ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿ, ಹಲವು ಬಾರಿ ಪರದಾಟ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಿದ್ದ ಕಾಮೆಡಿಯನ್ ಶ್ಯಾಮ್ ರಂಗೀಲಾ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿಯವರ ಧ್ವನಿಯನ್ನು ಅನುಕರಿಸುವ ಮೂಲಕ ದೇಶದಲ್ಲೆಡೆ ಸುದ್ದಿಯಾಗಿದ್ದ ಶ್ಯಾಮ್ ರಂಗೀಲಾ, “ತಾನು ನಾಮಪತ್ರದ ಅರ್ಜಿಯನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದೇನೆ, ಅಧಿಕಾರಿಗಳು ನಾಮಪತ್ರದ ಅರ್ಜಿಯನ್ನು ಕೊಡುತ್ತಿಲ್ಲ” ಎಂದು ಆರೋಪಿಸಿದ್ದರು.
आप सभी के प्यार और सहयोग से नियमानुसार सभी आवश्यकताओं की पूर्ति करते हुए मैंने नामांकन दाखिल कर दिया है, मेरा इस देश के लोकतंत्र पर अभी भी पुरा भरोसा है । अब आगे के दो तीन दिन महत्वपूर्ण होंगे।
आप सभी का सहयोग के लिए बहुत धन्यवाद ।
हमारे लोकतंत्र के पहरी सभी चुनाव अधिकारीयों के… pic.twitter.com/JyIoFGDNli— Shyam Rangeela (@ShyamRangeela) May 14, 2024
ಇದು ಬೆಳವಣಿಗೆ ಸುದ್ದಿಯಾಗಿದ್ದ ಬಳಿಕ ನಾಮಪತ್ರವನ್ನು ಸ್ವೀಕರಿಸಿದ್ದರು. ಇದರಿಂದ ಖುಷಿಗೊಂಡಿದ್ದ ಶ್ಯಾಮ್ ರಂಗೀಲಾ ಚುನಾವಣಾಧಿಕಾರಿಯ ಕಚೇರಿಯಿಂದ ಹೊರಬರುತ್ತಿದ್ದಂತೆಯೇ, ನಾಮಪತ್ರ ಸಲ್ಲಿಸಿರುವುದೇ ನಮ್ಮ ವಿಜಯ ಎಂದು ಹೇಳುತ್ತಾ, ವಿಕ್ಟರಿ ಚಿಹ್ನೆಯನ್ನು ಪ್ರದರ್ಶಿಸಿದ್ದರು. ಆದರೆ, ನಾಮಪತ್ರ ಸಲ್ಲಿಸಿ 24 ಗಂಟೆಯೊಳಗೆ ತಿರಸ್ಕರಿಸಲಾಗಿದೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿ 12 ನಿಮಿಷದ ವಿಡಿಯೋ ಹಂಚಿಕೊಂಡಿರುವ ಶ್ಯಾಮ್ ರಂಗೀಲಾ, “ಕೇವಲ 24 ಗಂಟೆಯೊಳಗೆ ನನ್ನ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ನನ್ನನ್ನು ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಿಡುವುದಿಲ್ಲ ಎಂಬುದು ಈಗಾಗಲೇ ನಿರ್ಧರಿಸಲಾಗಿದೆ ಎಂದು ಈಗ ಸ್ಪಷ್ಟವಾಗಿದೆ. ಮನಸ್ಸು ಖಂಡಿತವಾಗಿಯೂ ಒಡೆದಿದೆ. ಆದರೆ ಉತ್ಸಾಹವು ಮುರಿದು ಹೋಗಿಲ್ಲ. ನಿಮ್ಮ ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಮಾಧ್ಯಮಗಳು ಮತ್ತು ಹಿತೈಷಿಗಳು ದಯವಿಟ್ಟು ಈಗ ಕರೆ ಮಾಡಬೇಡಿ ಎಂದು ನಾನು ವಿನಂತಿಸುತ್ತೇನೆ. ನನ್ನ ಬಳಿ ಏನೇ ಮಾಹಿತಿ ಇದ್ದರೂ ಅದನ್ನು ಟ್ವೀಟ್ ಮೂಲಕವೇ ಹಂಚಿಕೊಳ್ಳುತ್ತಲೇ ಇರುತ್ತೇನೆ. ಸ್ವಲ್ಪ ಸಮಯದವರೆಗೆ ಮಾತನಾಡಬೇಕು ಎಂದು ನನಗೆ ಅನಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
वाराणसी से नहीं लड़ने देंगे ये तय था, अब साफ़ हो गया
दिल ज़रूर टूट गया है, हौंसला नहीं टूटा है ।
आप सबके सहयोग के लिए शुक्रिया ।
मीडिया और शुभचिंतकों से निवेदन है कृपया अभी कॉल ना करें, जो भी सूचना होगी यहाँ देता रहूँगा, शायद अब थोड़ी देर बातचीत करने की इच्छा नहीं है pic.twitter.com/aB6AZqLGqv— Shyam Rangeela (@ShyamRangeela) May 15, 2024
ವಿಡಿಯೋದಲ್ಲಿ ಭಾವುಕರಾದಂತೆ ಮಾತನಾಡಿರುವ ಶ್ಯಾಮ್ ರಂಗೀಲಾ, “ಯಾಕೆ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಕೇಳಿದ್ದಕ್ಕೆ ಚುನಾವಣಾಧಿಕಾರಿಗಳು, ‘ನೀವು ನಾಮಪತ್ರ ಸಲ್ಲಿಸಿದ್ದ ಸಂದರ್ಭದಲ್ಲಿ ಪ್ರಮಾಣ ವಚನ ಮಾಡಿರಲಿಲ್ಲ’ ಎಂದು ತಿಳಿಸಿದ್ದಾರೆ. ಒಂದು ವೇಳೆ ನಾಮಪತ್ರ ತಿರಸ್ಕರಿಸಬೇಕೆಂದು ಅದಾಗಲೇ ನಿರ್ಧರಿಸಿದ್ದಿದ್ದರೆ ಸ್ವೀಕರಿಸುವ ನಾಟಕ ಯಾಕೆ ಬೇಕಿತ್ತು” ಎಂದು ಚುನಾವಣಾಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕಿ, ಪ್ರಶ್ನಿಸಿದ್ದಾರೆ.
