ಪಶ್ಚಿಮ ಬಂಗಾಳ ಹೆಸರು ಬದಲಿಸಲು ಕೇಂದ್ರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ

Date:

Advertisements

ರಾಜ್ಯದ ಹೆಸರು ಪಶ್ಚಿಮ ಬಂಗಾಳವನ್ನು ‘ಬಾಂಗ್ಲಾ’ ಎಂದು ಬದಲಿಸಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮ್ಮ ಹೆಸರನ್ನು ಬದಲಾಯಿಸುವ ಸಾಧ್ಯವಾದ ರಾಜ್ಯಗಳ ವಿಭಾಗದಿಂದ ಪಶ್ಚಿಮ ಬಂಗಾಳವನ್ನು ಮಾತ್ರ ಏಕೆ ಹೊರಗಿಟ್ಟಿದೆ ಎಂದು ಪ್ರಶ್ನಿಸಿದರು.

ಗಾಜಿಯಾಬಾದ್ ಪುರಸಭೆ ತನ್ನ ಹೆಸರನ್ನು ಬದಲಿಸಿದ ನಿರ್ಧರಿಸಿದ ಕೆಲವು ದಿನಗಳ ನಂತರ ಈ ವಿಷಯ ಚರ್ಚೆಗೆ ಬಂದಿದೆ. ಬಿಜೆಪಿ ಸರ್ಕಾರದಲ್ಲಿ ಭಾರತದ ಹಲವು ನಗರಗಳು,ಸ್ಥಳಗಳು, ರೈಲು ನಿಲ್ದಾಣಗಳ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. 2016ರಲ್ಲಿ ಗುರುಗಾವ್ ಗುರುಗ್ರಾಮವಾಗಿದೆ, 2018ರಲ್ಲಿ ಅಲಹಾಬಾದ್ ಪ್ರಯಾಗ್‌ರಾಜ್‌ ಆಗಿದೆ. ನ್ಯೂ ರಾಯ್‌ಪುರ ಅಟಲ್‌ ನಗರ ಆಗಿದೆ ಹಾಗೂ ಫೈಜಾಬಾದ್ ಅಯೋಧ್ಯವಾಗಿರುವ ಇತರ ನಗರಗಳು.

ಟಿಎಂಸಿ ಸರ್ಕಾರ 2011ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹೆಸರನ್ನು ಬದಲಾಯಿಸಲು ಕೇಂದ್ರಕ್ಕೆ ಮನವಿ ಮಾಡಿತು. ಮೊದಲು ಪಶ್ಚಿಮ ಬಂಗಾ ಹಾಗೂ ಪಶ್ಚಿಮ ಬಂಗೋ ಎಂಬ ಹೆಸರನ್ನು ಸಲಹೆ ನೀಡಲಾಯಿತು. ಐದು ವರ್ಷಗಳ ನಂತರ ಮಮತಾ ಬ್ಯಾನರ್ಜಿ ಸರ್ಕಾರ ಬಂಗೋ ಅಥವಾ ಬಾಂಗ್ಲಾ ಎಂಬ ಹೆಸರನ್ನು ಅನುಮೋದಿಸಿತು. 2024ರ ಲೋಕಸಭಾ ಚುನಾವಣೆಗಳು ಕೆಲವೇ ತಿಂಗಳುಗಳು ಮುಂದಿರುವಾಗ ಕೇಂದ್ರಕ್ಕೆ ಮತ್ತೊಮ್ಮೆ ಹೆಸರು ಮರು ನಾಮಕರಣಕ್ಕೆ ಒತ್ತಾಯಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ

ಸಾಂಸ್ಕೃತಿಕ ಹಿನ್ನೆಲೆ ಹಾಗೂ ಪ್ರದೇಶಗಳ ಭಾಷಾ ಪ್ರಸ್ತುತತೆಯ ಮೇಲೆ ಬಾಂಬೆಯು ಮುಂಬೈ ಎಂದು ಹಾಗೂ ಒರಿಸ್ಸಾವು ಒಡಿಶಾ ಆಗಿ ಬದಲಾಗಿರುವ ಬಗ್ಗೆ ತಮ್ಮ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

“ ನಾವು ಈಗಾಗಲೇ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಿದ್ದೇವೆ.ಬಹಳ ಸಮಯದಿಂದಲೂ ಕೇಂದ್ರವು ನಮ್ಮ ರಾಜ್ಯವನ್ನು ಬಾಂಗ್ಲಾ ಎಂದು ಬದಲಾಯಿಸಿಲ್ಲ. ವರ್ಣ ಮಾಲೆಯ ಪ್ರಕಾರ ಕೂಡ ‘ಬಾಂಗ್ಲಾ’ ಹೆಸರು ಮುಂಚೂಣಿಯ ಆದ್ಯತೆಯಾಗಿದೆ. ಪಶ್ಚಿಮ ಬಂಗಾಳವು ಆದ್ಯತೆಯಲ್ಲಿ ಕೊನೆಯಾಗಿರುತ್ತದೆ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

“ ನಮ್ಮ ಹೆಸರು ‘ಬಾಂಗ್ಲಾ’ ಎಂದು ಬದಲಾದರೆ ನಮ್ಮ ಮಕ್ಕಳು ಆದ್ಯತೆಯ ಮೇರೆಗೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಹಾಗೂ ವಿದೇಶಗಳಲ್ಲಿ ವ್ಯಾಸಂಗ ಮಾಡಲು ತೆರಳಬಹುದು. ಪ್ರತಿ ಸಭೆಯಲ್ಲಿಯೂ ನಾವು ಕೊನೆಯವರೆಗೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೆಸರು ಬದಲಾದರೆ ಮೊದಲ ಪ್ರಾತಿನಿಧ್ಯ ಸಿಗುತ್ತದೆ” ಎಂದು ಹೇಳಿದರು.

ರಾಜ್ಯದ ಹೆಸರಿನಲ್ಲಿ “ಪಶ್ಚಿಮ” ಎಂಬ ಪದವನ್ನು ಜೋಡಿಸುವ ಅಗತ್ಯವಿಲ್ಲ ಎಂದು ಪಾಕಿಸ್ತಾನವನ್ನು ಉದಾಹರಣೆಯಾಗಿ ನೀಡಿದ ಮಮತಾ, ಪಾಕಿಸ್ತಾನದಲ್ಲೂ ಪಂಜಾಬ್ ಪ್ರಾಂತ್ಯವಿದೆ. ಭಾರತದಲ್ಲೂ ಅದೇ ಹೆಸರಿನ ರಾಜ್ಯವಿದೆ. ಆದರೆ ನಮ್ಮ ದೇಶದ ಹೆಸರನ್ನು ಇಲ್ಲಿಯವರೆಗೆ ಬದಲಾಯಿಸಲಾಗಿಲ್ಲ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X