರಣಗಳು ದಾಖಲಾಗಿವೆ.
ಉನ್ನತ ಮಟ್ಟದ ಪ್ರಕರಣಗಳಿಗೆ ವ್ಯಾಪಕವಾದ ಮಾಧ್ಯಮ ಪ್ರಚಾರ ಹಾಗೂ ಸಮುದಾಯಗಳು ಹಾಗೂ ನಾಗರಿಕ ಸೇವಾ ಸಂಸ್ಥೆಗಳ ಸಕ್ರಿಯ ಭಾಗಿಯಾಗುವಿಕೆ ಕೂಡ ಪ್ರಕರಣ ದಾಖಲಿಸುವುದಕ್ಕೆ ಪೂರಕವಾದ ಅಂಶವಾಗಿದೆ.
ಮಕ್ಕಳ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮುಕ್ತ ಸಂಭಾಷಣೆಗಳನ್ನು ಪ್ರೋತ್ಸಾಹಿಸುವುದು ಸಂತ್ರಸ್ತರಿಗೆ ಮಾತನಾಡಲು ಮತ್ತು ಕಳಂಕದ ಭಯವಿಲ್ಲದೆ ನಿಂದನೆಯನ್ನು ವರದಿ ಮಾಡಲು ಅಧಿಕಾರ ನೀಡುತ್ತಿದೆ ಎಂದು ಸಿಆರ್‌ವೈ ನಿರ್ದೇಶಕರಾದ ಸುಬೆಂದೋ ಭಟ್ಟಾಚಾರ್ಜಿ ಹೇಳಿದ್ದಾರೆ.
ಇದಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾನೂನು ಅವಶ್ಯಕತೆಗಳ ಅನುಗುಣವಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಬಲವಾದ ಕಾರ್ಯ ವಿಧಾನಗಳನ್ನು ಅನುಷ್ಠಾನಗೊಳಿರುವುದು ಕೂಡ ಪ್ರಕರಣಗಳನ್ನು ದಾಖಲಿಸಲು ಪ್ರಮುಖ ಕಾರಣಗಳಾಗಿವೆ.
ಪ್ರತಿ ವರ್ಷ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಪರಾಧ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ, ಇದು ಐಪಿಸಿ ಅಡಿಯಲ್ಲಿ ದಾಖಲಾದ ಅಪರಾಧಗಳ ಬಗ್ಗೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಂತಹ ವಿಶೇಷ ಕಾನೂನುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
2016ರ ಮುನ್ನ ಮಕ್ಕಳ ಅತ್ಯಾಚಾರ ಪ್ರಕರಣಗಳು ಪೋಕ್ಸೊ ಕಾಯ್ದೆಯಡಿಯಲ್ಲಿ 19,756 ಪ್ರಕರಣಗಳು ಮಾತ್ರ ದಾಖಲಾಗಿತ್ತು.