“ಮೋದೀಜಿಯವರು ಕಣ್ಣೀರು ಹಾಕಿದಂತೆ ನಟಿಸಬಹುದು. ಆದರೆ, ನಿಜ ಹೇಳಬೇಕೆಂದರೆ ನನಗೆ ಕಣ್ಣೀರು ಬರುತ್ತಿದೆ. ಆದರೆ, ನಾನು ಕಣ್ಣೀರು ಹಾಕಲು ಬಯಸುವುದಿಲ್ಲ. ಪ್ರಜಾಪ್ರಭುತ್ವವನ್ನು ಕೊಲ್ಲುವಂತಹ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ. ಆ ದೃಶ್ಯವನ್ನು ನಾನಿಂದು ವಾರಣಾಸಿಯಲ್ಲಿ ಕಣ್ಣಾರೆ ಕಂಡೆ. ಆದರೆ ಇನ್ನೂ ಹತ್ಯೆಯಾಗಿಲ್ಲ. ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲು ದೇಶದ ಜನರ ಬಿಡುವುದಿಲ್ಲ ಎಂಬ ಭರವಸೆ ನನಗಿದೆ” ಎಂದು ಬೇಸರದಿಂದ ಶ್ಯಾಮ್ ರಂಗೀಲಾ ಹೇಳಿಕೆ ನೀಡಿದ್ದಾರೆ.

ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ ಹಲವರು ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ. “ಶ್ಯಾಮ್ ರಂಗೀಲಾಗೆ ಭಾರೀ ಜನಬೆಂಬಲ ಸಿಕ್ಕಿತ್ತು. ಮೋದಿಗೆ ಸೋಲಿನ ಭಯ ಕಾಡಿದೆ. ಈ ಬಾರಿ ವಾರಣಾಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶ್ಯಾಮ್ ರಂಗೀಲಾ ಹೆಚ್ಚಿನ ಮತ ಪಡೆಯಲಿದ್ದಾರೆ. ಇದರಿಂದ ಮೋದಿ ಅಂತರ ಗಣನೀಯವಾಗಿ ಕುಸಿಯಲಿದೆ. ಯುವ ಅಭ್ಯರ್ಥಿಯ ನಾಮಪತ್ರವನ್ನೇ ತಿರಸ್ಕರಿಸಿದ್ದಾರೆ” ಎಂದು ಪೋಸ್ಟ್ ಹಾಕುತ್ತಿದ್ದಾರೆ.
श्याम रंगीला का नामांकन रद्द हुआ ! pic.twitter.com/dw9KsEUYQZ
— Cartoonist Rakesh Ranjan (@cartoonistrrs) May 15, 2024
ಪ್ರಧಾನಿ ಮೋದಿ ಹೊರತುಪಡಿಸಿ ಕಾಂಗ್ರೆಸ್-ಎಸ್‌ಪಿ ಮೈತ್ರಿಕೂಟದ ಇಂಡಿಯಾ ಮೈತ್ರಿಕೂಟದಿಂದ ಅಜಯ್ ರೈ ಮತ್ತು ಬಿಎಸ್‌ಪಿಯ ಅತಹರ್ ಜಮಾಲ್ ಲಾರಿ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ವಾರಣಾಸಿಯಲ್ಲಿ ಜೂ.1ರಂದು 7ನೇ ಮತ್ತು ಅಂತಿಮ ಹಂತದಲ್ಲಿ ಮತದಾನ ನಡೆಯಲಿದೆ.
